"ಆ ಸಿನ್ಮಾ ಏನಾಯ್ತು ಅಂತ ಕೇಳೋಕೆ ಫೋನ್ ಮಾಡಿದ್ರೆ ರಾಜಮೌಳಿ ಫೋನ್ ಸ್ವಿಚ್ವ್ ಆಫ್ ಆಗಿರತ್ತೆ": ಕೀರವಾಣಿ

'RRR' ಬಳಿಕ ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾ ಯಾವುದು ಎನ್ನುವ ವಿಚಾರ ಭಾರೀ ಸದ್ದು ಮಾಡ್ತಿದೆ. ಮಹೇಶ್ ಬಾಬು ನಿರ್ದೇಶನದ ಚಿತ್ರಕ್ಕೆ ಜಕ್ಕಣ್ಣ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಚರ್ಚೆಯಲ್ಲಿದೆ. ಆದರೆ ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನು ಹೊರಬಿದ್ದಿಲ್ಲ.

ಬಹಳ ಹಿಂದೆಯೇ ಮಹೇಶ್ ಬಾಬು ಸಿನಿಮಾವನ್ನು ಮೌಳಿ ಘೋಷಿಸಿದ್ದರು. ಆದರೆ ಮಹೇಶ್ ಬಾಬು ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಟಾಲಿವುಡ್ ಪ್ರಿನ್ಸ್ ನಟನೆಯ 'ಗುಂಟೂರು ಖಾರಂ' ಸಿನಿಮಾ ಸಂಕ್ರಾಂತಿಗೆ ತೆರೆಗೆ ಬರ್ತಿದೆ. ಆ ಬಳಿಕ ಜಕ್ಕಣ್ಣನ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ. ಮಹೇಶ್ ಬಾಬು ನಟನೆಯ 29ನೇ ಚಿತ್ರವನ್ನು ಮೌಳಿ ನಿರ್ದೇಶನ ಮಾಡಲಿದ್ದಾರೆ. ಇನ್ನು ಹೆಸರಿಡದ ಈ ಚಿತ್ರವನ್ನು ಸದ್ಯ SSMB29 ಎಂದು ಕರೆಯಲಾಗುತ್ತಿದೆ.

SSMB29: MM Keeravani reacts over Mahesh babu -Rajamouli Film update

ಸಾವಿರ ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ SSMB29 ಮೂಡಿ ಬರುತ್ತದೆ ಎನ್ನುವ ಗುಸುಗುಸು ನಡೀತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಇನ್ನು ಮೌಳಿ ಚಿತ್ರಗಳಿಗೆ ಕೆಲಸ ಮಾಡುವ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ಸ್ವತಃ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಸೋದರ ಸಂಬಂಧಿ ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿರಲಿದೆ.

ರಾಜಮೌಳಿ ನಿರ್ದೇಶನದ ಎಲ್ಲಾ ಚಿತ್ರಗಳಿಗೂ ಕೀರವಾಣಿ ಟ್ಯೂನ್ ಹಾಕಿದ್ದಾರೆ. ಎಲ್ಲವೂ ಹಿಟ್ ಆಗಿದೆ. 'RRR' ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಸಂಗೀತ ನಿರ್ದೇಶಕ ಕೀರವಾಣಿ ಹಾಗೂ ಗೀತಸಾಹಿತಿ ಚಂದ್ರಬೋಶ್ ಪ್ರಶಸ್ತಿ ಎತ್ತಿ ಹಿಡಿದಿದ್ದರು. SSMB29 ಪ್ಯಾನ್ ವರ್ಲ್ಡ್ ಸಿನಿಮಾ ಎನ್ನಲಾಗ್ತಿದೆ, ಹಾಗಾಗಿ ಕೀರವಾಣಿಯೇ ಟ್ಯೂನ್ ಹಾಕುವ ಸಾಧ್ಯತೆ ದಟ್ಟವಾಗಿದೆ.

ಇತ್ತೀಚೆಗೆ ಎಂ. ಎಂ ಕೀರವಾಣಿ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಈ ವೇಳೆ ಪತ್ರಕರ್ತರು SSMB29 ಸಿನಿಮಾ ಬಗ್ಗೆ ಕೇಳಿದ್ದಾರೆ. ಯಾವಾಗ ಸಿನಿಮಾ ಶುರು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಗೀತ ಮಾಂತ್ರಿಕ "ನನಗೂ ಗೊತ್ತಿಲ್ಲ. ಆ ಬಗ್ಗೆ ಕೇಳೋಣ ಅಂತ ಫೋನ್ ಮಾಡಿದರೆ ರಾಜಮೌಳಿ ಫೋನ್ ಸ್ವಿಚ್ ಆಫ್ ಬರುತ್ತದೆ. ಆ ಸಿನಿಮಾ ವಿಷಯ ನನ್ನವರೆಗೂ ಬಂದಿಲ್ಲ. ನನಗೂ ಗೊತ್ತಿಲ್ಲ" ಎಂದಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

SSMB29: MM Keeravani reacts over Mahesh babu -Rajamouli Film update

SSMB29 ಚಿತ್ರಕ್ಕೆ ಇಂಡೋನೇಷ್ಯಾ ಮೂಲದ ಚೆಲ್ಸಿ ಇಸ್ಲಾನ್ ಎಂಬ ನಟಿ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಈಗಾಗಲೇ ಸೈಲೆಂಟ್ ಆಗಿ ಲುಕ್ ಟೆಸ್ಟ್ ಕೂಡ ನಡೆಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಗಲೇಯಿಲ್ಲ.

'ಗುಂಟೂರು ಖಾರಂ' ರಿಲೀಸ್ ಬಳಿಕ ನಿರ್ದೇಶಕ ರಾಜಮೌಳಿ ಕ್ಯಾಂಪ್‌ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಚಿತ್ರೀಕರಣಕ್ಕೂ ಮುನ್ನ ವರ್ಕ್‌ಶಾಪ್ ಮಾಡಲು ಜಕ್ಕಣ್ಣ ನಿರ್ಧರಿಸಿದ್ದು ಮಹೇಶ್ ಬಾಬು ಸಹ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ಹಾಲಿವುಡ್ ಸಿನಿಮಾಗಳ ಶೈಲಿಯಲ್ಲಿ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ಮಾಡುವ ಸಾಧ್ಯತೆಯಿದೆ.

ಮೌಳಿ- ಮಹೇಶ್ ಕ್ರೇಜಿ ಕಾಂಬಿನೇಷನ್ ಸಿನಿಮಾ ಕಥೆ ದೇಶ ವಿದೇಶಗಳಲ್ಲಿ ನಡೆಯುತ್ತದೆ ಎನ್ನಲಾಗ್ತಿದೆ. ಅದಕ್ಕೆ ತಕ್ಕಂತೆ ವಿದೇಶಗಳಲ್ಲಿ ಚಿತ್ರೀಕರಣದ ತಯಾರಿ ನಡೀತಿದೆಯಂತೆ. ಅಮೇಜಾನ್ ಕಾಡಿನಲ್ಲೂ ಚಿತ್ರೀಕರಣ ಮಾಡುತ್ತಾರೆ ಎನ್ನುವ ವದಂತಿ ಹರಿದಾಡ್ತಿದೆ.

More from Filmibeat

English summary
MM Keeravani talks about SSMB29 movie launch;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X