SSMB29: ಮಹೇಶ್-ಮೌಳಿ ಚಿತ್ರಕ್ಕೆ ಹೊಸ ಟೈಟಲ್; ಮೋಹನ್ ಲಾಲ್, ಕ್ರಿಸ್ ಹೆಮ್ಸ್ವರ್ತ್ ಕೂಡ ನಟಿಸ್ತಾರಾ?

ಎಸ್. ಎಸ್ ರಾಜಮೌಳಿ ನಿರ್ದೇಶನದ ಹೊಸ ಸಿನಿಮಾ ತಡವಾಗುತ್ತಿದೆ. 'RRR' ಸಿನಿಮಾ ಬಂದುಹೋಗಿ 2 ವರ್ಷ ಕಳೆದರೂ ಮುಂದಿನ ಸಿನಿಮಾ ಶುರುವಾಗಿಲ್ಲ. ಮಹೇಶ್ ಬಾಬು ಜೊತೆ ಜಕ್ಕಣ್ಣ ಕೈಜೋಡಿಸುವುದು ಪಕ್ಕಾ ಆಗಿದೆ. ಆದರೆ ಯಾವಾಗ ಸಿನಿಮಾ ಸೆಟ್ಟೇರುತ್ತದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಬಹಳ ಹಿಂದೆಯೇ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ರಾಜಮೌಳಿ ಮನಸ್ಸು ಮಾಡಿದ್ದರು. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಇದೀಗ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುವುದು ಪಕ್ಕಾ ಆಗಿದೆ. ತೆರೆಮರೆಯಲ್ಲಿ ಕಸರತ್ತು ಶುರುವಾಗಿದೆ. ಮಹೇಶ್ ಬಾಬು ಕೂಡ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಜಕ್ಕಣ್ಣ ಜೊತೆ ಕೆಲಸ ಮಾಡಲು ಕಾಯುತ್ತಿದ್ದಾರೆ.

SSMB29 Garuda Cast Mahesh Babu and Rajamouli s film will have bigger star cast

ಈ ಬಾರಿ ಹಾಲಿವುಡ್ ರೇಂಜ್‌ನಲ್ಲಿ ಜಕ್ಕಣ್ಣ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಇದು ಮಹೇಶ್ ಬಾಬು ನಟನೆಯ 29ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ SSMB29 ಹೆಸರಿನಲ್ಲಿ ಪ್ರೀಪ್ರೊಡಕ್ಷನ್ ವರ್ಕ್ ನಡೀತಿದೆ. ಹಾಲಿವುಡ್ ತಂತ್ರಜ್ಞರು, ಕಲಾವಿದರನ್ನು ಬಳಸಿಕೊಂಡು ಸಿನಿಮಾ ಮಾಡಲು ಪ್ರಯತ್ನಗಳು ನಡೆಯುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ದೇಶ ವಿದೇಶಗಳಲ್ಲಿ SSMB29 ಸಿನಿಮಾ ಕಥೆ ಸಾಗಲಿದೆ. ಈಗಾಗಲೇ ಸ್ಕ್ರಿಪ್ಟ್ ಫೈನಲ್ ಆಗಿದೆ. ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ಮೇಕರ್ಸ್ 'RRR' ಸಿನಿಮಾ ನೋಡಿ ಮೆಚ್ಚಿದ್ದರು. ರಾಜಮೌಳಿ ಪ್ರತಿಭೆಯನ್ನು ಕೊಂಡಾಡಿದ್ದರು. ಹಾಗಾಗಿ ಹಾಲಿವುಡ್‌ ಮಂದಿಯನ್ನು ಗಮನದಲ್ಲಿಟ್ಟುಕೊಂಡು ಮೌಳಿ ಮುಂದಿನ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ.

