For Quick Alerts
  ALLOW NOTIFICATIONS  
  For Daily Alerts

  ಕುರ್ಚಿಯಿಂದ ಚಿರಂಜೀವಿಯನ್ನು ಎಬ್ಬಿಸಿ ಅವಮಾನಿಸಿದ್ದ ದೊಡ್ಡ ನಟ

  |

  ಭಾರತದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕೆಲವೇ ನಟರಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹ ಒಬ್ಬರು.

  Brahma ಚಿತ್ರದ ಅದ್ದೂರಿ ತೆರೆ ಹಿಂದಿನ ದೃಶ್ಯಗಳು | Behind the scenes | Filmibeat Kannada

  150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಚಿರಂಜೀವಿ ಈಗಲೂ ತೆಲುಗಿನ ನಂಬರ್ 1 ನಟ. ಅವರ ಸಿನಿಮಾಗಳು ಬಿಡುಗಡೆಯಾದರೆ ಅಭಿಮಾನಿಗಳಿಗೆ ಹಬ್ಬ, ಚಿತ್ರಮಂದಿರಗಳು ಹೌಸ್‌ಫುಲ್.

  ಯಾವುದೇ ಗಾಡ್‌ಫಾದರ್‌ಗಳಿಲ್ಲದೆ ಸ್ವಂತ ಪರಿಶ್ರಮದಿಂದ ನಂಬರ್ ಒನ್ ಸ್ಟಾರ್ ಆಗಿ ಬೆಳೆದ ಚಿರಂಜೀವಿ, ಸಿನಿ ಬದುಕಿನ ಆರಂಭದಲ್ಲಿ ಬಹುಕಷ್ಟಪಟ್ಟವರು. ಅವರು ಅನುಭವಿಸಿದ ಅವಮಾನವೊಂದರ ಬಗ್ಗೆ ಚಿರಂಜೀವಿ ಸಹೋದರ ನಾಗಬಾಬು ಇತ್ತೀಚೆಗಷ್ಟೆ ಬಹಿರಂಗವಾಗಿ ಮಾತನಾಡಿದ್ದಾರೆ.

  ಚೆನ್ನೈ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ರಜನೀಕಾಂತ್ ಅವರದ್ದು ಮೊದಲನೇ ಬ್ಯಾಚ್ ಆಗಿದ್ದರೆ, ಚಿರಂಜೀವಿ ಅವರದ್ದು ಎರಡನೇಯ ಬ್ಯಾಚ್ ಅಂತೆ. ನಂತರ ಅದನ್ನು ಅಡಿಯಾರ್ ಇನ್ಸ್ಟಿಟ್ಯೂಟ್ ಆಗಿ ಬದಲಾಯಿಸಿದರಂತೆ. ಆಗ ಚಿರಂಜೀವಿ ಜೊತೆಗೆ ಸುಧಾಕರ್, ಹರಿ ಪ್ರಸಾದ್ ಹಾಗೂ ಪುರಾಣಂ ಸೂರಿ ಎಂಬ ಗೆಳೆಯರು ಇದ್ದರಂತೆ.

  ಮೊದಲ ಸಾಲಿನಲ್ಲಿ ಕೂತಿದ್ದ ಚಿರಂಜೀವಿ ಹಾಗೂ ಗೆಳೆಯರು

  ಮೊದಲ ಸಾಲಿನಲ್ಲಿ ಕೂತಿದ್ದ ಚಿರಂಜೀವಿ ಹಾಗೂ ಗೆಳೆಯರು

  ಪುರಾಣಂ ಸೂರಿ ಕುಟುಂಬದವರು ಅದಾಗಲೇ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಮಾಡುತ್ತಿದ್ದರಂತೆ. ಒಮ್ಮೆ ಒಬ್ಬ ಸ್ಟಾರ್ ನಟನ ಸಿನಿಮಾದ ಪ್ರಿವ್ಯೂ ಶೋಗೆ ಪುರಾಣಂ ಸೂರಿ ಕುಟುಂಬದ ಕಡೆಯಿಂದ ಚಿರಂಜೀವಿ, ಸುಧಾಕರ್ ಹಾಗೂ ಹರಿ ಪ್ರಸಾದ್‌ ಹೋಗಿ ಮೊದಲನೇ ಸಾಲಿನಲ್ಲಿ ಕುಳಿತುಕೊಂಡಿದ್ದರಂತೆ.

