For Quick Alerts
  ALLOW NOTIFICATIONS  
  For Daily Alerts

  ಸಮಂತಾ ಮತ್ತು ನನ್ನ ನಡುವಿನ ವದಂತಿಗೆ ನಾಗ ಚೈತನ್ಯ ಅಂತ್ಯ ಹಾಡಬಹುದಿತ್ತು: ಸ್ಟೈಲಿಸ್ಟ್ ಪ್ರೀತಂ ಬೇಸರ

  By ಫಿಲ್ಮಿಬೀಟ್ ಡೆಸ್ಕ್
  |

  ಟಾಲಿವುಡ್ ಸ್ಟಾರ್ ಕಪಲ್ ಸಮಂತಾ ಮತ್ತು ನಾಗ ಚೈತನ್ಯ ಇದೀಗ ಬೇರೆ ಆಗಿದ್ದಾರೆ. ಇಬ್ಬರ ವಿಚ್ಛೇದನ ವಿಚಾರ ಇನ್ನು ಸದ್ದು ಮಾಡುತ್ತಿದೆ. ಇಬ್ಬರು ದೂರ ಆಗಿ ಪ್ರತ್ಯೇಕ ವಾಸಿಸುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ವಿಚ್ಛೇದನ ಬಗ್ಗೆ ಚರ್ಚೆ ನಡೆಯುತ್ತಿದೆ. ತರಹೇವಾರಿ ಸುದ್ದಿಗಳು ಹರಿಡುತ್ತಿವೆ. ನಾಗ ಚೈತನ್ಯರಿಂದ ದೂರ ಆಗಲು ಸಮಂತಾನೆ ಕಾರಣ ಎನ್ನುವ ಚರ್ಚೆ ನಡೆಯುತ್ತಿದೆ. ವಿಚ್ಛೇದನದ ಬಳಿಕ ಸಮಂತಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅದರಲ್ಲೂ ಸಮಂತಾ ಮತ್ತು ಸ್ಟೈಲಿಸ್ಟ್ ಪ್ರೀತಂ ಜುಕಲ್ಕರ್ ಇಬ್ಬರ ನಡುವಿನ ವದಂತಿ ಜೋರಾಗಿದೆ.

  ನಾಗ್ ಮತ್ತು ಸ್ಯಾಮ್ ವಿಚ್ಛೇದನಕ್ಕೆ ಪ್ರೀತಂ ಕಾರಣ ಎನ್ನುವ ಸುದ್ದಿ ವೈರಲ್ ಆಗಿದೆ. ಇಬ್ಬರ ವಿಚ್ಛೇದನದ ನಡುವೆ ಪ್ರೀತಂ ಟ್ರೆಂಡಿಂಗ್ ನಲ್ಲಿದ್ದಾರೆ. ಈ ಬಗ್ಗೆ ಪ್ರೀತಂ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ಪ್ರೀತಂ ವದಂತಿಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ್ದಾರೆ. ತನ್ನ ಮತ್ತು ಸಮಂತಾ ನಡುವಿನ ಲಿಂಕ್ ಅಪ್ ರೂಮರ್ಸ್ ಬಗ್ಗೆ ನಾಗ ಚೈತನ್ಯ ಮಾತನಾಡಿ ಕೊನೆಗೊಳಿಸಬಹುದಿತ್ತು ಎಂದು ಪ್ರೀತಂ ಹೇಳಿದ್ದಾರೆ.

  ಅಕ್ಟೋಬರ್ 2ರಂದು ಸಮಂತಾ ಮತ್ತು ನಾಗ ಚೈತನ್ಯ ತಮ್ಮ ವಿಚ್ಛೇದನ ವಿಚಾರವನ್ನು ಬಹಿರಂಗ ಪಡಿಸಿದರು. ಅನೇಕ ದಿನಗಳಿಂದ ವೈರಲ್ ಆಗುತ್ತಿದ್ದ ಸುದ್ದಿ ಆ ಮೂಲಕ ಬ್ರೇಕ್ ಹಾಕಿದರು. ವಿಚ್ಛೇದನ ಸುದ್ದಿ ಬಹಿರಂಗ ಪಡಿಸುತ್ತಿದ್ದಂತೆ ಸಮಂತಾ ಬಗ್ಗೆ ನಾನ ಸುದ್ದಿಗಳು ಹರಿದಾಡಲು ಪ್ರಾರಂಭವಾಯಿತು. ಈ ನಡುವೆ ಸಮಂತಾ ಮತ್ತು ಸ್ಟೈಲಿಸ್ಟ್ ಪ್ರೀತಂ ಇಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭವಾಯಿತು. ನಾಗ ಮತ್ತು ಸ್ಯಾಮ್ ವಿಚ್ಛೇದನಕ್ಕೆ ಪ್ರೀತಂ ಕಾರಣ ಎನ್ನುವ ಮಾತು ಕೇಳಿಬರಲು ಪ್ರಾರಂಭವೀಯಿತು.

  ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಪ್ರೀತಮ್, ನಾಗ ಚೈತನ್ಯ ಮೌನದಿಂದ ಬೇಸರವಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ ಸಮಂತಾ ತನ್ನ ಸಹೋದರಿ ಇದ್ದಹಾಗೆ ಎಂದು ಪ್ರೀತಂ ಹೇಳಿದ್ದಾರೆ. "ಸಮಂತಾಳನ್ನು ನಾನು ಜಿಜಿ ಎಂದು ಕರೆಯುತ್ತೇನೆ ಎಂಬುದು ಎಲ್ಲರಿಗೂ ತಿಳಿದಿದೆ. ಜಿಜಿ ಉತ್ತರ ಭಾರತದ ಪದ, ಜಿಜಿ ಎಂದರೆ ಸಹೋದರಿ. ಹೀಗಿರುವಾಗ ನಮ್ಮ ನಡುವೆ ಯಾಕೆ ಲಿಂಕ್ ಅಪ್ ಮಾಡುತ್ತೀರಿ" ಎಂದು ಪ್ರೀತಂ ಹೇಳಿದ್ದಾರೆ.

  "ನಾನು ಚೈತನ್ಯ ಅವರನ್ನು ಹಲವು ವರ್ಷಗಳಿಂದ ನೋಡಿದ್ದೇನೆ. ಅವರಿಗೆ ನನ್ನ ಮತ್ತು ಸಮಂತಾ ನಡುವೆ ಯಾವ ರೀತಿಯ ಸಂಬಂಧವಿದೆ ಎನ್ನುವುದು ತಿಳಿದಿದೆ. ಸಮಂತಾ ಮತ್ತು ನನ್ನ ಬಗ್ಗೆ ಹೀಗೆ ಮಾತನಾಡಬೇಡಿ ಎಂದು ನಾಗ ಚೈತನ್ಯ ಪ್ರತಿಕ್ರಿಯೆ ನೀಡಬಹುದು ಎಂದು ಭಾವಿಸಿದ್ದೆ. ಅವರು ಒಂದು ಹೇಳಿಕೆ ನೀಡಿದರೂ ಅದು ತುಂಬಾ ಬದಲಾವಣೆ ಉಂಟುಮಾಡುತ್ತದೆ. ಇದೀಗ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಅಭಿಮಾನಿಗಳಿಗೆ ಚೈತನ್ಯ ಕಡೆಯಿಂದ ಒಂದು ಹೇಳಿಕೆ ಬಂದರೆ ಇದಕ್ಕೆ ಬ್ರೇಕ್ ಹಾಕಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

  ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೀತಂ ಸಾಕಷ್ಟು ನಿಂದನಾತ್ಮಕ ಕಾಮೆಂಟ್ ಬರುತ್ತಿವೆ ಎಂದು ಹೇಳಿದ್ದಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ಅಷ್ಟೆಯಲ್ಲದೆ ತಾನು ಯಾವಾಗಲು ತನ್ನ ಸ್ನೇಹಿತೆ ಸಮಂತಾ ಪರ ನಿಲ್ಲುತ್ತೇನೆ ಎಂದು ಪ್ರೀತಂ ಬಹಿರಂಗವಾಗಿ ಹೇಳಿದ್ದಾರೆ.

  ಮದುವೆಯಾಗಿ 4 ವರ್ಷ ತುಂಬುವುದರೊಳಗೆ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದೀಗ ಬೇರೆ ಬೇರೆ ಆಗಿರುವ ಸ್ಟಾರ್ ಜೋಡಿ ತಮ್ಮ ಸಿನಿಮಾಗಳ ಕಡೆ ಗಮನ ಹರಿಸಿದ್ದಾರೆ. ಸಮಂತಾ ಸದ್ಯ ತಮಿಳು ಮತ್ತು ತೆಲುಗಿನ ಒಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಶಾಕುತಲಂ ಸಿನಿಮಾ ಮುಗಿಸಿರುವ ಸಮಂತಾ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಳಿಕ ಮತ್ತೊಂದು ತೆಲುಗು ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸಮಂತಾ ಇನ್ನು ರಿವೀಲ್ ಮಾಡಿಲ್ಲ.

  English summary
  Stylist Preetham Jukalker reacts to link rumors with Samantha, says Naga Chaitanya could have put an end to rumours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X