ನಮ್ಮ ಜೊತೆ ಮಲಗು, ದುಬೈನಲ್ಲಿರುವ ಬಂಗಲೆ ನಿನ್ನದೇ ; ಪಾತ್ರಕ್ಕಾಗಿ ಪಲ್ಲಂಗ- ಈ ಚೆಲುವೆಯ ಮೇಲಿದೆ ಉದ್ಯಮಿಗಳ ಕಣ್ಣು
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ದ ಮನಸ್ಸುಗಳು ಖೆಡ್ಡಾ ಎಂಬ ಅರಿವು ಇದ್ದರೂ ಬಿದ್ದು ಏಳುವ ಸೀಚುವೇಷನ್ನುಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ,
ಚಿತ್ರೀಕರಣದ ಸಮಯದಲ್ಲಿ..ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನು ಮಾಡಿಸುವ ಮೂಲಕ ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ, ಒಂದಿಲ್ಲೊಂದು ರೀತಿಯಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಸಮಯ-ಸಂದರ್ಭ ಬಂದಾಗ ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಾರೆ. ಉದಾಹರಣೆಗೆ ರೇಖಾ ಭೋಜ್.

ಹೌದು ರೇಖಾ ಭೋಜ್.. ಪಕ್ಕದ ಆಂಧ್ರದ ಚೆಲುವೆ. ''ಕಾಲಾಯ ತಸ್ಮೈ ನಮ''.. ''ಮಾಂಗಲ್ಯಂ''.. ''ರಂಗೀಲಾ''.. ''ದಾಮಿನಿ ವಿಲ್ಲಾ''.. ಹೀಗೆ ಕೆಲ ಚಿತ್ರಗಳಲ್ಲಿ ಆಕ್ಟ್ ಮಾಡಿರುವ ರೇಖಾಗೆ ಚಿತ್ರರಂಗದಲ್ಲಿ ಸದ್ಯ ಮಾಡಲು ಹೆಚ್ಚೇನು ಕೆಲಸ ಇಲ್ಲ. ಈ ಕಾರಣಕ್ಕೆ ತಮ್ಮೂರು ವೈಜಾಗ್‌ನಲ್ಲಿ ಕುಳಿತು ತನ್ನದೇ ಯೂಟ್ಯೂಬ್ ಚಾನೆಲ್ ಶುರು ಮಾಡಿರುವ ರೇಖಾ ತಮ್ಮ ಈ ಸ್ಟುಡಿಯೋ ಮೂಲಕ ಸದ್ಯ ಚಾರ್ಟ್ ಬಸ್ಟರ್ ಹಾಡುಗಳ ಕವರ್ ಹಾಡುಗಳಿಗೆ ಹೆಜ್ಜಾ ಹಾಕುತ್ತಾ, ಆ ವಿಡಿಯೋಗಳನ್ನು ತಮ್ಮ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಇನ್ನೂ ಈ ರೇಖಾಗೆ ಆಗಾಗ ವಿವಾದಕ್ಕೀಡಾಗುವುದು ಕೂಡ ಅಭ್ಯಾಸ ಆಗಿದೆ. 2023ರಲ್ಲಿ ಭಾರತ ವರ್ಲ್ಡ್ ಕಪ್ ಗೆದ್ದರೆ ವಿಶಾಖಪಟ್ಟಣಂನ ಬೀಚ್‌ನಲ್ಲಿ 'ಅರೆಬೆತ್ತಲೆ'ಯಾಗಿ ಓಡುವುದಾಗಿ ಹೇಳಿದ್ದರು ಇವರು. ಇನ್ನು ಚಿತ್ರರಂಗದಲ್ಲಿ ಅಂದುಕೊಂಡ ಅವಕಾಶಗಳು ಸಿಗದಿದ್ದಾಗ.. ಪಾತ್ರ ಬೇಕಂದರೆ ಪಲ್ಲಂಗಕ್ಕೇರು ಎಂದು ಹೇಳುವರ ಸಂಖ್ಯೆ ಹೆಚ್ಚಾದಾಗ.. ಕಿಡ್ನಿ ಮಾರಿ ಖುದ್ದು ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಕೂಡ ಹೇಳಿದವರು ಇವರು.
ಇಂಥಾ ರೇಖಾ ಭೋಜ್ ಇದೀಗ ಮತ್ತೊಮ್ಮೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ''iDream Mahila'' ಯೂಟ್ಯೂಬ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರೇಖಾ, ನಾನು ನನ್ನ ಜೀವಮಾನದಲ್ಲಿ ಹೈದರಾಬಾದ್‌ಗೆ ಹೋಗಿಲ್ಲ. ಎಲ್ಲವನ್ನೂ ವೈಜಾಗ್‌ನಲ್ಲಿ ಕುಳಿತುಕೊಂಡೇ ನಿಭಾಯಿಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಅವಕಾಶ ನೀಡುವ ನೆಪದಲ್ಲಿ ನನಗೆ ಹಲವು ಕರೆಗಳು ಬರುತ್ತವೆ, ಆದರೆ ಹೀಗೆ ಬಂದ ಕರೆಗಳೆಲ್ಲಾ ಚಿತ್ರರಂಗದಿಂದಲೇ ಬರುತ್ತಿವೆ, ಅವೆಲ್ಲಾ ನಿಜವಾದ ಕರೆಗಳು ಎಂದು ಹೇಳಲು ಸಾಧ್ಯ ಇಲ್ಲ ಎಂದು ಹೇಳಿರುವ ರೇಖಾ ಕರೆ ಮಾಡುವ ಹಲವರು ಹೀಗಿರುತ್ತೆ.. ಹಾಗಿರುತ್ತೆ.. ನಿಮಗೆ ಓಕೆನಾ ಎಂದು ಹೇಳುತ್ತಾರೆ ಎಂದು ಹೇಳಿದ್ದಾರೆ.

