ಗಂಭೀರ ಅಪಘಾತ.. ಪತ್ನಿಗೆ ರಕ್ತಸ್ರಾವವಾಗುತ್ತಿದ್ದರೂ ನಾನು ದೇವರಲ್ಲಿ ಪ್ರಾರ್ಥಿಸಲಿಲ್ಲ; ರಾಜಮೌಳಿ

ಖ್ಯಾತ ನಿರ್ದೇಶಕ ರಾಜಮೌಳಿ ತಮ್ಮ ಸಿನಿಮಾ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿದ್ದಾರೆ. ಸೋಲಿಲ್ಲದ ಸರದಾರ ಎನ್ನುವ ಬಿರುದು ಪಡೆದಿದ್ದಾರೆ. 'RRR' ಬಳಿಕ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೆಲ್ಲದರ ನಡುವೆ ಮೌಳಿ ಜೀವನಾಧರಿತ ಡಾಕ್ಯುಮೆಂಟರಿ ರಿಲೀಸ್ ಆಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ 'ಮಾಡರ್ನ್ ಮಾಸ್ಟರ್ಸ್'; ಎಸ್‌. ಎಸ್ ರಾಜಮೌಳಿ ಹೆಸರಿನಲ್ಲಿ ಡಾಕ್ಯುಮೆಂಟರಿ ಸ್ಟ್ರೀಮಿಂಗ್ ಆಗುತ್ತಿದೆ. ಇದರಲ್ಲಿ ಜಕ್ಕಣ್ಣ ಜೀವನದ ಸಾಕಷ್ಟು ಸಂಗತಿಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಪ್ರಭಾಸ್, ರಾಮ್‌ಚರಣ್, ತಾರಕ್, ಕರಣ್ ಜೋಹರ್, ಜೇಮ್ಸ್ ಕ್ಯಾಮರೂನ್ ಸೇರಿ ಹಲವರು ಮೌಳಿ ಸಾಧನೆ ಬಗ್ಗೆ ಮಾತನಾಡಿದ್ದಾರೆ. ಇನ್ನು ಕೆಲವೆಡೆ ಜಕ್ಕಣ್ಣ ತಮ್ಮ ಕುರಿತ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

SS Rajamouli says why he didnt pray to God even his wife Rama was injured in an accident

ಅಲ್ಲಲ್ಲಿ ಸಂದರ್ಶನದ ರೀತಿ ರಾಜಮೌಳಿ ಮಾತನಾಡಿ ತಮ್ಮ ಮನದಾಳ ತೆರೆದಿಟ್ಟಿದ್ದಾರೆ. ಸಿನಿಮಾ ಬಿಟ್ಟು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಇನ್ನು ರಾಜಮೌಳಿ ತಮ್ಮನ್ನು ತಾವು ನಾಸ್ತಿಕ ಎಂದು ಹೇಳಿಕೊಳ್ಳುತ್ತಾರೆ. ಸದ್ಯಕ್ಕೆ ಎಲ್ಲರೂ ನಂಬಿರುವ ದೇವರು, ಧರ್ಮದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಜಕ್ಕಣ್ಣ ತಮ್ಮ ಸಿನಿಮಾಗಳಲ್ಲಿ ದೇವರ ಕುರಿತು ಒಂದಾದರೂ ಸನ್ನಿವೇಶ ಇಟ್ಟಿರುತ್ತಾರೆ. 'ಬಾಹುಬಲಿ'-1 ಚಿತ್ರದಲ್ಲಿ ನಾಯಕ ಶಿವಲಿಂಗಕ್ಕೆ ಪೂಜೆ ಮಾಡುವುದನ್ನು ಬಹಳ ಸೊಗಸಾಗಿ ತೆರೆಗೆ ತಂದಿದ್ದರು. ಆದರೆ ನಾಕ್ತಿಕ ಎಂದು ಹೇಳಿಕೊಳ್ಳುವ ಜಕ್ಕಣ್ಣ ತಮ್ಮ ಸಿನಿಮಾಗಳಲ್ಲಿ ಅಂತಹ ಸನ್ನಿವೇಶಗಳನ್ನು ಚಿತ್ರಿಸುವ ಬಗ್ಗೆಯೂ ಕೆಲವರು ಚಕಾರ ಎತ್ತಿದ್ದರು. ಇದೀಗ ಡಾಕ್ಯುಮೆಂಟರಿಯಲ್ಲಿ ಇಂತದ್ದೇ ಇಂಟ್ರೆಸ್ಟಿಂಗ್ ವಿಚಾರವನ್ನು ಮೌಳಿ ತೆರೆದಿಟ್ಟಿದ್ದಾರೆ.

