ವಿಜಯ್ ದೇವರಕೊಂಡ ಬಗ್ಗೆ ಸುಧಾ ಮೂರ್ತಿ ಮಾತು
ತೆಲುಗು ನಟ ವಿಜಯ್ ದೇವರಕೊಂಡ ಬಗ್ಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಮಾತನಾಡಿದ್ದಾರೆ. ತೆಲುಗಿನ ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
''ನಾನು ಹೆಚ್ಚು ಸಿನಿಮಾಗಳನ್ನು ನೋಡುತ್ತೇನೆ. ತೆಲುಗು ಸಿನಿಮಾಗಳು ಕೂಡ ನನಗೆ ಇಷ್ಟ. ಆಗ ಎನ್ ಟಿ ಆರ್ ಸಿನಿಮಾಗಳನ್ನು ನೋಡುತ್ತಿದ್ದೆ. ಈಗ ಬರುವ ಹೊಸ ಸಿನಿಮಾಗಳನ್ನು ಸಹ ವೀಕ್ಷಿಸುತ್ತೇನೆ'' ಎಂದಿದ್ದಾರೆ.
'ಮಹಾನಟಿ', 'ಎನ್ ಟಿ ಆರ್ ಬಯೋಪಿಕ್', 'ಗೀತಾ ಗೋವಿಂದಂ' ಸಿನಿಮಾಗಳನ್ನು ಇತ್ತೀಚಿಗೆ ಸುಧಾ ಮೂರ್ತಿ ನೋಡಿದ್ದಾರಂತೆ. ಕಮರ್ಷಿಯಲ್ ಸಿನಿಮಾಗಳನ್ನು ಸಹ ವೀಕ್ಷಿಸಲು ಇಷ್ಟ ಎಂದು ಸುಧಾಮೂರ್ತಿ ತಿಳಿಸಿದ್ದಾರೆ.

''ಗೀತಾ ಗೋವಿಂದ' ಸಿನಿಮಾ ಚೆನ್ನಾಗಿದೆ. ವಿಜಯ್ ದೇವರಕೊಂಡ ನಟನೆ ಚೆನ್ನಾಗಿ ಮಾಡಿದ್ದಾರೆ. ನನಗೆ ವಿಜಯ್ ದೇವಕೊಂಡ ಇಷ್ಟ.'' ಎಂದು ಸುಧಾ ಮೂರ್ತಿ ಹೇಳಿದ್ದಾರೆ.
'ಗೀತಾ ಗೋವಿಂದ' ಸಿನಿಮಾ 2018 ರಲ್ಲಿ ಬಿಡುಗಡೆಯಾಗಿತ್ತು. ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿಯಾಗಿದ್ದಾರೆ. ಪರುಶುರಾಮ್ ಚಿತ್ರದ ನಿರ್ದೇಶನ ಮಾಡಿದ್ದಾರೆ.
English summary
Infosys foundation president sudha murthy spoke about Vijay Devarakonda.


Click it and Unblock the Notifications