ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿಮಾನಿಗಳಿಗೆ ಬೇಸರದ ಸುದ್ದಿ

'ಗುಂಟೂರು ಖಾರಂ' ಸಿನಿಮಾ ಬಳಿಕ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟ ಮಹೇಶ್ ಬಾಬು ಬಣ್ಣ ಹಚ್ಚಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಹಾಲಿವುಡ್ ಶೈಲಿಯ ಸಿನಿಮಾ ಸಿದ್ಧವಾಗುತ್ತಿದೆ. ಸದ್ದಿಲ್ಲದೇ ಚಿತ್ರೀಕರಣ ನಡೆಸುತ್ತಿದ್ದಾರೆ ಜಕ್ಕಣ್ಣ. ಸದ್ಯ ಅಭಿಮಾನಿಗಳಿಗೆ ಭಾರೀ ನಿರಾಸೆ ಎದುರಾಗುತ್ತಿದೆ.

'RRR' ಬಳಿಕ ಬಹಳ ತಡವಾಗಿ ರಾಜಮೌಳಿ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದರು. ಇದು ಮಹೇಶ್ ಬಾಬು ನಟನೆಯ 29 ಸಿನಿಮಾ. ಟೈಟಲ್ ಇನ್ನು ಫಿಕ್ಸ್ ಆಗಿಲ್ಲ. ಹಾಗಾಗಿ ಸದ್ಯಕ್ಕೆ SSMB29 ಎಂದು ಕರೆಯಲಾಗುತ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ.

SSMB29 Buzz - No updates coming out about Mahesh babu-rajamouli film on 09th August

ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸುತ್ತಿದ್ದಾರೆ. ಆದರೆ ಅಧಿಕೃತವಾಗಿ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆಗಸ್ಟ್ 9ಕ್ಕೆ ಮಹೇಶ್ ಬಾಬು ಹುಟ್ಟುಹಬ್ಬ. ಆ ದಿನ ಸಣ್ಣ ಟೀಸರ್, ಕೊನೆ ಪಕ್ಷ ಒಂದು ಅಫೀಷಿಯಲ್ ಪೋಸ್ಟರ್ ಆದರೂ ಬರುತ್ತದೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಈ ಬಾರಿ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ SSMB29 ಚಿತ್ರದ ಯಾವುದೇ ಅಪ್‌ಡೇಟ್ ಸಿಲ್ಲ ಎಂದು ಟಾಲಿವುಡ್‌ನಲ್ಲಿ ಚರ್ಚೆ ನಡೀತಿದೆ. ವರ್ಷದ ಆರಂಭದಲ್ಲೇ ರಾಜಮೌಳಿ ಸದ್ದಿಲ್ಲದೇ ಚಿತ್ರ ಮುಹೂರ್ತ ನೆರವೇರಿಸಿದ್ದರು. ಹೈದರಾಬಾದ್ ಸ್ಟುಡಿಯೋದಲ್ಲಿ ಪೂಜೆ ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ಕೊಟ್ಟಿದ್ದರು. ಬಳಿಕ ಒರಿಸ್ಸಾದಲ್ಲಿ ಒಂದು ಸಣ್ಣ ಶೆಡ್ಯೂಲ್ ಚಿತ್ರೀಕರಣ ಮಾಡಿ ಬಂದಿದ್ದರು. ಬಳಿಕ ಹೊಸ ಶೆಡ್ಯೂಲ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.

ಯಾವುದೇ ಸಿನಿಮಾ ಆರಂಭಿಸುವಾಗ ರಾಜಮೌಳಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದರು. ಆದರೆ SSMB29 ಸಿನಿಮಾ ವಿಚಾರದಲ್ಲಿ ಯಾಕೋ ಬೇರೆಯದ್ದೆ ಲೆಕ್ಕಾಚಾರದಲ್ಲಿದ್ದಾರೆ. ತಡವಾಗಿ ಆದರೂ ಒಳ್ಳೆ ಕಂಟೆಂಟ್ ಜೊತೆ ಪ್ರಚಾರ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ. ದೊಡ್ಡಮಟ್ಟದಲ್ಲೇ ಚಿತ್ರದ ಪ್ರಚಾರಕ್ಕೆ ಪ್ರಯತ್ನಿಸುತ್ತಿದ್ದಾರೆ. ಈಗ್ಲೇ ಏನು ಮಾತನಾಡುವುದು, ಗ್ಲಿಂಪ್ಸ್ ರಿಲೀಸ್ ಮಾಡುವುದು ಬೇಡ ಎಂದು ನಿರ್ಧರಿಸಿದಂತಿದೆ.

