ಸುದೀಪಿಯನ್ಸ್‌ಗೆ ಗುಡ್‌ನ್ಯೂಸ್: ಸೆಪ್ಟೆಂಬರ್ 16ಕ್ಕೆ ಮತ್ತೆ ತೆರೆಮೇಲೆ ಕಿಚ್ಚನ ಆರ್ಭಟ!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಕಿಚ್ಚನ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಓಟಿಟಿಗೆ ಬರ್ತಿದೆ. ಇದೀಗ ಸುದೀಪ್ ನಟನೆಯ 'ಕೋಟಿಗೊಬ್ಬ-3' ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಟಾಲಿವುಡ್‌ನಲ್ಲೂ ಬಾದ್‌ಶಾ ಸುದೀಪ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ ಸಿನಿಮಾ ಭಾರೀ ಸದ್ದು ಮಾಡುವ ನಿರೀಕ್ಷೆ ಇದೆ.
ಜುಲೈ 28ಕ್ಕೆ ತೆರೆಗಪ್ಪಳಿಸಿದ್ದ 'ವಿಕ್ರಾಂತ್ ರೋಣ' ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಕ್ಸಸ್ ಕಂಡಿತ್ತು. ಅನೂಪ್ ಭಂಡಾರಿ ನಿರ್ದೇಶನದಲ್ಲಿ 2D ಹಾಗೂ 3D ವರ್ಷನ್‌ಗಳಲ್ಲಿ ತೆರೆಕಂಡಿದ್ದ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. ಚಿತ್ರ 200 ಕೋಟಿ ಕ್ಲಬ್ ಸೇರಿದೆ ಎಂದು ಜೀ5 ಘೋಷಿಸಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮತ್ತೊಂದ್ಕಡೆ ಸುದೀಪ್ ಹುಟ್ಟುಹಬ್ಬಕ್ಕೆ 'ವಿಕ್ರಾಂತ್ ರೋಣ' ಸಕ್ಸಸ್ ರೂಪದಲ್ಲಿ ಭರ್ಜರಿ ಗಿಫ್ಟ್ ಸಿಕ್ಕಂಥಾಗಿದೆ. ಇದೀಗ 'ಕೋಟಿಗೊಬ್ಬ-3' ತೆಲುಗಿಗೆ ಡಬ್ ಆಗಿ ಬಿಡುಗಡೆಗೆ ಸಿದ್ಧವಾಗಿದೆ. ಸೆಪ್ಟೆಂಬರ್ 16ಕ್ಕೆ ಸಿನಿಮಾ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ.
ಗುಡ್ ಸಿನಿಮಾ ಗ್ರೂಪ್ ಸಂಸ್ಥೆ 'ಕೋಟಿಗೊಬ್ಬ-3' ಚಿತ್ರವನ್ನು ತೆಲುಗು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಿಲೀಸ್ ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಶಿವಕಾರ್ತಿಕ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಸುದೀಪ್ ಡಬಲ್ ರೋಲ್‌ನಲ್ಲಿ ಮಿಂಚಿದ್ದಾರೆ. 2016ರಲ್ಲಿ ಬಂದ 'ಕೋಟಿಗೊಬ್ಬ-2' ಸೀಕ್ವೆಲ್ ಇದಾಗಿದ್ದು, ಸೂರಪ್ಪ ಬಾಬು ಸಿನಿಮಾ ನಿರ್ಮಾಣ ಮಾಡಿದ್ದರು. ಮೆಡೋನಾ ಸೆಬಾಸ್ಟಿನ್ ನಾಯಕಿಯಾಗಿ ಮಿಂಚಿದ್ರೆ, ಶ್ರದ್ಧಾ ದಾಸ್, ಆರ್ಮುಗ ರವಿಶಂಕರ್, ಅಭಿರಾಮಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

'K3 ಕೋಟಿಕೊಕ್ಕಡು' ಟೈಟಲ್‌ನಲ್ಲಿ ಸಿನಿಮಾ ತೆಲುಗಿಗೆ ಡಬ್ ಆಗಿದೆ. ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾದಿಂದಲೇ ಸುದೀಪ್‌ಗೆ ತೆಲುಗು ರಾಜ್ಯಗಳಲ್ಲಿ ಭಾರೀ ಕ್ರೇಜ್ ಸೃಷ್ಟಿಯಾಗಿತ್ತು. 'ಬಾಹುಬಲಿ', 'ಸೈರಾ' ಸಿನಿಮಾಗಳಲ್ಲೂ ಸುದೀಪ್ ಬಣ್ಣ ಹಚ್ಚಿದ್ದರು. ಹಾಗಾಗಿ 'ಕೋಟಿಗೊಬ್ಬ-3' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆ ಇದೆ. ತೆಲುಗು ಪ್ರೇಕ್ಷಕರಿಗೆ ಹೇಳಿ ಮಾಡಿಸಿದಂತಹ ಪಕ್ಕಾ ಕಮರ್ಷಿಯಲ್ ಸಿನಿಮಾ ಇದು. ಕೆಲ ತಿಂಗಳುಗಳ ಹಿಂದೆಯೇ ಚಿತ್ರವನ್ನು ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಆದರೆ 'ವಿಕ್ರಾಂತ್ ರೋಣ' ಸಿನಿಮಾ ರೆಸ್ಪಾನ್ಸ್ ನೋಡಿಕೊಂಡು ರಿಲೀಸ್ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದರು.

'ವಿಕ್ರಾಂತ್ ರೋಣ' ಆಂಧ್ರ, ತೆಲಂಗಾಣದಲ್ಲಿ ಸೂಪರ್ ಹಿಟ್ ಆಗಿದೆ. ಅಂದಾಜು 4 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 'ವಿಕ್ರಾಂತ್ ರೋಣ' ಸಕ್ಸಸ್ ಸಂಭ್ರಮದಲ್ಲೇ 'K3 ಕೋಟಿಕೊಕ್ಕಡು' ಚಿತ್ರವನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಈಗಾಗಲೇ ಚಿತ್ರದ ತೆಲುಗು ವರ್ಷನ್ ಟ್ರೈಲರ್ ಹಾಗೂ ಸಾಂಗ್ಸ್ ಕೂಡ ರಿಲೀಸ್ ಆಗಿ ಹಿಟ್ ಆಗಿದೆ. ಸೆಪ್ಟೆಂಬರ್ 16ಕ್ಕೆ 'K3 ಕೋಟಿಕೊಕ್ಕಡು' ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications











