ಕಿಚ್ಚ ಸುದೀಪ್ ಜೊತೆ ಮತ್ತೆ ಕೆಲಸ ಮಾಡಲು ನನಗಿಷ್ಟ

<ul id="pagination-digg"><li class="next"><a href="/news/kicha-sudeep-birthday-nm-kumar-movie-chakravyooha-067759.html">Next »</a></li></ul>

ನಿನ್ನೆಯಷ್ಟೇ (02, ಸೆಪ್ಟೆಂಬರ್ 2012) ತಮ್ಮ ಹುಟ್ಟುಹಬ್ಬ ಮುಗಿಸಿಕೊಂಡಿರುವ ಕನ್ನಡದ ಹೆಮ್ಮೆಯ ನಟ ಕಿಚ್ಚ ಸುದೀಪ್ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಹೊಸದೊಂದು ಸಂತೋಷದ ಕಾದಿದೆ. ಈ ಖುಷಿಯ ಸಮಚಾರವನ್ನು ನೀಡಿದವರು ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ. "ನಾನು ಮತ್ತೆ ಕಿಚ್ಚ ಸುದೀಪ್ ಅವರ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆ" ಎಂದಿದ್ದಾರೆ ರಾಜಮೌಳಿ.

ಸುದೀಪ್ ಹಾಗೂ ರಾಜಮೌಳಿ ಸಂಗಮದ ತೆಲುಗು ಚಿತ್ರ 'ಈಗ', 50 ದಿನಗಳನ್ನು ದಾಖಲೆ ಗಳಿಕೆಯೊಂದಿಗೆ ಯಶಸ್ವಿಯಾಗಿ ಮುಗಿಸಿದೆ. ಇವರಿಬ್ಬರ ಜೋಡಿಯ ಚಿತ್ರ ಈಗ, ಗಳಿಕೆಗಿಂತಲೂ ಮಿಗಿಲಾಗಿ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಗಳಿಸಿದೆ. ಬಾಕ್ಸ್ ಆಫಿಸ್ ಗಳಿಕೆ ಕೂಡ ಬರೋಬ್ಬರಿ ರು. 100 ಕೋಟಿ ದಾಟಿದೆ. ಅಲ್ಲಿಗೆ ಈಗ ಚಿತ್ರದ ಅಭೂತಪೂರ್ವ ಯಶಸ್ಸಿಗೆ ಬೇರೆ ಸಾಕ್ಷಿ ಬೇಕಿಲ್ಲ. ಇಂಥಹ ಸಮಯದಲ್ಲಿ ಮೇರು ನಿರ್ದೇಶಕ ರಾಜಮೌಳಿ ಈ ಮಾತು ಹೇಳಿರುವುದು ವಿಶೇಷ.

ನಿನ್ನೆ ನಡೆದ ಕಿಚ್ಚ ಸುದೀಪ್ ಹುಟ್ಟುಹಬ್ಬದ ನಿಮಿತ್ತ ಘಟಾನುಘಟಿಗಳು ಸುದೀಪ್ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಈ ವೇಳೆ ರಾಜಮೌಳಿ ಕಿಚ್ಚನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ, "ನನಗೆ ಮತ್ತೆ ಸುದೀಪ್ ಅವರ ಜೊತೆ ಚಿತ್ರ ಮಾಡುವ ಆಸೆಯಿದೆ" ಎಂದಿದ್ದಾರೆ. ಈ ಮಾತನ್ನು ಅವರು ಹೇಳಿದ್ದು ಟಿವಿ ವಾಹಿನಿಯೊಂದರ ಮೂಲಕ. ಅದನ್ನು ಕೇಳಿದ ಸುದೀಪ್ ಅಭಿಮಾನಿಗಳು ಫುಲ್ ಖುಷ್.

ಮುಂದುವರಿದ ರಾಜಮೌಳಿ, "ನಾನು ಸುದೀಪ್ ಅವರ ಮಹಾ ಅಭಿಮಾನಿ. ಅವರಿಗೆ 39 ವರ್ಷವಾಗಿದೆ ಎಂಬುದನ್ನು ನಾನು ನಂಬಲಾರೆ. ಸುದೀಪ್ ತಮ್ಮ ನಿಜ ವಯಸ್ಸನ್ನು ಬಹಿರಂಗಪಡಿಸಬೇಕು" ಎಂದಿದ್ದಾರೆ. ನನಗೆ ಅವರು ಇನ್ನೂ ಸಾಕಷ್ಟು ಯಂಗ್ ಹಾಗೂ ಎನರ್ಜಿಟಿಕ್ ಆಗಿಯೇ ಕಾಣಿಸುತ್ತಿದ್ದಾರೆ. ನನಗಂತೂ ಅವರ ಜೊತೆ ಮತ್ತೆ ಕೆಲಸ ಮಾಡಬೇಕಿದೆ" ಎಂದು ಸುದೀಪ್ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/kicha-sudeep-birthday-nm-kumar-movie-chakravyooha-067759.html">Next »</a></li></ul>

More from Filmibeat

English summary
SS Rajamouli has expressed his wish to work with Sudeep again. The duo had recently delivered Eega.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X