ಚಿತ್ರಕ್ಕಾಗಿ ಮಹೇಶ್ ಬಾಬು ಲೈವ್ ಸ್ಟಂಟ್ಸ್ ಮಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಸಾಮಾನ್ಯವಾಗಿ ರಿಸ್ಕಿ ಸ್ಟಂಟ್ಸ್ ಮಾಡುವಾಗ ಡ್ಯೂಪ್ ಬಳಸುತ್ತಾರೆ. ಆದರೆ ಜಕ್ಕಣ್ಣ ಮಿಸ್ಟರ್ ಪರ್ಫೆಕ್ಷನಿಸ್ಟ್. ಹಾಗಾಗಿ ತಮ್ಮ ಸಿನಿಮಾಗಳಲ್ಲಿ ಅಷ್ಟು ಸುಲಭವಾಗಿ ಡ್ಯೂಪ್ ಹಾಕಲು ಒಪ್ಪುವುದಿಲ್ಲ. ದೃಶ್ಯಗಳು ನೈಜವಾಗಿ ಬರಬೇಕು ಎನ್ನುವ ಕಾರಣಕ್ಕೆ ಲೈವ್ ಸ್ಟಂಟ್ಸ್ ಮಾಡುವಂತೆ ಮಹೇಶ್ ಬಾಬುಗೆ ಹೇಳಿ ಒಪ್ಪಿಸಿದ್ದಾರೆ ಎನ್ನಲಾಗ್ತಿದೆ.

ಸದ್ಯ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾಗಳ ಟ್ರೆಂಡ್ ಶುರುವಾಗಿದೆ. SSMB29 ಸಿನಿಮಾ ಕೂಡ ಆ ಲಿಸ್ಟ್‌ನಲ್ಲಿದೆ. ಜಕ್ಕಣ್ಣ ನಿರ್ದೇಶನದ 'ಆರ್‌ಆರ್‌ಆರ್' ಹಾಲಿವುಡ್ ಪ್ರೇಕ್ಷಕರು, ಜೇಮ್ಸ್ ಕ್ಯಾಮರೂನ್ ರೀತಿ ಫಿಲ್ಮ್ ಮೇಕರ್ಸ್ ಮೆಚ್ಚುಗೆ ಪಡೆದಿತ್ತು. ಹಾಗಾಗಿ ಈ ಬಾರಿ ಹಾಲಿವುಡ್ ಪ್ರೇಕ್ಷಕರನ್ನೇ ಮನಸ್ಸಿನಲ್ಲಿಟ್ಟುಕೊಂಡು ಇಂಡಿಯಾನಾ ಜೋನ್ಸ್ ರೀತಿಯ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಬಹಳ ನಿರೀಕ್ಷೆ ಹುಟ್ಟಕ್ಕಿದೆ.

SSMB29 ಸಿನಿಮಾ ಬಿಡುಗಡೆಗೆ ಇನ್ನು ಎರಡು ವರ್ಷ ಸಮಯ ಬೇಕಾಗಬಹುದು ಎನ್ನಲಾಗ್ತಿದೆ. ಇದು ಸಹಜವಾಗಿಯೇ ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳ ಬೇಸರ ತಂದಿದೆ. ನೆಚ್ಚಿನ ನಟನನ್ನು ಮತ್ತೆ ತೆರೆಮೇಲೆ ನೋಡುವುದು ಯಾವಾಗ ಎಂದು ಬೇಸರ ಮಾಡಿಕೊಂಡಿದ್ದಾರೆ.

More from Filmibeat

English summary
No SSMB29 movie updates are coming out on Mahesh babu's birthday on august 9th.
Read more about: rajamouli mahesh babu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X