SSMB 29; ಕದ್ದು ಮುಚ್ಚಿ ರಾಜಮೌಳಿ ತಮ್ಮ ಮುಂದಿನ ಸಿನಿಮಾ ಮುಹೂರ್ತ ಮುಗಿಸಿದ್ರಾ?
'RRR' ಬಳಿಕ ರಾಜಮೌಳಿ ನಿರ್ದೇಶನದ ಹೊಸ ಸಿನಿಮಾ ಶುರುವಾಗಿದೆ. ಸದ್ದಿಲ್ಲದೇ ಚಿತ್ರದ ಮುಹೂರ್ತ ನೆರವೇರಿದೆ ಎಂದು ಸುದ್ದಿಯಾಗಿದೆ. ಜನವರಿ 2ರಂದು ಹೈದರಾಬಾದ್‌ನಲ್ಲಿ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೆ ಸಂಬಂಧಿಸಿದ ಒಂದೇ ಒಂದುಯ ಫೋಟೊ ಹೊರ ಬಂದಿಲ್ಲ.
ಸಾಮಾನ್ಯವಾಗಿ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಪ್ರಚಾರ ಆರಂಭಿಸುವವರು ಇದ್ದಾರೆ. ಚಿತ್ರದ ಪ್ರತಿ ಫೋಟೊ, ಪೋಸ್ಟರ್, ಟೀಸರ್ ವೈರಲ್ ಆಗಬೇಕು, ಪ್ರಚಾರ ಬೇಕು ಎಂದು ಬಯಸುತ್ತಿದ್ದಾರೆ. ಆದರೆ ರಾಜಮೌಳಿ ಅಂದಾಜು 1000 ಕೋಟಿ ರೂ. ಬಜೆಟ್‌ನಲ್ಲಿ ಮಾಡುತ್ತಿರುವ ಚಿತ್ರವನ್ನು ಗುಟ್ಟು ಕಾಯ್ದುಕೊಂಡಿರುವುದು ಯಾಕೆ? ಎನ್ನುವ ಚರ್ಚೆ ಶುರುವಾಗಿದೆ.

15 ವರ್ಷಗಳ ಹಿಂದೆಯೇ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ರಾಜಮೌಳಿ ಚರ್ಚಿಸಿದ್ದರು. ಸ್ವತಃ ಮಹೇಶ್ ಟ್ವೀಟ್ ಮಾಡಿ ಈ ವಿಚಾರ ತಿಳಿಸಿದ್ದರು. ಆದರೆ ಬಳಿಕ ಅದು ಸಾಧ್ಯವಾಗಲಿಲ್ಲ. ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು. ಅಂತೂ ಇಂತೂ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ಜಕ್ಕಣ್ಣ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಬೇರೆ ಸಿನಿಮಾ ಒಪ್ಪಿಕೊಳ್ಳದೇ ಈ ಚಿತ್ರಕ್ಕಾಗಿ ಸೂಪರ್ ಸ್ಟಾರ್ ಕಾಯುತ್ತಿದ್ದಾರೆ.
ಹೈದರಾಬಾದ್‌ನಲ್ಲಿರುವ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ SSMB 29 ಸಿನಿಮಾ ಮುಹೂರ್ತ ನಡೆದಿದೆ ಎನ್ನಲಾಗ್ತಿದೆ. ಕೆಲವೇ ಆಪ್ತರಿಗೆ ಮಾತ್ರ ಆಹ್ವಾನ ಇತ್ತು. ಮಾಧ್ಯಮದವರನ್ನು ಕೂಡ ಕರೆದಿರಲಿಲ್ಲ. ಪೂಜೆ ಮುಗಿದಿದ್ದು ಆದಷ್ಟು ಬೇಗ ಈ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಇತ್ತೀಚೆಗೆ 'ಗೇಮ್ ಚೇಂಜರ್' ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ರಾಜಮೌಳಿ ಬಂದಿದ್ದರು. ಅಲ್ಲಿ ಈ ಬಗ್ಗೆ ಕೇಳಿದಾಗ ಉತ್ತರಿಸದೇ ನುಣುಚಿಕೊಂಡಿದ್ದರು.
