'SSMB29' ಗ್ರ್ಯಾಂಡ್ ಈವೆಂಟ್‌ಗೆ ಕೌಂಟ್‌ಡೌನ್: ಫ್ಯಾನ್ಸ್‌ಗೆ ಡಬಲ್ ಧಮಾಕ!
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಮಹೇಶ್ ಬಾಬು ಜೋಡಿ ಸಿನಿಮಾ 'SSMB29' ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಕೂಡ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಇದೊಂದು ಗ್ಲೋಬ್-ಟ್ರೋಟಿಂಗ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಅನ್ನೋದು ವಿಶೇಷ.
ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗಾಗಿ ಚಿತ್ರತಂಡವು ಭರ್ಜರಿ ಪ್ರಮೋಷನಲ್ ಇವೆಂಟ್‌ಗೆ ಸಿದ್ಧವಾಗಿದೆ. ಈ ಗ್ರ್ಯಾಂಡ್ ಇವೆಂಟ್ಗ್ 'ಗ್ಲೋಬ್ಟ್ರೋಟರ್ ಲಾಂಚ್ ಇವೆಂಟ್' (GlobeTrotter Launch Event) ಎಂದು ಹೆಸರಿಡಲಾಗಿದೆ. ಈ ಮೆಗಾ ಇವೆಂಟ್ ನವೆಂಬರ್ 15 ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ (Ramoji Film City)ಯಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿರುವ ಕಾರಣ ಅಧಿಕೃತ ಕೌಂಟ್‌ಡೌನ್ ಶುರುವಾಗಿದೆ.

ಕೌಂಟ್‌ಡೌನ್ ಆರಂಭಗೊಂಡ ಕೂಡಲೇ ಮಹೇಶ್ ಬಾಬು ಅವರೇ ಪೋಸ್ಟ್ ಮಾಡಿ ಜಾಗತಿಕವಾಗಿ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದರು. ಈ ಪೋಸ್ಟ್‌ನಲ್ಲಿ ನಿರ್ದೇಶಕ ರಾಜಮೌಳಿ, ನಟಿ ಪ್ರಿಯಾಂಕಾ ಚೋಪ್ರಾ, ಖಳನಾಯಕ ಪೃಥ್ವಿರಾಜ್ ಸುಕುಮಾರನ್ ಮತ್ತು ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರನ್ನು ಟ್ಯಾಗ್ ಮಾಡಿರುವುದು ಇವೆಂಟ್‌ನ ಸ್ಟಾರ್ ಅಟ್ರ್ಯಾಕ್ಷನ್ (Star Attraction) ಕುರಿತು ಸುಳಿವು ನೀಡಿದೆ.
'ಗ್ಲೋಬ್ ಟ್ರೊಟರ್' (GlobeTrotter)ಈವೆಂಟ್‌ಗೆ ಮುನ್ನವೇ, ಚಿತ್ರತಂಡವು ಮುಖ್ಯ ಪಾತ್ರವೊಂದರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದೆ. ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಈ ಸಿನಿಮಾದಲ್ಲಿ ಖಳನಾಯಕರಾಗಿ ನಟಿಸುತ್ತಿದ್ದಾರೆ. ಅವರ ಪಾತ್ರದ ಹೆಸರು 'ಕುಂಭ' (KUMBHA).
ಈ ಕುರಿತು ಮಾತನಾಡಿರುವ ಮೇಕರ್ಸ್, "ಕುಂಭ ಒಬ್ಬ ಡಾರ್ಕ್, ಪವರ್‌ಫುಲ್ ಮತ್ತು ಕಮಾಂಡಿಂಗ್ ಖಳನಟ. ಇದುವರೆಗೆ ಪ್ರೇಕ್ಷಕರು ಕಾಣದ ರೀತಿಯಲ್ಲಿ ಆತನನ್ನು ತೋರಿಸಲಿದ್ದೇವೆ" ಎಂದು ವಿವರಿಸಿದ್ದಾರೆ. ಪೃಥ್ವಿರಾಜ್ ಅವರ ಫಸ್ಟ್ ಲುಕ್, ಈ ಸಿನಿಮಾದ ಪಾತ್ರಗಳ ಇಂಟೆನ್ಸಿಟಿ (Intensity) ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ನವೆಂಬರ್ 15ರ ಈ ಮೆಗಾ ಇವೆಂಟ್‌ನಲ್ಲಿ ಚಿತ್ರದ ಅಧಿಕೃತ ಟೈಟಲ್ (Official Title) ಹಾಗೂ ಒಂದು ಪವರ್‌ಫುಲ್ ಟೀಸರ್ (Powerfull Teaser)ಅನ್ನು ಅನಾವರಣಗೊಳಿಸುವ ಸಾಧ್ಯತೆ ಇದೆ. ಈ ಭವ್ಯ ಕಾರ್ಯಕ್ರಮವು ಜಿಯೋ ಹಾಟ್‌ಸ್ಟರ್ ಮೂಲಕ ಲೈವ್ ಸ್ಟ್ರೀಮ್ ಆಗಲಿದ್ದು, ಈ ಸುದ್ದಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.


Click it and Unblock the Notifications











