ಅಂದು ಮೆಗಾಸ್ಟಾರ್ ಗೆ ನಾಯಕಿಯಾಗಿದ್ದ ಸುಹಾಸಿನಿ ಇಂದು ಸಹೋದರಿಯಾಗಿ ನಟಿಸುತ್ತಿದ್ದಾರೆ

By ಫಿಲ್ಮ್ ಡೆಸ್ಕ್

ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಚೊಚ್ಚಲ ನಿರ್ದೇಶನದ ಲೂಸಿಫರ್ ಸಿನಿಮಾ ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದ ಲೂಸಿಫರ್ ಚಿತ್ರದಲ್ಲಿ ಖ್ಯಾತ ನಟ ಮೋಹನ್ ಲಾಲ್ ನಾಯಕನಾಗಿ ಕಾಣಿಸಿಕೊಂಡಿದ್ದರು.

Recommended Video

ಸೋನುನಿಗಮ್ ವಿರುದ್ಧ ಕಿಡಿಕಾರಿದ ದಿವ್ಯ ಖೊಸ್ಲೇ. | T Series | Sonu Nigam | Divya Khosla Kumar

ಲೂಸಿಫರ್ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ಈಗಾಗಲೆ ಕೇಳಿದ್ದೀರಿ. ತೆಲುಗು ಲೂಸಿಫರ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ನಿಭಾಯಿಸಿದ್ದ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ ಚಿತ್ರಕ್ಕೆ ಮತ್ತೋರ್ವ ಸ್ಟಾರ್ ನಟಿ ಎಂಟ್ರಿ ಕೊಟ್ಟಿದ್ದಾರೆ. ಹೌದು, ನಟಿ ಸುಹಾಸಿನಿ, ಚಿರಂಜೀವಿ ಅಭಿನಯದ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂದೆ ಓದಿ...

ಮೆಗಾ ಸ್ಟಾರ್ ಜೊತೆ ಸುಹಾಸಿನಿ

ಮೆಗಾ ಸ್ಟಾರ್ ಜೊತೆ ಸುಹಾಸಿನಿ

ಮೆಗಾ ಸ್ಟಾರ್ ಮತ್ತು ಸುಹಾಸಿನಿ ಜೋಡಿ ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ಜೋಡಿ ಮತ್ತೆ ತೆರೆಮೇಲೆ ಬರುತ್ತಿದೆ ಅಂದ್ರೆ ಅಭಿಮಾನಿಗಳು ಕುತೂಹಲ ಮತ್ತಷ್ಟು ಹೆಚ್ಚಾಗಿರುತ್ತೆ. ಅನೇಕ ವರ್ಷಗಳ ಬಳಿಕ ಇಬ್ಬರು ಒಟ್ಟಿಗೆ ತೆರೆಮೇಲೆ ಬರುತ್ತಿದ್ದಾರೆ. ಚಿತ್ರದ ಬಗ್ಗೆ ಕೇಳಿ ಸುಹಾಸಿನಿ ಖುಷಿಯಿಂದ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿರಂಜೀವಿಗೆ ತಂಗಿ ಆಗಿ ಸುಹಾಸಿನಿ ಅಭಿನಯ

ಚಿರಂಜೀವಿಗೆ ತಂಗಿ ಆಗಿ ಸುಹಾಸಿನಿ ಅಭಿನಯ

ನಟಿ ಸುಹಾಸಿನಿ, ಚಿರಂಜೀವಿ ಜೊತೆ ನಾಯಕಿಯಾಗಿ ಮಿಂಚಿದ್ದಾರೆ. ಆದರೆ ಇದೆ ಮೊದಲ ಬಾರಿಗೆ ಚಿರಂಜೀವಿಯ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂನಲ್ಲಿ ನಟಿ ವಂಜು ವಾರಿಯರ್ ನಿಭಾಯಿಸಿದ್ದ ಪಾತ್ರದಲ್ಲಿ ಸುಹಾಸಿನಿ ಮಿಂಚಲಿದ್ದಾರೆ. ಮಂಜು ವಾರಿಯರ್, ನಟ ಮೋಹನ್ ಲಾಲ್ ಸಹೋದರಿಯಾಗಿ ಕಾಣಿಸಿಕೊಂಡಿದ್ದರು.

ವಿಜಯಶಾಂತಿ ಮಾಡಬೇಕಿದ್ದ ಪಾತ್ರ

ವಿಜಯಶಾಂತಿ ಮಾಡಬೇಕಿದ್ದ ಪಾತ್ರ

ನಟಿ ಸುಹಾನಿಗೂ ಮೊದಲು ಈ ಪಾತ್ರವನ್ನು ನಟಿ ವಿಜಯಶಾಂತಿ ಬಳಿ ಮಾಡಿಸಲು ಚಿತ್ರತಂಡ ನಿರ್ಧರಿಸತ್ತು. ಆದರೆ ಕಾರಣಾಂತರಗಳಿಂದ ವಿಜಯಶಾಂತಿ ಸಿನಿಮಾದಿಂದ ದೂರ ಉಳಿದರು. ಆ ನಂತರ ನಾಯಕನ ಸಹೋದರಿಯ ಪಾತ್ರಕ್ಕೆ ಸುಹಾಸಿನಿಯನ್ನು ಕೇಳಿಕೊಂಡಾಗ ಕಥೆ ಕೇಳಿ ಇಂಪ್ರೆಸ್ ಆಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಹೋ ನಿರ್ದೇಶಕನ ಸಾರಥ್ಯಲ್ಲಿ ಬರ್ತಿದೆ ಸಿನಿಮಾ

ಸಾಹೋ ನಿರ್ದೇಶಕನ ಸಾರಥ್ಯಲ್ಲಿ ಬರ್ತಿದೆ ಸಿನಿಮಾ

ಲೂಸಿಫರ್ ತೆಲುಗು ರಿಮೇಕ್ ಗೆ ಸಾಹೋ ಖ್ಯಾತಿಯ ನಿರ್ದೇಶಕ ಸುಜಿತ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲು ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಲೂಸಿಫರ್ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಸುಜಿತ್ ನಿರ್ದೇಶನ ಮಾಡಲಿದ್ದಾರಂತೆ. ಈಗಾಗಲೆ ಸುಜಿತ್ ಪ್ರಿ-ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರಂತೆ.

More from Filmibeat

English summary
Actress Suhasini playing important role in chiranjeevi's Telugu remake of Lucifer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X