  ಚಿರಂಜೀವಿಯನ್ನು ಎಬ್ಬಿಸಿ ಕಳಿಸಿದ್ದ ಸ್ಟಾರ್ ನಟ

  ಚಿರಂಜೀವಿಯನ್ನು ಎಬ್ಬಿಸಿ ಕಳಿಸಿದ್ದ ಸ್ಟಾರ್ ನಟ

  ಆಗ ಬಂದ ಸ್ಟಾರ್ ನಟ, ಅವರ ಕಡೆಯವರಿಗಾಗಿ ಆ ಸೀಟುಗಳು ಬೇಕೆಂದು ಚಿರಂಜೀವಿ ಹಾಗೂ ಗೆಳೆಯರು ಕೂತಿದ್ದ ಕುರ್ಚಿಗಳಿಂದ ಗಡುಸಾಗಿಯೇ ಮಾತನಾಡಿ ಎಬ್ಬಿಸಿ ಹಿಂದೆ ಕಳಿಸಿಬಿಟ್ಟರಂತೆ. ಇದು ಚಿರಂಜೀವಿಗೆ ಬಹಳ ಬೇಸರ ತರಿಸಿತ್ತಂತೆ.

  ಅಭಿಪ್ರಾಯ ಹೇಳಲು ಹೋಗದಿದ್ದ ಚಿರಂಜೀವಿ

  ಅಭಿಪ್ರಾಯ ಹೇಳಲು ಹೋಗದಿದ್ದ ಚಿರಂಜೀವಿ

  ಸಿನಿಮಾ ಬಗ್ಗೆ ಅಭಿಪ್ರಾಯ ತಿಳಿಸಲು ಪುರಾಣಂ ಸೂರಿ ಮನೆಗೆ ಸುಧಾಕರ್ ಮತ್ತು ಹರಿ ಪ್ರಸಾದ್ ಮಾತ್ರವೇ ಹೋಗಿದ್ದರಂತೆ. ಆಗ ಚಿರಂಜೀವಿ ಏಕೆ ಬರಲಿಲ್ಲವೆಂದು ವಿಚಾರಿಸಿದಾಗ ಚಿತ್ರಮಂದಿರದಲ್ಲಿ ನಡೆದ ಘಟನೆ ವಿವರಿಸಿದರಂತೆ ಸುಧಾಕರ್.

  ಚಿರಂಜೀವಿ ಅಂದು ಮಾಡಿದ್ದ ಸಂಕಲ್ಪ

  ಚಿರಂಜೀವಿ ಅಂದು ಮಾಡಿದ್ದ ಸಂಕಲ್ಪ

  ಕೂಡಲೇ ಚಿರಂಜೀವಿಯನ್ನು ಭೇಟಿಯಾದ ಪುರಾಣಂ ಸೂರಿ, 'ನೀನು ಖಂಡಿತ ದೊಡ್ಡ ನಟನಾಗುತ್ತೀಯ, ಇಂಥಹಾ ಕ್ಷುಲ್ಲಕ ವಿಷಯಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡ ಎಂದು ಸಮಾಧಾನದ ಮಾತಾಡಿದರಂತೆ ಸೂರಿ. ಇದಕ್ಕೆ ಪ್ರತಿಕ್ರಿಯಿಸಿದ ಚಿರಂಜೀವಿ, ಇಷ್ಟು ದಿನ ನಾಯಕ ನಟ ಆದರೆ ಸಾಕು ಎಂದುಕೊಂಡಿದ್ದೆ. ನಂಬರ್ ಒನ್ ನಾಯಕ ನಟ ಆಗಬೇಕೆಂದು ಈಗ ನಿಶ್ಚಯಿಸಿದೆ ಎಂದರಂತೆ ಚಿರಂಜೀವಿ. ನಂತರ ಅವರು ನಂಬರ್ 1 ನಟ ಆದರೂ ಸಹ.

  English summary
  A big star actor once humiliated Chiranjeevi in Chennai. Chiranjeevi decided to become number one actor after that incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X