SSMB28: ಮಹೇಶ್‌- ತ್ರಿವಿಕ್ರಮ್ ಹೊಸ ಸಿನಿಮಾ ಟೈಟಲ್ ಏನು? ಚಾಲ್ತಿಗೆ ಬಂತು ಮತ್ತೆರಡು ಹೆಸರು

'ಅತಡು', 'ಖಲೇಜಾ' ನಂತರ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕ್ರೇಜ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರ್ತಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇನ್ನು ಚಿತ್ರದಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಇದೀಗ ಒಂದು ಟೈಟಲ್ ಫೈನಲ್ ಆಗಿದ್ದು ಚಿತ್ರತಂಡ ಶೀಘ್ರದಲ್ಲೇ ಘೋಷಣೆ ಮಾಡಲಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಈಗ ಖುಷಿಯಾಗಿದ್ದಾರೆ.

'ಸರ್ಕಾರಿವಾರು ಪಾಟ' ನಂತರ ಮಹೇಶ್ ಬಾಬು ಈ ಚಿತ್ರದಲ್ಲಿ ನಟಿಸ್ತಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಸಿಕ್ಕಿಲ್ಲ. ಇದು ಮಹೇಶ್ ಬಾಬು 28ನೇ ಸಿನಿಮಾ ಎನ್ನುವ ಕಾರಣಕ್ಕೆ SSMB28 ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಚಿತ್ರೀಕರಣ ನಡೀತಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ನಾಯಕಿಯರಾಗಿ ನಟಿಸ್ತಿದ್ದಾರೆ. ಕಾಮಿಡಿ ಜೊತೆಗೆ ಬಹಳ ಸ್ಟೈಲಿಶ್ ಆಗಿ ಆಕ್ಷನ್ ಎಂಟರ್‌ಟೈನರ್ ಸಿನಿಮಾಗಳನ್ನು ತ್ರಿವಿಕ್ರಮ್ ಕಟ್ಟಿಕೊಡುತ್ತಾರೆ. ಅಂತದ್ದೇ ಮತ್ತೊಂದು ಪ್ರಯತ್ನ ಇದು.

SSMB28: Mahesh Babu - Trivikram Srinivas movie Title Reveal on May 31st

ಹಾರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗುತ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಮುಂದಿನ ವರ್ಷ ಜನವರಿ 13ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ಬಹಳ ತಡವಾಯಿತು ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. 'ಅಲಾ ವೈಕುಂಠಪುರಂಲೋ' ನಂತರ ತ್ರಿವಿಕ್ರಮ್ ಯಾವುದೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿಲ್ಲ. ಇದೀಗ SSMB28 ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ.

SSMB28: Mahesh Babu - Trivikram Srinivas movie Title Reveal on May 31st

ಜಬರ್ದಸ್ತ್ ಟೈಟಲ್

ಯಾವುದೇ ಸಿನಿಮಾ ಆಗಿದ್ರು ಟೈಟಲ್ ಬಹಳ ಮುಖ್ಯ. ಟೈಟಲ್‌ನಿಂದಲೇ ಸಿನಿಮಾ ಹೈಪ್ ಕ್ರಿಯೇಟ್ ಮಾಡುತ್ತದೆ. ಅದೇ ಕಾರಣಕ್ಕೆ ಫಿಲ್ಮ್ ಮೇಕರ್ಸ್ ಸಿನಿಮಾ ಟೈಟಲ್‌ಗಾಗಿ ಸಿಕ್ಕಾಪಟ್ಟೆ ಹುಡುಕಾಟ ನಡೆಸುತ್ತಾರೆ. ಟೈಟಲ್‌ಗೆ ತಕ್ಕಂತೆ ಸಿನಿಮಾ ಕಟ್ಟಿಕೊಡುತ್ತಾರೆ. ಮಹೇಶ್ ಬಾಬು ಸಿನಿಮಾ ಅಂದ್ರೆ, ಟೈಟಲ್ ಜಬರ್ದಸ್ತ್ ಆಗಿ ಇರಲೇಬೇಕು. ಇದೀಗ ತ್ರಿವಿಕ್ರಮ್ ಶ್ರೀನಿವಾಸ್ ಖಡಕ್ ಟೈಟಲ್ ಫೈನಲ್ ಮಾಡಿದ್ದಾರೆ.

ಚಾಲ್ತಿಗೆ ಬಂತು ಮತ್ತೆರಡು ಟೈಟಲ್

ಯಾವಾಗಲೂ ತ್ರಿವಿಕ್ರಮ್ ತಮ್ಮ ಸಿನಿಮಾಗಳಿಂದ ವಿಭಿನ್ನ ಟೈಟಲ್ ಹುಡುಕುತ್ತಾರೆ. 'ಅಲಾ ವೈಕುಂಠಪುರಂಲೋ', 'ಅ ಆ', 'ಅರವಿಂದಸಮೇತ ವೀರ ರಾಘವ' ಹೀಗೆ ಅವರ ಸಿನಿಮಾ ಟೈಟಲ್‌ಗಳು ಗಮನ ಸೆಳೆಯುತ್ತವೆ. ಇದೀಗ SSMB28 ಚಿತ್ರಕ್ಕಾಗಿ 'ಆರಂಭ', 'ಅಮ್ಮ ಒಡಿ', 'ಅಮರಾವತಿಕಿ ಅಟು ಇಟು', 'ಗುಂಟೂರು ಖಾರಂ', 'ಊರಿಕಿ ಮೊನಗಾಡು,' 'ಅಯೋಧ್ಯೆಯಲ್ಲಿ ಅರ್ಜುನುಡು' ಹೀಗೆ ಹಲವು ಹೆಸರುಗಳು ಹರಿದಾಡಿವೆ. ಇದೀಗ ಸಿನಿಮಾ ಟೈಟಲ್ 'ಗುಂಟೂರು ಖಾರಂ' ಫಿಕ್ಸ್ ಎನ್ನುವ ಚರ್ಚೆ ನಡೀತಿದೆ.

'ಗುಂಟೂರು ಖಾರಂ' ಫಿಕ್ಸ್

ಸಾಮಾನ್ಯವಾಗಿ ತ್ರಿವಿಕ್ರಮ್ ತಮ್ಮ ಸಿನಿಮಾ ಟೈಟಲ್‌ಗಳ ಮೊದಲ ಅಕ್ಷರ 'ಅ' ಆರಂಭವಾಗುವಂತೆ ನೋಡಿಕೊಳ್ಳುತ್ತಾರೆ. ಆದರೆ 'ಗುಂಟೂರು ಖಾರಂ' ಟೈಟಲ್ ಫಿಕ್ಸ್ ಎಂದು ಚರ್ಚೆ ನಡೀತಿದೆ. 'ಅ' ಸೆಂಟಿಮೆಂಟ್ ಕಾರಣಕ್ಕೆ 'ಅಮರಾವತಿಕಿ ಅಟು ಇಟು' ಕೂಡ ಕೊಂಚಮಟ್ಟಿಗೆ ಭರವಸೆ ಮೂಡಿಸಿದೆ. ಮೇ 31ಕ್ಕೆ SSMB28 ಟೈಟಲ್ ರಿವೀಲ್ ಆಗುತ್ತದೆ.

ಸಂಕ್ರಾಂತಿಗೆ ರಿಲೀಸ್

ಚಿತ್ರದಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ಮಹೇಶ್ ಬಾಬು ಮಿಂಚಿದ್ದಾರೆ. ಸದ್ಯ ಚಿತ್ರದ ಪೋಸ್ಟರ್‌ಗಳು ಸದ್ದುಮಾಡ್ತಿದೆ. ಸಣ್ಣ ಗ್ಲಿಂಪ್ಸ್ ಜತೆಗೆ ಚಿತ್ರದ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆಯಿದೆ. ಥಿಯೇಟರ್‌ಗಳಲ್ಲಿ ಸಿನಿಮಾ ಗ್ಲಿಂಪ್ಸ್ ಪ್ರದರ್ಶನ ಮಾಡುವ ಬಗ್ಗೆ ಚಿಂತನೆ ನಡೀತಿದೆ.

More from Filmibeat

English summary
SSMB28: Mahesh Babu - Trivikram Srinivas movie Title Reveal on May 31st. action entertainer in Theaters From 13th January 2024 Worldwide. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X