ಆಗಸ್ಟ್ 9ಕ್ಕೆ ಮಹೇಶ್ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿ SSMB29 ಅಪ್‌ಡೇಟ್ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಯಿತು. ಜಕ್ಕಣ್ಣ ಹೊಸ ಚಿತ್ರಕ್ಕಾಗಿ ಹಾಲಿವುಡ್ ಸ್ಟುಡಿಯೋ ಜೊತೆಗೆ ಕೈ ಜೋಡಿಸಲು ಮುಂದಾಗಿದ್ದಾರೆ. ಆದರೆ ಆ ಕಡೆಯಿಂದ ಇನ್ನು ಒಪ್ಪಂದಕ್ಕೆ ಸಹಿ ಆಗಿಲ್ಲ. ಅದೇ ಕಾರಣಕ್ಕೆ ಸಿನಿಮಾ ಶುರು ಮಾಡುವುದು ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ.

SSMB29 Garuda Cast Mahesh Babu and Rajamouli s film will have bigger star cast

ಇನ್ನು SSMB29 ಚಿತ್ರಕ್ಕೆ ಸಾಕಷ್ಟು ಟೈಟಲ್‌ಗಳನ್ನು ಚಿತ್ರತಂಡ ಪರಿಶೀಲಿಸುತ್ತಿದೆಯಂತೆ. ಈ ಹಿಂದೆ 'ಹಾರಾಜ' 'ಗೋಲ್ಡ್' ಎನ್ನುವ ಟೈಟಲ್‌ಗಳ ಬಗ್ಗೆ ಜಕ್ಕಣ್ಣ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಇದೀಗ 'ಗರುಡ' ಕೂಡ ಆ ಲಿಸ್ಟ್ ಸೇರಿಕೊಂಡಿದೆ. 'ಬಾಹುಬಲಿ' ಬಳಿಕ ಯಾವ ಸಿನಿಮಾ ಮಾಡುವ ಬಗ್ಗೆ ನಿಮ್ಮ ತಲೆಯಲ್ಲಿ ಲೆಕ್ಕಾಚಾರ ನಡೆಯುತ್ತಿದೆ ಎಂದು ಕೇಳಿದಾಗ 'ಗರುಡ' ಎಂದು ಮೌಳಿ ಹೇಳಿದ್ದರು. ಹಾಗಾಗಿ ಮಹೇಶ್ ಬಾಬು ಚಿತ್ರಕ್ಕೆ ಇದೇ ಟೈಟಲ್ ಎಂದು ಕೆಲವರು ಹೇಳುತ್ತಿದ್ದಾರೆ.

ಮಹೇಶ್ ಬಾಬು ಜೊತೆಗೆ SSMB29 ಚಿತ್ರದಲ್ಲಿ ಹಾಲಿವುಡ್ ನಟ ಕ್ರಿಸ್ ಹೆಮ್ಸ್ವರ್ತ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಮೋಹನ್ ಲಾಲ್, ನಯನತಾರ, ಚಿಯಾನ್ ವಿಕ್ರಂ, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಮತ್ತಷ್ಟು ಕಲಾವಿದರು ಚಿತ್ರದಲ್ಲಿ ನಟಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಮುಂದಿನ ಚಿತ್ರಕ್ಕೂ ರಾಜಮೌಳಿ ತಮ್ಮ ತಂಡವನ್ನೇ ಉಳಿಸಿಕೊಳ್ಳಲಿದ್ದಾರೆ. ಈ ಬಾರಿ ಪ್ಯಾನ್ ವರ್ಲ್ಡ್ ಸಿನಿಮಾ ಮಾಡಲು ಮುಂದಾಗಿರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ. ಆದರೆ ಸಿನಿಮಾ ಶುರುವಾಗುವುದು ಯಾವಾಗ? ಚಿತ್ರೀಕರಣ ಮುಗಿಸಿ ತೆರೆಗೆ ಬರುವುದು ಯಾವಾಗ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ರಾಜಮೌಳಿ ಪ್ರತಿ ಚಿತ್ರಕ್ಕೂ ವರ್ಷಗಳ ಕಾಲ ಸಮಯ ವ್ಯಯಿಸುತ್ತಾರೆ. ಹಾಗಾಗಿ ಅಭಿಮಾನಿಗಳು ಬೇಗ ಸಿನಿಮಾ ಮಾಡಿ ಎಂದು ಕೇಳುತ್ತಿದ್ದಾರೆ.

More from Filmibeat

English summary
Buzz is that SSMB29 might be titled as Garuda
Read more about: mahesh babu rajamouli mohanlal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X