'RRR' ಶೂಟಿಂಗ್ ನಲ್ಲಿ ಅಲಿಯಾ ಭಟ್; ಪ್ರೀತಿಯ 'ಸೀತಾ'ಗೆ ಸ್ವಾಗತ ಎಂದ ರಾಜಮೌಳಿ

ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ಕೊನೆಗೂ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಅನೇಕ ತಿಂಗಳಾಗಿದ್ದು, ಅಲಿಯಾ ಯಾವಾಗ ಶೂಟಿಂಗ್ ನಲ್ಲಿ ಭಾಗಿಯಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಕೊನೆಗೂ ಅಲಿಯಾ ರಾಜಮೌಳಿ ಅವರ ಆರ್ ಆರ್ ಆರ್ ತಂಡ ಸೇರಿಕೊಂಡಿದ್ದಾರೆ.

ಚಿತ್ರೀಕರಣ ಸೆಟ್ ಸೇರಿರುವ ಅಲಿಯಾ ಭಟ್ ಗೆ ನಿರ್ದೇಶಕ ರಾಜಮೌಳಿ ಪ್ರೀತಿಯ ಸ್ವಾಗತ ಕೋರಿದ್ದಾರೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅಲಿಯಾ ಭಟ್ ಹೈದರಾಬಾದ್ ಗೆ ಬಂದಿದ್ದಾರೆ. ಶೂಟಿಂಗ್ ನಲ್ಲಿ ಭಾಗಿಯಾಗುತ್ತಿರುವುದಾಗಿ ಅಲಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಇದೀಗ ರಾಜಮೌಳಿ ಸ್ವಾಗತ ಕೋರಿ ಪೋಟೋ ಹಂಚಿಕೊಂಡಿದ್ದಾರೆ.

ಹೈದರಾಬಾದ್ ನಲ್ಲಿ ಆರ್ ಆರ್ ಆರ್ ಚಿತ್ರೀಕರಣ

ಹೈದರಾಬಾದ್ ನಲ್ಲಿ ಆರ್ ಆರ್ ಆರ್ ಚಿತ್ರೀಕರಣ

ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಮಹಾಬಲೇಶ್ವರದಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ಮತ್ತೆ ಹೈದರಾಬಾದ್ ಗೆ ಮರಳಿದೆ. ಹೈದರಾಬಾದ್ ನಲ್ಲಿ ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ನಡೆಯುತ್ತಿದೆ. ನಟಿ ಅಲಿಯಾ ಭಟ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಪ್ರೀತಿಯ ಸೀತಾಗೆ ಸ್ವಾಗತ ಎಂದ ರಾಜಮೌಳಿ

ಪ್ರೀತಿಯ ಸೀತಾಗೆ ಸ್ವಾಗತ ಎಂದ ರಾಜಮೌಳಿ

ಚಿತ್ರೀಕರಣದಲ್ಲಿ ಭಾಗಿಯಾದ ಅಲಿಯಾ ಭಟ್ ಗೆ ನಿರ್ದೇಶಕ ರಾಜಮೌಳಿ ಅದ್ದೂರಿ ಸ್ವಾಗತ ಕೋರಿದ್ದಾರೆ. ಅಲಿಯಾ ಭಟ್ ಜೊತೆ ಫೋಟೋ ಶೇರ್ ಮಾಡಿ, 'ನಮ್ಮ ಪ್ರೀತಿಯ ಸೀತಾ, ಅತ್ಯಂತ ಪ್ರತಿಭಾವಂತೆ ಮತ್ತು ಸುಂದರ ಅಲಿಯಾ ಭಟ್ ಗೆ ಆರ್ ಆರ್ ಆರ್ ಸಿನಿಮಾಗೆ ಆತ್ಮೀಯ ಸ್ವಾಗತ' ಎಂದು ರಾಜಮೌಳಿ ಹೇಳಿದ್ದಾರೆ.

ರಾಮ್ ಚರಣ್ ಗೆ ನಾಯಕಿಯಾಗಿ ಅಲಿಯಾ ಅಭಿನಯ

ರಾಮ್ ಚರಣ್ ಗೆ ನಾಯಕಿಯಾಗಿ ಅಲಿಯಾ ಅಭಿನಯ

ನಟಿ ಅಲಿಯಾ ಭಟ್ ರಾಮ್ ಚರಣ್ ಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು, ಆದರೀಗ ಅಧಿಕೃತವಾಗಿದೆ. ರಾಮ್ ಚರಣ್ ಚಿತ್ರದಲ್ಲಿ ಅಲ್ಲುರಿ ಸೀತಾರಾಮ ರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತಾರಾಮ ರಾಜು ಪ್ರೇಯಸಿ ಸೀತಾ ಪಾತ್ರಕ್ಕೆ ಅಲಿಯಾ ಬಣ್ಣ ಹಚ್ಚುತ್ತಿದ್ದಾರೆ. ಈ ಬಗ್ಗೆ ಸ್ವತಃ ರಾಜಮೌಳಿ ಅವರೇ ಬಹಿರಂಗ ಪಡಿಸಿದ್ದಾರೆ.

Recommended Video

ಒಂದು ದೊಡ್ಡ ಸಿನಿಮಾ ಇದೆ ಅಂತ ಫೋನ್ ಮಾಡಿದ್ರು ಇಂದ್ರಜಿತ್ | Sangeetha Chauhan | Filmibeat Kannada
ಸಿನಿಮಾಗಾಗಿ ವಿಶೇಷ ತಯಾರಿ ನಡೆಸಿರುವ ಅಲಿಯಾ

ಸಿನಿಮಾಗಾಗಿ ವಿಶೇಷ ತಯಾರಿ ನಡೆಸಿರುವ ಅಲಿಯಾ

ಈ ಸಿನಿಮಾಗಾಗಿ ಅಲಿಯಾ ವಿಶೇಷ ತಯಾರಿ ನಡೆಸಿದ್ದಾರೆ. ತೆಲುಗು ಕಲಿತಿರುವ ಅಲಿಯಾ, ತೆಲುಗು ಆವೃತ್ತಿಗೆ ಅವರೇ ಡಬ್ ಮಾಲಿದ್ದಾರೆೆ ಎನ್ನಲಾಗುತ್ತಿದೆ. ಇನ್ನು ಚಿತ್ರಕ್ಕಾಗಿ ಅಲಿಯಾ ತೂಕ ಹೆಚ್ಚಿಸಿಕೊಂಡಿದ್ದಾರೆ. ಅಲಿಯಾ ಭಟ್ ನಾಯಕಿ ಎಂದು ಸಿನಿಮಾತಂಡ ಘೋಷಣೆ ಮಾಡಿದಾಗಿನಿಂದಲೂ ಅಲಿಯಾ ಎಂಟ್ರಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿತ್ತು. ಕೊನೆಗೂ ಚಿತ್ರೀಕರಣದಲ್ಲಿ ಅಲಿಯಾ ಭಾಗಿಯಾಗಿದ್ದು, ಪಾತ್ರ ಹೇಗೆ ಮೂಡಿ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Alia Bhatt joins RRR team. Director SS Rajamouli welcomes Alia Bhatt on the RRR movie sets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X