For Quick Alerts
  ALLOW NOTIFICATIONS  
  For Daily Alerts

  RRR ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣ: ಚಿತ್ರ ಹಂಚಿಕೊಂಡ ರಾಜಮೌಳಿ

  |

  ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ RRR ಸಿನಿಮಾ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣಕ್ಕೆ ಬಂದು ತಲುಪಿದೆ.

  ಕೊರೊನಾ ಕಾರಣಕ್ಕೆ ಬಹು ತಡವಾಗಿ ಚಿತ್ರೀಕರಣ ಪ್ರಾರಂಭವಾದರೂ ಸಹ ಚಿತ್ರೀಕರಣ ಶೆಡ್ಯೂಲ್ ಹಾಗೂ ಸ್ಥಳಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು, ಅಂತೂ ಬೇಗನೇ ಚಿತ್ರೀಕರಣದ ಕೊನೆಯ ಹಂತಕ್ಕೆ ಬಂದು ತಲುಪಿದ್ದಾರೆ ರಾಜಮೌಳಿ.

  ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿರುವುದಾಗಿ ರಾಜಮೌಳಿ ಸ್ವತಃ ಟ್ವಿಟ್ಟರ್‌ ನಲ್ಲಿ ಹೇಳಿದ್ದು, ಚಿತ್ರವೊಂದನ್ನು ಸಹ ಹಂಚಿಕೊಂಡಿದ್ದಾರೆ.

  ಗಾಯಗೊಂಡಿರುವ ಎರಡು ಕೈಗಳು ಪರಸ್ಪರ ಒಂದಕ್ಕೊಂದು ಬೆಂಬಲ ನೀಡುವಂತೆ ಪಟ್ಟಾಗಿ ಹಿಡಿದುಕೊಂಡಿರುವ ಚಿತ್ರವನ್ನು ರಾಜಮೌಳಿ ಹಂಚಿಕೊಂಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಅದು ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಪರಸ್ಪರ ಕೈ ಹಿಡಿದುಕೊಂಡಿರುವ ಚಿತ್ರವೇ ಆಗಿದೆ.

  ರಾಮರಾಜು-ಭೀಮ್ ಒಂದಾಗಿದ್ದಾರೆ: ರಾಜಮೌಳಿ

  ರಾಮರಾಜು-ಭೀಮ್ ಒಂದಾಗಿದ್ದಾರೆ: ರಾಜಮೌಳಿ

  'ಏನು ಸಾಧಿಸಬೇಕು ಎಂದುಕೊಂಡಿದ್ದೊ ಅದರ ಗುರಿ ಸಾಧನೆಗಾಗಿ ನನ್ನ ರಾಮರಾಜು ಮತ್ತು ಭೀಮ್ ಒಟ್ಟಿಗೆ ಒಂದುಗೂಡಿದ್ದಾರೆ' ಎಂದು ಚಿತ್ರಕ್ಕೆ ಒಕ್ಕಣೆ ಬರೆದಿದ್ದಾರೆ ನಿರ್ದೇಶಕ ರಾಜಮೌಳಿ. ಚಿತ್ರ ಸಖತ್ ವೈರಲ್ ಆಗಿದೆ. ಸಿನಿಮಾ ಬಿಡುಗಡೆ ಯಾವಾಗ ಎಂದು ಹಲವರು ಕಮೆಂಟ್‌ನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ.

  ಜೂ.ಎನ್‌ಟಿಆರ್-ರಾಮ್ ಚರಣ್ ಒಟ್ಟಿಗೆ ನಟನೆ

  ಜೂ.ಎನ್‌ಟಿಆರ್-ರಾಮ್ ಚರಣ್ ಒಟ್ಟಿಗೆ ನಟನೆ

  ಆರ್‌ಆರ್‌ಆರ್ ಸಿನಿಮಾದಲ್ಲಿ ನಟ ಜೂ.ಎನ್‌ಟಿಆರ್ ಕೋಮರಂ ಭೀಮ್ ಆಗಿ ನಟಿಸಿದ್ದರೆ, ರಾಮ್ ಚರಣ್ ತೇಜ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸಿದ್ದಾರೆ. ಈ ಇಬ್ಬರೂ ತೆಲುಗು ರಾಜ್ಯಗಳ ಕ್ರಾಂತಿಕಾರಿ ಹೋರಾಟಗಾರರಾಗಿದ್ದವರು.

  ಆಲಿಯಾ ಭಟ್, ಅಜಯ್ ದೇವಗನ್ ನಟಿಸಿದ್ದಾರೆ

  ಆಲಿಯಾ ಭಟ್, ಅಜಯ್ ದೇವಗನ್ ನಟಿಸಿದ್ದಾರೆ

  ಸಿನಿಮಾದಲ್ಲಿ ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್, ವಿದೇಶಿ ನಟಿ ಒಲಿವಿಯಾ ಮೋರಿಸ್, ರೇಯ್ ಸ್ಟಿವನ್‌ಸನ್ ಇನ್ನೂ ಹಲವರು ನಟಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದ ಕತೆಯಾದ್ದರಿಂದ ಭಾರಿ ಸೆಟ್‌ಗಳು, ಗ್ರಾಫಿಕ್ಸ್‌ಗಳು ಸಿನಿಮಾದಲ್ಲಿವೆ. ಇಬ್ಬರು ಆಕ್ಷನ್ ಹೀರೋಗಳು ಇರುವ ಕಾರಣ ಭರಪೂರ ಆಕ್ಷನ್ ದೃಶ್ಯಗಳು ಸಹ ಸಿನಿಮಾದಲ್ಲಿರಲಿವೆ.

  ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada
  ಕೋಮರಂ ಭೀಮ್ ಪಾತ್ರದ ಬಗ್ಗೆ ವಿವಾದ

  ಕೋಮರಂ ಭೀಮ್ ಪಾತ್ರದ ಬಗ್ಗೆ ವಿವಾದ

  ಜೂ.ಎನ್‌ಟಿಆರ್ ನಿರ್ವಹಿಸಿರುವ ಕೋಮರಂ ಭೀಮ್ ಪಾತ್ರದ ಬಗ್ಗೆ ಈಗಾಗಲೇ ವಿವಾದ ಎದ್ದಿದೆ. ಕೋರಂ ಭೀಮ್ ಅನ್ನು ಮುಸ್ಲಿಂ ಆಗಿ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಆತ ಹಿಂದು ಆಗಿದ್ದು, ಮುಸ್ಲಿಂ ಆಡಳಿತಶಾಹಿಗಳ ವಿರುದ್ಧ ಹೋರಾಡಿದವನಾಗಿದ್ದ ಎಂದು ವಾದ ಮಾಡಲಾಗಿದೆ.

  English summary
  Director SS Rajamouli Shares a picture of RRR Movie Climax Shoot. Jr NTR and Ram Charan Teja acting together in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X