ಇನ್ನೂ ಕೆಲವರು ನನಗೆ ಫೋರ್ಟ್‌ಪೋಲಿಯೊ ಕಳುಹಿಸುತ್ತಾರೆ. ಅದರಲ್ಲಿ ಮಲಗಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿರಲಾಗಿರುತ್ತೆ ಎಂದು ಕೂಡ ಹೇಳಿರುವ ರೇಖಾ ಒಂದೆರಡು ಬಾರಿ ನನಗೆ ಹೀಗೆ ಬಂದ ಪೋರ್ಟ್‌ಪೋಲಿಯೊವನ್ನು ಅವರಿಗೆ ಮರಳಿ ಕಳುಹಿಸಿದ್ದೇನೆ, ನಾನೇನಾದರೂ ದೂರು ನೀಡಿದರೆ ನಿಮ್ಮ ಬದುಕು ಬೀದಿ ಪಾಲಾಗುತ್ತೆ ಎಂದು ಹೇಳಿದ್ದೇನೆ ಕೂಡ ಎಂದು ಹೇಳಿದ್ದಾರೆ.
ಮುಂದುವರೆದು ಹೆಣ್ಣೆಂದರೆ ಭೋಗದ ವಸ್ತು ಎಂದು ಅಂದುಕೊಂಡವರಲ್ಲಿ ಕೇವಲ ಚಿತ್ರರಂಗದವರು ಮಾತ್ರ ಇಲ್ಲ. ಬೇರೆ ಬೇರೆ ಉದ್ಯಮದ ಜನ ಕೂಡ ಇದ್ದಾರೆ ಎಂದು ಹೇಳಿರುವ ರೇಖಾ ಭೋಜ್ ನನಗೆ ಹಲವಾರು ಉದ್ಯಮಿಗಳು ದುಬೈನಲ್ಲಿ ನಿನ್ನ ಹೆಸರಿಗೆ ವಿಲ್ಲಾ ಬರೆದುಕೊಡುತ್ತೇನೆ, ನನ್ನ ಜೊತೆ ಇರು ಸಾಕು ಎಂದು ಹೇಳಿದವರು ಇದ್ದಾರೆ ಎಂದು ಹೇಳಿದ್ದಾರೆ. ನನಗೆ ಬಂಗಲೆಯ ಆಮಿಷ ನೀಡಿದ್ದಾರೆ. ಹಣದ ಆಸೆ ತೋರಿಸಿದ್ದಾರೆ ಎಂದು ಹೇಳಿರುವ ರೇಖಾ ನನ್ನ ಹಿನ್ನೆಲೆಯೇನು..? ನನ್ನ ಅಭಿರುಚಿ ಏನು..? ಯಾವುದನ್ನು ನೋಡದೇ, ನನ್ನ ದುರುಪಯೋಗ ಮಾಡಿಕೊಂಡು ಹಣ ಮಾಡಲು ಹಲವಾರು ಜನಪ್ರಯತ್ನ ಮಾಡಿದ್ಧಾರೆ ಎಂದು ಹೇಳಿದ್ದಾರೆ.
ಅವರಿಗೆ ಬೇಕಿರುವುದು ನನ್ನ ದೇಹ ಹೊರತು ನನ್ನಲ್ಲಿನ ಕಲೆ ಅಲ್ಲ ಎಂದು ಕೂಡ ಹೇಳಿರುವ ರೇಖಾ ಭೋಜ್ ಫೇಸ್ ಬುಕ್.. ಇನ್‌ಸ್ಟಾಗ್ರಾಮ್ ಮೂಲಕ ಇವರಿಗೆ ನಂಬರ್ ಸಿಗುತ್ತೆ, ಇನ್ನೂ ಕೆಲ ಒಮ್ಮೆ ಪಿಆರ್‌ಓಗಳ ಬಳಿ ಅಥವಾ ಮ್ಯಾನೇಜರ್‌ಗಳ ಬಳಿ ಕೇಳಿ ಇವರು ನಂಬರ್ ಪಡೆಯುತ್ತಾರೆ. ಹೀಗೆ ಪಡೆದು ಹಾಸಿಗೆಗೆ ಕರೆಯುತ್ತಾರೆ ಎಂದು ಹೇಳಿದ್ದಾರೆ. ನಾನು ಹೀಗೆ ಅಡ್ಡದಾರಿಯಲ್ಲಿ ಹೋಗಿದ್ದರೆ ಇವತ್ತು ನನ್ನ ಕೈತುಂಬಾ ಹಣ ಇರುತ್ತಿತ್ತು. ಕಾರು ಬಂಗಲೆಗಳು ಇರುತ್ತಿದ್ದವು ಆದರೆ ನಾನು ನನ್ನ ಬಳಿ ಇರುವುದನ್ನೆಲ್ಲಾ ಮಾರಿ ಅವಕಾಶಕ್ಕಾಗಿ ಅಲೆಯುತ್ತಿದ್ದೇನೆ ಎಂದು ಕೂಡ ರೇಖಾ ಹೇಳಿದ್ದಾರೆ. ಸದ್ಯ ರೇಖಾ ಭೋಜ್ ಅವರ ಈ ಹೇಳಿಕೆ ತೆಲುಗು ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ.


Click it and Unblock the Notifications











