ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ಪ್ರಿನ್ಸ್ ಮಹೇಶ್ ಬಾಬು

ನಟ ಮಹೇಶ್‌ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಇದೇ ಮೇ 12 ರಂದು ಬೆಳ್ಳಿತೆರೆ ಮೇಲೆ ಬರಲಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಹಾಡು, ಟ್ರೈಲರ್‌ ಅನ್ನ ಜನ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ಮಹೇಶ್‌ ಬಾಬು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇದ್ದು, ಇದಕ್ಕೆಲ್ಲಾ ಉತ್ತರ ಮೇ 12 ರಂದು ಸಿಗಲಿದೆ. ಸದ್ಯ ಈ ಸಿನಿಮಾ ಬಿಡುಗಡೆಯ ನಡುವೆಯೇ ಮಹೇಶ್‌ ಬಾಬು ಮುಂದಿನ ಸಿನಿಮಾದ ಚರ್ಚೆ ಶುರುವಾಗಿದೆ. ಸ್ವತಃ ಈ ಬಗ್ಗೆ ಮಹೇಶ್ ಬಾಬು ಅವರೇ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಮಹೇಶ್ ಬಾಬು ಹಾಗೂ ರಾಜಮೌಳಿ ಅವರು ಒಟ್ಟಾಗಿ ಸೇರಿ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇವರಿಬ್ಬರ ಕಾಂಬಿನೇಶನ್‌ ಸಿನಿಮಾ ಸೆಟ್ ಏರಲು ಇನ್ನು ಬಹಳ ದಿನಗಳು ಬೇಕಾಗಿದೆ. ಹೀಗಾಗಿ ಇದರ ಮಧ್ಯೆಯೇ ಮಹೇಶ್‌ ಬಾಬು ಮತ್ತೊಂದು ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಯೆಸ್‌, ಪ್ರಿನ್ಸ್ ಮಹೇಶ್‌ ಬಾಬು, ತ್ರಿವಿಕ್ರಂ ಶ್ರೀನಿವಾಸ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ತಯಾರಿ ಕೂಡ ಮಾಡಿಕೊಳ್ಳಲಾಗಿದ್ದು, 'ಸರ್ಕಾರು ವಾರಿ ಪಾಟ' ರಿಲೀಸ್‌ ನಂತರ ಮಹೇಶ್ ಬಾಬು ತ್ರಿವಿಕ್ರಂ ನಿರ್ದೇಶನದ SSMB28 ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಸೌತ್ ಬ್ಯೂಟಿ ಹಾಗೂ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಪೂಜಾ ಹೆಗಡೆ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ನೇರವೇರಿದ್ದು, ಈ ಸಿನಿಮಾ ಸಕ್ಸಸ್‌ ನಂತರ ಮಹೇಶ್ ಬಾಬು SSMB28 ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.

SSMB28: Mahesh Babu Next With Directed by Trivikram Srinivas: Film to Go on Floors Soon

ಸದ್ಯಕ್ಕೆ 'ಸರ್ಕಾರು ವಾರು ಪಾಟ' ಸಿನಿಮಾದ ಪ್ರಚಾರದ ಕಾರ್ಯಗಳಲ್ಲಿ ಮಹೇಶ್‌ ಬಾಬು ಫುಲ್ ಬ್ಯುಸಿಯಾಗಿದ್ದಾರೆ. ಸಿನಿಮಾ ತೆರೆಕಂಡ ಬಳಿಕ ಸ್ವಲ್ಪ ದಿನ ಬ್ರೇಕ್‌ ತೆಗೆದುಕೊಂಡು ನಂತರ ಜೂನ್ ತಿಂಗಳಲ್ಲಿ ಮುಂದಿನ ಸಿನಿಮಾದ ಕೆಲಸ ಆರಂಭಿಸಲಿದ್ದಾರೆ. ಈ ಸಿನಿಮಾಗೆ ಇನ್ನೂ ಟೈಟಲ್‌ ಫಿಕ್ಸ್ ಆಗಿಲ್ಲ. ಸಿನಿಮಾ ಕೆಲಸ ಆರಂಭಗೊಂಡ ನಂತರ ಟೈಟಲ್‌ ಅನಾವಣರಣ ಮಾಡುವ ಸಾಧ್ಯತೆ ಇದೆ.

SSMB28: Mahesh Babu Next With Directed by Trivikram Srinivas: Film to Go on Floors Soon

ಮಹೇಶ್‌ ಬಾಬು ಅವರ 28ನೇ ಸಿನಿಮಾ ಇದಾಗಲಿದ್ದು, ಸದ್ಯಕ್ಕೆ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಆ ಕೆಲಸಗಳು ಪೂರ್ಣಗೊಳ್ಳಲಿದ್ದು, ಮಹೇಶ್ ಬಾಬು ಮುಂದಿನ ಸಿನಿಮಾಗೆ ಎಸ್‌.ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

More from Filmibeat

English summary
SSMB28: Tollywood Superstar Mahesh Babu Next With Directed by Trivikram Srinivas; film to go on floors soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X