ಇಂದು ಸುದೀಪ್ ತೆಲುಗು ಚಿತ್ರ ಬಿಡುಗಡೆ; ಹೇಗಿದೆ ಬುಕಿಂಗ್ಸ್?
2021ರ ಅಕ್ಟೋಬರ್ 15ರಂದು ಕನ್ನಡದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಹಿಟ್ ಎನಿಸಿಕೊಂಡಿದ್ದ ಸುದೀಪ್ ಹಾಗೂ ಮಡೋನ ಸೆಬಾಸ್ಟಿಯನ್ ಅಭಿನಯದ ಕೋಟಿಗೊಬ್ಬ 3 ಚಿತ್ರ ಇದೀಗ ತೆಲುಗಿಗೆ ಡಬ್ ಆಗಿದ್ದು, K3 ಕೋಟಿಕೊಕ್ಕಡು ಎಂಬ ಶೀರ್ಷಿಕೆಯಲ್ಲಿ ಇಂದು ( ಸೆಪ್ಟೆಂಬರ್ 16 ) ಬಿಡುಗಡೆಯಾಗಿದೆ.
ತೆಲುಗು ರಾಜ್ಯಗಳಾದ್ಯಂತ ಕೋಟಿಕೊಕ್ಕಡು ಚಿತ್ರ ಒಳ್ಳೆಯ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೈದರಾಬಾದ್ ನಗರ ಒಂದರಲ್ಲಿಯೇ ಮೊದಲ ದಿನ 85 ಪ್ರದರ್ಶನಗಳು ಆಯೋಜನೆಗೊಂಡಿವೆ.
ಸೂರಪ್ಪ ಬಾಬು ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದು, ಇದೊಂದು ಆ್ಯಕ್ಷನ್ ಸಿನಿಮಾ ಆಗಿದೆ. ಕನ್ನಡದ ಬಹುತೇಕ ಸಿನಿಪ್ರೇಕ್ಷಕರು ಈ ಸಿನಿಮಾವನ್ನು ವೀಕ್ಷಿಸಿರುವುದರಿಂದ ಸಿನಿಮಾದ ಬಗ್ಗೆ ನಿಮಗೆ ಹೆಚ್ಚೇನೂ ಹೇಳಬೇಕಾದ ಅಗತ್ಯವಿಲ್ಲ.

ಇನ್ನು ಹೈದರಾಬಾದ್‌ನ ಆರ್ ಟಿ ಎಕ್ಸ್ ರಸ್ತೆಯ ಸಪ್ತಗಿರಿ 70 ಎಂಎಂ ಚಿತ್ರಮಂದಿರ ಕೋಟಿಕೊಕ್ಕಡು ಚಿತ್ರಕ್ಕೆ ಪ್ರಮುಖ ಚಿತ್ರಮಂದಿರವಾಗಿದ್ದು ಈ ಚಿತ್ರದ ಮೊದಲ ಶೋನ ಟಿಕೆಟ್‌ಗಳು ಒಂದು ಹಂತಕ್ಕೆ ಬಿಕರಿಯಾಗುತ್ತಿವೆ. ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಿ ತುಂಬಾ ದಿನಗಳ ನಂತರ ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಕ್ರೇಜ್ ತುಸು ಕಡಿಮೆ ಎನ್ನಬಹುದು. ಒಂದುವೇಳೆ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿಯೂ ಒಂದೇ ಕಾಲಕ್ಕೆ ಬಿಡುಗಡೆಯಾಗಿದ್ದಿದ್ದರೆ ಚಿತ್ರ ತೆಲುಗಿನಲ್ಲಿ ಒಂದಷ್ಟು ಬಿಸಿನೆಸ್ ಮಾಡುತ್ತಿತ್ತು.


Click it and Unblock the Notifications











