ಮಹೇಶ್ ಬಾಬು ಕತ್ತಿನ ಮೇಲಿರುವ ಟ್ಯಾಟೂ ಹಿಂದಿನ ಕತೆ
ತೆಲುಗು ಸ್ಟಾರ್ ಮಹೇಶ್ ಬಾಬು ನಟಿಸುತ್ತಿರುವ ಹೊಸ ಚಿತ್ರದ ಪೋಸ್ಟರ್ ಮತ್ತು ಹೆಸರು ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ.
'ಸರ್ಕಾರಿ ವಾರಿ ಪಾಠ' ಎಂಬ ಹೆಸರಿನ ಸಿನಿಮಾದಲ್ಲಿ ಮಹೇಶ್ ನಟಿಸುತ್ತಿದ್ದು, ಚಿತ್ರದ ಪೋಸ್ಟರ್ ವಿಭಿನ್ನವಾಗಿದೆ, ಗಮನಸೆಳೆಯುವಂತಿದೆ.
ಪೋಸ್ಟರ್‌ನಲ್ಲಿ ಮಹೇಶ್ ಬಾಬು ಇದ್ದಾರಾದರೂ ಅವರ ಮುಖದರ್ಶನ ಆಗುತ್ತಿಲ್ಲ. ಬದಲಿಗೆ ಅವರ ಮುಖದ ಹಿಂಭಾಗ ಮಾತ್ರವೇ ಪೋಸ್ಟರ್‌ನಲ್ಲಿ ಕಾಣುವಂತೆ ವಿನ್ಯಾಸ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಗಮನ ಸೆಳೆಯುತ್ತಿರುವುದು ಮಹೇಶ್ ಬಾಬು ಕತ್ತಿನ ಭಾಗದಲ್ಲಿರುವ ರೂಪಾಯಿ ಟ್ಯಾಟೂ.

ಪೋಸ್ಟರ್ ನಲ್ಲಿ ಗಮನ ಸೆಳೆಯುತ್ತಿದೆ ರೂಪಾಯಿ ನಾಣ್ಯ
ಸರ್ಕಾರಿ ವಾರಿ ಪಾಠ ಸಿನಿಮಾ ಪೋಸ್ಟರ್‌ನಲ್ಲಿ ಗಮನ ಸೆಳೆಯುತ್ತಿರುವುದು ಮಹೇಶ್ ಬಾಬು ಕತ್ತಿನ ಮೇಲಿರುವ ಒಂದು ರೂಪಾಯಿ ನಾಣ್ಯದ ಟ್ಯಾಟು. ಈ ಟ್ಯಾಟೂ ಕತೆಯ ಸುಳಿವು ಬಿಟ್ಟುಕೊಡುತ್ತಿದೆ ಎನ್ನಲಾಗುತ್ತಿದೆ. ಪೋಸ್ಟರ್‌ನಲ್ಲಿ ಹೈಲೆಟ್ ಆಗಿದೆಯೆಂದರೆ ಈ ಟ್ಯಾಟೂ ಕತೆಯಲ್ಲಿ ಮಹತ್ವದ ಪಾತ್ರವಹಿಸಿದೆಯೆಂದೇ ಅರ್ಥ.

ಡಾಲರ್ ವಿನ್ಯಾಸದ ಟ್ಯಾಟೂ ಹಾಕಬೇಕಿತ್ತು
ರೂಪಾಯಿ ವಿನ್ಯಾಸದ ಟ್ಯಾಟೂ ಹಾಕಬೇಕೆನ್ನುವ ಉದ್ದೇಶ ಸಿನಿಮಾ ನಿರ್ದೇಶಕರಿಗೆ ಇರಲಿಲ್ಲವಂತೆ. ಡಾಲರ್ ಸಿಂಬಲ್ ಅನ್ನು ಟ್ಯಾಟೂ ಆಗಿ ಹಾಕಿಸಬೇಕು ಎಂಬುಕೊಂಡಿದ್ದರಂತೆ. ಮೊದಲಿಗೆ ಬರೆದುಕೊಂಡ ಸ್ಕ್ರಿಪ್ಟ್‌ನಂತೆ ಸಿನಿಮಾದ ಕತೆ ಅಮೆರಿಕದಲ್ಲಿ ನಡೆಯುತ್ತಿತ್ತು. ಆದರೆ ನಂತರ ಕತೆ ಬದಲಾಯಿಸಿ ಭಾರತದಲ್ಲಿಯೇ ಕತೆ ನಡೆಯುವಂತೆ ಬದಲಾಯಿಸಲಾಯಿತು.

ಅಮೆರಿಕದಲ್ಲಿ ಚಿತ್ರೀಕರಣ ಆಗಬೇಕಿತ್ತು
ಈ ಸಿನಿಮಾದ ಅರ್ಧ ಭಾಗದಷ್ಟು ಚಿತ್ರೀಕರಣ ಅಮೆರಿಕದಲ್ಲಿ ಆಗಬೇಕಿತ್ತು, ಆದರೆ ಕೊರೊನಾ ಕಾರಣದಿಂದಾಗಿ ಅಮೆರಿಕ್ಕೆ ಶೀಘ್ರದಲ್ಲಿ ಹೋಗಲು ಆಗುವುದಿಲ್ಲ, ಹೋಗುವುದು ಕ್ಷೇಮವೂ ಅಲ್ಲವೆಂದು ನಿರ್ಣಯಿಸಿ ಅಮೆರಿಕದಲ್ಲಿ ನಡೆಯಬೇಕಿದ್ದ ಕತೆಯನ್ನು ಭಾರತದ ಗೋವಾದಲ್ಲಿ ನಡೆಯುವಂತೆ ಬದಲಾಯಿಸಲಾಗಿದೆಯಂತೆ.

ಕ್ಯಾಸಿನೊ ಕತೆಯುಳ್ಳ ಸಿನಿಮಾ
ಕ್ಯಾಸಿನೊ ಜೂಜು, ರಾಜಕೀಯ ಇನ್ನೂ ಹಲವು ವಿಷಯಗಳನ್ನು ಕತೆ ಒಳಗೊಂಡಿದೆ. ಈ ಸಿನಿಮಾಕ್ಕಾಗಿ ದೊಡ್ಡ ಕ್ಯಾಸಿನೋದ ಸೆಟ್ ಹಾಕಲಾಗುತ್ತಿದೆ. ಜೊತೆಗೆ ಗೋವಾದ ಐಶಾರಾಮಿ ಕ್ಯಾಸಿನೋಗಳಲ್ಲಿ ಸಹ ಶೂಟಿಂಗ್ ನಡೆಸಲಾಗುತ್ತದೆಯಂತೆ.


Click it and Unblock the Notifications











