ರಾಜಮೌಳಿ- ಸುದೀಪ್ 'ಈಗ' ಚಿತ್ರಕ್ಕೆ ಫ್ರೆಂಚ್ ಪ್ರೇಕ್ಷಕರು ಫಿದಾ; ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮ

ಕಿಚ್ಚ ಸುದೀಪ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ 'ಈಗ' ಸಿನಿಮಾ ತೆರೆಕಂಡು 14 ವರ್ಷ ಕಳೆದಿದೆ. ಆದರೆ ಇವತ್ತಿಗೂ ಆ ಸಿನಿಮಾ ಕ್ರೇಜ್ ಕಮ್ಮಿ ಆಗಿಲ್ಲ. ಇತ್ತೀಚೆಗೆ ಪ್ಯಾರೀಸ್‌ನಲ್ಲಿ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲಿನ ಪ್ರೇಕ್ಷಕರು ಮೌಳಿ ನಿರ್ದೇಶನ ಹಾಗೂ ಸುದೀಪ್ ನಟನೆಯ ನೋಡಿ ಹುಚ್ಚೆದ್ದು ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗ್ತಿದೆ.

ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ಮುನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾ ಇದು. ಮಹಿಳಾ ಪೀಡಕ ದುಷ್ಟ ಉದ್ಯಮಿಯ ವಿರುದ್ಧ ಸಣ್ಣ ನೊಣ ಸೇಡು ತೀರಿಸಿಕೊಳ್ಳುವ ಕಥೆ ಚಿತ್ರದಲ್ಲಿತ್ತು. ಅವತ್ತಿನ ಕಾಲಕ್ಕೆ ಸಿನಿಮಾ ಮಾಡಿದ ಜಾದೂ ಅಷ್ಟಿಷ್ಟಲ್ಲ. ರಾಜಮೌಳಿ ವಿಷನ್, ಸುದೀಪ್ ಪರ್ಫಾರ್ಮೆನ್ಸ್ ನೋಡಿದವರು ಕಳ್ದೋಗಿದ್ರು. ತಾನು ಬಿಟ್ರೆ ಮತ್ಯಾರೂ ಆ ಪಾತ್ರ ಮಾಡೋಕೆ ಸಾಧ್ಯವಿಲ್ಲ ಎನ್ನುವಂತೆ ಸುದೀಪ್ ನಟಿಸಿ ಕಮಾಲ್ ಮಾಡಿದ್ದರು.

Standing Ovation for Sudeep and Rajamouli s Eega at its Paris lyon screening

ಸದ್ಯ ರಾಜಮೌಳಿ ಯೂರೋಪ್ ಪ್ರವಾಸದಲ್ಲಿದ್ದಾರೆ. ಈ ವೇಳೆ 'ಆರ್‌ಆರ್‌ಆರ್‌', 'ಬಾಹುಬಲಿ' ಹಾಗೂ 'ಈಗ' ಸಿನಿಮಾಗಳ ಪ್ರದರ್ಶನ ನಡೆದಿದೆ. ಮುಖ್ಯವಾಗಿ 'ಈಗ' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಸುದೀಪ್ ನಟನೆಯ ನೋಡಿ ಫ್ರೆಂಚ್ ಪ್ರೇಕ್ಷಕರು ಮಾರು ಹೋಗಿದ್ದಾರೆ. ಬಳಿಕ ನಟನೆ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಕೂಡ ರಾಜಮೌಳಿ ಭಾಗಿ ಆಗಿದ್ದರು. 2012ರಲ್ಲಿ 'ಈಗ' ಸಿನಿಮಾ ತೆರೆಗೆ ಬಂದಿತ್ತು. ಸಮಂತಾ ನಾಯಕಿಯಾಗಿ ನಟಿಸಿದ್ದ ಚಿತ್ರದಲ್ಲಿ ನಾನಿ ಹೀರೊ ಆಗಿ ಮಿಂಚಿದ್ದರು. ನೆಗೆಟಿವ್ ರೋಲ್‌ನಲ್ಲಿ ಸುದೀಪ್ ಇಡೀ ಸಿನಿಮಾ ಆವರಿಸಿಕೊಂಡಿದ್ದರು.

ಕಿಚ್ಚನ ನಟನೆಗೆ ಫಿದಾ

ತಾನು ಇಷ್ಟಪಟ್ಟ ಹುಡುಗಿ ಬೇರೊಬ್ಬನನ್ನು ಪ್ರೀತಿಸುತ್ತಿರುವ ವಿಷಯ ಗೊತ್ತಾಗಿ ಉದ್ಯಮಿ ಸುದೀಪ್ ಆ ಯುವಕನನ್ನು ಕೊಲ್ಲುತ್ತಾನೆ. ಅದೇ ಯುವಕ ಆತ್ಮ ಒಂದು ನೊಣದ ಒಳಗೆ ಸೇರಿಕೊಂಡು ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆ ಚಿತ್ರದಲ್ಲಿತ್ತು. ಸಣ್ಣ ನೊಣ ಹೇಗೆ ಉದ್ಯಮಿ ಸುದೀಪ್ ವಿರುದ್ಧ ಹೋರಾಟ ಮಾಡುತ್ತದೆ ಎನ್ನುವುದನ್ನು ಕಣ್ಣಿಗೆ ಕಟ್ಟಿದಂತೆ ಜಕ್ಕಣ್ಣ ಕಟ್ಟಿಕೊಟ್ಟಿದ್ದರು. ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆಗೊಂಡಿದ್ದರೂ 'ಈಗ' ಸಿನಿಮಾ ನೋಡುಗರಿಗೆ ಅದ್ಭುತ ಅನುಭವ ನೀಡಿತ್ತು. ತೆಲುಗು ಮಾತ್ರವಲ್ಲದೇ ಹಿಂದಿ, ತಮಿಳಿಗೂ ಡಬ್ ಆಗಿ ಗೆದ್ದಿತ್ತು. ಆಗ ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಅವಕಾಶ ಇರಲಿಲ್ಲ. ಹಾಗಾಗಿ ಕನ್ನಡಕ್ಕೆ ಡಬ್ ಆಗಿ ಬಂದಿರಲಿಲ್ಲ.