ಮಹೇಶ್ ಬಾಬು ಇತ್ತೀಚಿನ ವರ್ಷಗಳಲ್ಲಿ ತಮ್ಮ ಸಿನಿಮಾಗಳ ಮುಹೂರ್ತಕ್ಕೆ ಹಾಜರಾಗುತ್ತಿರಲಿಲ್ಲ. ಪತ್ನಿ ನಮ್ರತಾ ಭಾಗಿ ಆಗುತ್ತಿದ್ದರು. ಆದರೆ ಆ ನಿಮಯ ಮೀರಿ ಸ್ವತಃ ಮಹೇಶ್ ಬಾಬು ಚಿತ್ರದ ಪೂಜೆಗೆ ಭಾಗಿ ಆಗಿದ್ದಾರೆ ಎಂದು ವರದಿಯಾಗಿದೆ. ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ. ಆ ಲುಕ್ ರಿವೀಲ್ ಆಗಬಾರದು ಎಂದು ಚಿತ್ರತಂಡ ಮುಂಜಾಗ್ರತೆ ವಹಿಸಿದೆ ಎನ್ನಲಾಗ್ತಿದೆ.
ಪ್ಯಾನ್ ವರ್ಲ್ಡ್ ಮಟ್ಟದಲ್ಲಿ SSMB 29 ಸಿನಿಮಾ ಮೂಡಿ ಬರ್ತಿದೆ. ಹಾಲಿವುಡ್ ಸ್ಟುಡಿಯೋ ಜೊತೆಗೂ ಒಪ್ಪಂದ ಮಾಡಿಕೊಂಡು ಜಕ್ಕಣ್ಣ ಅಖಾಡಕ್ಕೆ ಇಳಿಯುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಈ ಬಹುಕೋಟಿ ವೆಚ್ಚದ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕತೆ ಬರೆದಿದ್ದು ಜಕ್ಕಣ್ಣ ಚಿತ್ರಖತೆ ಬರೆದು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಮಹೇಶ್ ಬಾಬು ವಿದೇಶಕ್ಕೆ ತೆರಳಿದ್ದರು. ಅಲ್ಲೇ ಕೆಲ ದಿನಗಳ ಕಾಲ ಇದ್ದು ವರ್ಕ್‌ಔಟ್ ಮಾಡಿ ಬಂದಿದ್ದರು. ಮುಂದಿನ ಚಿತ್ರದ ಪಾತ್ರಕ್ಕಾಗಿ ಈ ರೀತಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಇತ್ತೀಚೆಗೆ ಸೂಪರ್ ಸ್ಟಾರ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಲುಕ್ ರಿವೀಲ್ ಆಗುತ್ತದೆ ಎನ್ನುವ ಕಾರಣಕ್ಕೆ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ.
ರಾಜಮೌಳಿ ನಿರ್ದೇಶನದ 'RRR' ಚಿತ್ರವನ್ನು ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ಮೇಕರ್ಸ್ ಕೊಂಡಾಡಿದ್ದರು. ಹಾಗಾಗಿ ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮೌಳಿ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಸಹಜವಾಗಿಯೇ ಚಿತ್ರದ ಬಜೆಟ್, ಸ್ಕೇಲ್, ಮಾರ್ಕೆಟಿಂಗ್, ಪ್ರಮೋಷನ್, ರಿಲೀಸ್ ದೊಡ್ಡದಾಗಿ ಇರುತ್ತದೆ.
ರಾಜಮೌಳಿ ನಿರ್ದೇಶನದ 'RRR' ಚಿತ್ರವನ್ನು ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ಮೇಕರ್ಸ್ ಕೊಂಡಾಡಿದ್ದರು. ಹಾಗಾಗಿ ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮೌಳಿ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಸಹಜವಾಗಿಯೇ ಚಿತ್ರದ ಬಜೆಟ್, ಸ್ಕೇಲ್, ಮಾರ್ಕೆಟಿಂಗ್, ಪ್ರಮೋಷನ್, ರಿಲೀಸ್ ದೊಡ್ಡದಾಗಿ ಇರುತ್ತದೆ.


Click it and Unblock the Notifications











