For Quick Alerts
  ALLOW NOTIFICATIONS  
  For Daily Alerts

  ದೆಹಲಿ ವಿಮಾನನಿಲ್ದಾಣದ ಕೆಟ್ಟ ಅನುಭವ ಬಿಚ್ಚಿಟ್ಟ ಖ್ಯಾತ ನಿರ್ದೇಶಕ ರಾಜಮೌಳಿ

  |

  ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ದೆಹಲಿ ಏರ್ ಪೋರ್ಟ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಏರ್ ಅವ್ಯವಸ್ಥೆ ಮತ್ತು ಹೊರಗಡೆ ಬೀದಿನಾಯಿಗಳ ಕಾಟದ ಬಗ್ಗೆ ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಬೆಳಗ್ಗೆ ದೆಹಲಿ ಏರ್ಪೋರ್ಟ್‌ಗೆ ಬಂದ ರಾಜಮೌಳಿ, ಅಲ್ಲಿನ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಏರ್ಪೋರ್ಟ್‌ಗೆ ಬಂದ ಪ್ರಯಾಣಿಕರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟ್ ಫಾರ್ಮ್ ಫಿಲ್ ಮಾಡಲು ಕೊಡುತ್ತಾರೆ. ಆದರೆ ಅಲ್ಲಿ ಕುಳಿತುಕೊಂಡು ಫಿಲ್ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾರೆ.

  ಈ ಬಗ್ಗೆ ಟ್ವೀಟ್ ಮಾಡಿರುವ ರಾಜಮೌಳಿ, "ಡಿಯರ್ ದೆಹಲಿ ಏರ್ಪೋಟ್, ನಾನು ಬೆಳಗ್ಗೆ 1 ಗಂಟೆಗೆ ಲುಫ್ಥಾನ್ಸಾ ವಿಮಾನದಲ್ಲಿ ಬಂದು ಇಳಿದೆ. ಆರ್ ಟಿ ಪಿ ಸಿ ಆರ್ ಟೆಸ್ಟ್ ಫಾರ್ಮ್ ಭರ್ತಿ ಮಾಡಲು ಕೊಡುತ್ತಾರೆ. ಎಲ್ಲಾ ಪ್ರಯಾಣಿಕರು ಕೆಳಗೆ ಕುಳಿತುಕೊಂಡು ಫಾರ್ಮ್ ಭರ್ತಿ ಮಾಡುತ್ತಾರೆ ಅಥವಾ ಗೋಡೆಯ ಮೇಲೆ ಇಟ್ಟುಕೊಂಡು ಫಿಲ್ ಮಾಡುತ್ತಾರೆ. ಈ ವ್ಯವಸ್ಥೆ ಸರಿಯಿಲ್ಲ. ಟೇಬಲ್‌ಗಳನ್ನು ಒದಗಿಸುವುದು ಸರಳ ಸೇವೆಯಾಗಿದೆ" ಎಂದು ಹೇಳಿದ್ದಾರೆ.

  "ಏರ್ಪೋಟ್ ನಿಂದ ಹೊರ ಬರುವ ಗೇಟ್ ನಲ್ಲಿ ಬೀದಿ ನಾಯಿಗಳ ಕಾಟ. ಮೊದಲೇ ವಿದೇಶಿಗರಿಗೆ ಭಾರತದ ಬಗ್ಗೆ ಉತ್ತಮ ಆಕರ್ಷಣೆ ಇಲ್ಲ. ದಯವಿಟ್ಟು ಇದನ್ನು ಗಮನಿಸಿ" ಎಂದು ಹೇಳಿದ್ದಾರೆ.

  ರಾಜಮೌಳಿ ಟ್ವೀಟ್‌ಗೆ ಅನೇಕರು ಬೆಂಬಲ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರಿಗೂ ಇದೇ ಅನುಭವವಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಾಜಮೌಳಿ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  SS Rajamouli shares his bad experience of Delhi Airport
  ಸಿಂಪಲ್ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದ Yash Radhika ! | Yash House Warming Ceremony | Filmibeat Kannada

  ಈಗಾಗಲೇ RRR ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಟಾಕಿ ಭಾಗ ಮುಕ್ತಾಯವಾಗಲಿದೆ ಎಂದಿದ್ದಾರೆ. ಇನ್ನು ಹಾಡಿನ ಚಿತ್ರೀಕರಣ ಬಾಕಿ ಇದೆ ಎಂದು ಸಿನಿಮಾತಂಡ ಮಾಹಿತಿ ಹಂಚಿಕೊಂಡಿದೆ.

  English summary
  Telugu Director SS Rajamouli shares his bad experience of Delhi Airport.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X