ರಾಜಮೌಳಿಗೆ ಅಪರೂಪದ ಗೌರವ

ಸುದೀಪ್ ನಟನೆಯ 'ಈಗ' ಚಿತ್ರಕ್ಕೆ ದಶಕದ ಬಳಿಕ ಕೂಡ ಅದ್ಭುತ ರೆಸ್ಪಾನ್ಸ್ ಸಿಗುತ್ತಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದು ನಮ್ಮ ಕಿಚ್ಚನ ಗತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ಫ್ರಾನ್ಸ್‌ನ ಲಿಯಾನ್‌ ನಗರಕ್ಕೂ ರಾಜಮೌಳಿ ಭೇಟಿ ನೀಡಿದ್ದಾರೆ. ಅಲ್ಲಿನ ಲುಮಿಯೆರ್ ಮ್ಯೂಸಿಯಂ ಹಾಲ್‌ನಲ್ಲಿ 'ಈಗ' ಹಾಗೂ 'ಆರ್‌ಆರ್‌ಆರ್' ಸಿನಿಮಾ ಪ್ರದರ್ಶನ ಮಾಡಲಾಗಿದೆ. ಅಲ್ಲಿ ಜಕ್ಕಣ್ಣಗೆ ಅಪರೂಪದ ಗೌರವ ಲಭಿಸಿದೆ. ಲಿಯಾನ್ಸ್ ವಾಲ್ ಆಫ್ ಫಿಲ್ಮ್‌ಮೇಕರ್ಸ್‌ ಪಟ್ಟಿಯಲ್ಲಿ ರಾಜಮೌಳಿಗೆ ಜಾಗ ಸಿಕ್ಕಿದೆ. ಸ್ಕಾರ್ಸೆಸೆ, ಟ್ಯಾರಂಟಿನೊ, ಕೊಪ್ಪೊಲಾ ಮತ್ತು ಈಸ್ಟ್‌ವುಡ್ ಜೊತೆಗೆ ಎಸ್‌ಎಸ್ ರಾಜಮೌಳಿ ಅವರ ಹೆಸರಿನ ನಾಮಫಲಕ ಹಾಕಲಾಗಿದೆ.

ಜಕ್ಕಣ್ಣ ಟ್ವೀಟ್

ರಾಜಮೌಳಿ ಟ್ವೀಟ್ ಮಾಡಿ ಈ ಸಂಭ್ರಮ ಹಂಚಿಕೊಂಡಿದ್ದಾರೆ. "ಫ್ರಾನ್ಸ್‌ನ ಲಿಯಾನ್‌ನಲ್ಲಿ 'ಈಗ' ಮತ್ತು 'ಆರ್‌ಆರ್‌ಆರ್' ಚಿತ್ರಗಳು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಲುಮಿಯೆರ್ ಮ್ಯೂಸಿಯಂ ಮತ್ತು ಸ್ಕ್ರೀನಿಂಗ್ ಹಾಲ್‌ಗೆ ಭೇಟಿ ನೀಡಿದ್ದೆ. ಇನ್‌ಸ್ಟಿಟ್ಯೂಟ್ ಲುಮಿಯೆರ್ ಮತ್ತು ಕೇನ್ಸ್ ಚಲನಚಿತ್ರೋತ್ಸವದ ನಿರ್ದೇಶಕ ಥಿಯೆರ್ರಿ ಫ್ರೆಮೌಕ್ಸ್ ನನ್ನನ್ನು ಪರಿಚಯಿಸಿದ್ದು ವಿಶೇಷ. ಬಳಿಕ ಮಾರ್ಟಿನ್ ಸ್ಕಾರ್ಸೆಸೆ, ಕ್ಲಿಂಟ್ ಈಸ್ಟ್‌ವುಡ್, ಕ್ವೆಂಟಿನ್ ಟ್ಯಾರಂಟಿನೊ, ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾ ಮುಂತಾದ ದಂತಕಥೆಗಳ ಹೆಸರುಗಳ ಜೊತೆ ನನ್ನ ಹೆಸರನ್ನು ಶಾಶ್ವತವಾಗಿ ಇರಿಸುವ ಗೌರವಕ್ಕೆ ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ" ಎಂದು ಬರೆದುಕೊಂಡಿದ್ದಾರೆ.

Read more about: sudeep rajamouli tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X