"ಮಗಧೀರ ಸಿನಿಮಾ ಸಮಯದಲ್ಲಿ ನಮಗೆ ದೊಡ್ಡ ಅಪಘಾತವಾಯಿತು. ಒಂದು ಏರಿಯಾದಲ್ಲಿ ವಾಹನದಲ್ಲಿ ಹೋಗುತ್ತಿದ್ದಾಗ ದಿಢೀರನೆ ಅಪಘಾತವಾಗಿ ನಮ್ಮವರಿಗೆ ಪೆಟ್ಟಾಯಿತು. ಮುಖ್ಯವಾಗಿ ನನ್ನ ಪತ್ನಿ ರಮಾ ಗಂಭೀರವಾಗಿ ಗಾಯಗೊಂಡಿದ್ದರು. ಆಕೆಯ ಕೆಲ ಬೆನ್ನಿನ ಭಾಗದಲ್ಲಿ ಸ್ಪರ್ಶವಿಲ್ಲದಂತೆ ಆಯಿತು. ಒಂದರ್ಥದಲ್ಲಿ ಪಾರ್ಶ್ವವಾಯು ಎನ್ನುವಂತಾಯಿತು"

SS Rajamouli says why he didnt pray to God even his wife Rama was injured in an accident

"ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇಲ್ಲ. ಏನು ಮಾಡಬೇಕೆಂದು ನನಗೆ ಅರ್ಥವಾಗಲಿಲ್ಲ, ನಾನು ತಕ್ಷಣ ನನಗೆ ತಿಳಿದಿರುವ ಎಲ್ಲಾ ವೈದ್ಯರಿಗೆ ಕರೆ ಮಾಡಿದೆ. ವೈದ್ಯರನ್ನು ಕರೆಯುವಾಗ ನಾನು ನನ್ನ ಹೆಂಡತಿಯನ್ನು ನೋಡುತ್ತಾ ಅಳುತ್ತಿದ್ದೆ. ಅದೇ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ದೇವರನ್ನು ಪ್ರಾರ್ಥಿಸಬೇಕು ಎನ್ನುವ ಆಲೋಚನೆ ಬಂದಂತಾಗುತ್ತಿತ್ತು. ಆದರೆ ನಾನು ಪ್ರಾರ್ಥಿಸಲಿಲ್ಲ. ನಾನು ಅಕ್ಷರಶಃ, ಉದ್ರಿಕ್ತನಾಗಿ ಅಳುತ್ತಿದ್ದೆ. ಮತ್ತೊಂದು ಕಡೆ ವೈದ್ಯರನ್ನು ಕರೆದು ಚಿಕಿತ್ಸೆ ಕೊಡಿಸಿದೆ"

ಒಂದು ಸಮಯದಲ್ಲಿ, ನಾನು ಕರ್ಮ ಯೋಗವನ್ನು ನನ್ನ ಜೀವನ ವಿಧಾನವಾಗಿ ಆರಿಸಿಕೊಂಡೆ. ನನ್ನ ಕೆಲಸವೇ ನನ್ನ ದೇವರು. ನನ್ನ ಕೆಲಸ ಸಿನಿಮಾ" ಎಂದು ವಿವರಿಸಿದ್ದಾರೆ. ನಿಜ ಹೇಳಬೇಕು ಅಂದ್ರೆ ದೇವರಲ್ಲಿ ಬಹಳ ನಂಬಿಕೆ ಇರುವ, ದೇವರನ್ನು ಬಹಳ ಆರಾಧಿಸುವ ಕುಟುಂಬದಲ್ಲಿ ಬೆಳೆದವರು ರಾಜಮೌಳಿ.

ಚಿಕ್ಕಂದಿನಲ್ಲಿ ಮಹಾನ್ ದೇವರ ಭಕ್ತರಾಗಿದ್ದರಂತೆ ಜಕ್ಕಣ್ಣ. ಆದರೆ ಬರಬರುತ್ತಾ ತಮ್ಮ ಆಲೋಚನೆಯನ್ನು ಬದಲಿಸಿಕೊಂಡಿದ್ದಾಗಿ ಹಿಂದೆ ಸಂದರ್ಶನದಲ್ಲಿ ವಿವರಿಸಿದ್ದರು. ಸದ್ಯ ಮುಂದಿನ ಸಿನಿಮಾ ಕೆಲಸಗಳಲ್ಲಿ ಮೌಳಿ ಬ್ಯುಸಿಯಾಗಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ತೆರೆಗೆ ತರಲುವ ಪ್ರಯತ್ನದಲ್ಲಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ.

More from Filmibeat

English summary
Do you know director Rajamouli is an atheist?
Read more about: telugu ott rajamouli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X