'SSMB 28' ಗ್ಲಿಂಪ್ಸ್ ರಿಲೀಸ್; ರಗಡ್ ಲುಕ್‌ನಲ್ಲಿ ಮಹೇಶ್ ಬಾಬು ದರ್ಶನ, ಚಿತ್ರದ ಶೀರ್ಷಿಕೆ ರಿವೀಲ್!

ಇಂದು ( ಮೇ 31 ) ತೆಲುಗಿನ ಮೇರು ನಟ ಸೂಪರ್ ಸ್ಟಾರ್ ಕೃಷ್ಣ ಜನ್ಮದಿನದ ಅಂಗವಾಗಿ ಮಹೇಶ್ ಬಾಬು ನಟಿಸುತ್ತಿರುವ 28ನೇ ಚಿತ್ರದ ವಿಶೇಷ ಗ್ಲಿಂಪ್ಸ್ ವಿಡಿಯೊ ಬಿಡುಗಡೆ ಮಾಡಲಾಗಿದೆ ಹಾಗೂ ಚಿತ್ರದ ಶೀರ್ಷಿಕೆಯನ್ನೂ ಸಹ ಬಹಿರಂಗಪಡಿಸಲಾಗಿದೆ.

ಹೌದು, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭವಾಗಿದ್ದ ಈ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿರದಿದ್ದ ಕಾರಣಕ್ಕೆ ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'SSMB 28' ಎಂದು ನಾಮಕರಣ ಮಾಡಲಾಗಿತ್ತು. ಈ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಚಿತ್ರಕ್ಕೆ ಚಿತ್ರತಂಡ ಯಾವ ಹೆಸರನ್ನು ಇಡಬಹುದು ಎಂಬ ಚರ್ಚೆಗಳು ಜೋರಾಗಿಯೇ ಇದ್ದವು.

 SSMB 28 titled as Guntur Kaaram and glimpse released on the occasion of Krishna birth anniversary
Photo Credit: Youtube screenshot

ಇದೀಗ ಈ ಚಿತ್ರಕ್ಕೆ 'ಗುಂಟೂರು ಕಾರಂ' ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಇಂದು 1.04 ನಿಮಿಷದ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಲಾಗಿದೆ. ಊಹೆಯಂತೆ ಚಿತ್ರದಲ್ಲಿನ ಫೈಟ್ ದೃಶ್ಯವೊಂದರ ಗ್ಲಿಂಪ್ಸ್ ಇದಾಗಿದ್ದು, ಮಹೇಶ್ ಬಾಬು ತಮ್ಮ ಇತ್ತೀಚೆಗಿನ ಚಿತ್ರಗಳಲ್ಲಿನ ಲುಕ್ ಬಿಟ್ಟು ಸಿಕ್ಕಾಪಟ್ಟೆ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪುಟ್ಟ ಟೀಸರ್‌ನಲ್ಲಿನ ದೃಶ್ಯಗಳಲ್ಲಿನ ಮಹೇಶ್ ಬಾಬು ಲುಕ್ ಕಂಡ ಸಿನಿ ರಸಿಕರು ಹಾಗೂ ಮಹೇಶ್ ಬಾಬು ಅಭಿಮಾನಿಗಳು ಹಳೆಯ ಮಹೇಶ್ ಬಾಬುವನ್ನು ಈ ಚಿತ್ರದಲ್ಲಿ ನಾವು ಮತ್ತೆ ನೋಡಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು ಇಡೀ ಟೀಸರ್‌ನಲ್ಲಿ ಮಹೇಶ್ ಬಾಬು ಬೀಡಿ ಹಚ್ಚಿಕೊಂಡು ಖಳ ನಾಯಕರಿಗೆ ಹೊಡೆಯುವ ದೃಶ್ಯಗಳಿದೆ. ಎಸ್ ಎಸ್ ಥಮನ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಮಜಾ ಕೊಡ್ತಿದೆ. ಗುಂಟೂರು ತೆಲುಗಿನಲ್ಲಿ ಮಹೇಶ್ ಬಾಬು ಹೇಳುವ 'ಏನು ಹಾಗ್ ನೋಡ್ತಾ ಇದ್ದೀಯಾ, ಬೀಡಿ ತ್ರೀಡಿಲಿ ಕಾಣಿಸ್ತಾ ಇದಿಯಾ' ಎಂಬ ಡೈಲಾಗ್ ಮಹೇಶ್ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಡ್ತಿದೆ.

 SSMB 28 titled as Guntur Kaaram and glimpse released on the occasion of Krishna birth anniversary
Photo Credit: Youtube screenshot

ಇನ್ನು ಈ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿದ್ದು, ಬರೋಬ್ಬರಿ ಹದಿಮೂರು ವರ್ಷಗಳ ಬಳಿಕ ಮಹೇಶ್ ಬಾಬುಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಚಿತ್ರಕ್ಕೆ ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಬಂಡವಾಳ ಹೂಡಿದ್ದು, ಮಹೇಶ್ ಬಾಬು ಸರ್ಕಾರು ವಾರಿ ಪಾಟ ಚಿತ್ರದ ಸಾಮಾನ್ಯ ಯಶಸ್ಸಿನ ಬಳಿಕ ಈ ಚಿತ್ರದ ಮೂಲಕ ದೊಡ್ಡ ಹಿಟ್ ಬಾರಿಸುವ ನಿರೀಕ್ಷೆಯಲ್ಲಿದ್ದರೆ, ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಅಲಾ ವೈಕುಂಠಪುರಮುಲೋ ಚಿತ್ರದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಚಿತ್ರ ಮುಂದಿನ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 13ರಂದು ಬಿಡುಗಡೆಯಾಗಲಿದೆ.

ಈ ಹಿಂದೆ ಅತಡು ಹಾಗೂ ಖಲೇಜಾ ರೀತಿಯ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದ ಈ ಜೋಡಿ ಇದೀಗ ಈ ಗುಂಟೂರ್ ಕಾರಂ ಮೂಲಕ ಮತ್ತೊಂದು ಹಿಟ್ ನೀಡಿ ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆ ಇದ್ದು, ಇದು ಈ ಗ್ಲಿಂಪ್ಸ್ ವಿಡಿಯೊ ಬಿಡುಗಡೆಯ ಬಳಿಕ ಮತ್ತಷ್ಟು ಹೆಚ್ಚಳವಾಗಿದೆ.

More from Filmibeat

English summary
SSMB 28 titled as Guntur Kaaram and glimpse released on the occasion of Krishna birth anniversary. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X