'ಪುಷ್ಪ' ಬದಿಗಿಟ್ಟು ಚಿರಂಜೀವಿಗೆ ಆಕ್ಷನ್ ಕಟ್ ಹೇಳಿದ ಸುಕುಮಾರ್

ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಈ ವರ್ಷದ ಮೊದಲ ದೊಡ್ಡ ಹಿಟ್‌ ಸಿನಿಮಾ ಎನಿಸಿಕೊಂಡಿದೆ. 'ಪುಷ್ಪ ಮೂಲಕ ಅಲ್ಲು ಅರ್ಜುನ್ ಸಹ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೆ ಏರಿದ್ದಾರೆ.

'ಪುಷ್ಪ' ಮೂಲಕ ಅಲ್ಲು ಅರ್ಜುನ್‌ಗೆ ಮತ್ತೊಂದು ಅಭೂತಪೂರ್ವ ವಿಜಯ ತಂದುಕೊಟ್ಟಿದ್ದಾರೆ ನಿರ್ದೇಶಕ ಸುಕುಮಾರ್.

ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಅವರದ್ದು ಬಹಳ ಹಳೆಯ ನಂಟು. ಅಲ್ಲು ಅರ್ಜುನ್ ನಾಯಕ ನಟನಾಗಿ ಉದ್ಯಮದಲ್ಲಿ ಬೆಳೆಯಲು ಕಾರಣವಾದ ಎವರ್‌ಗ್ರೀನ್ ಲವ್ ಸ್ಟೋರಿ 'ಆರ್ಯ' ಸಿನಿಮಾವನ್ನು ಸುಕುಮಾರ್ ಅವರೇ ನಿರ್ದೇಶಿಸಿದ್ದರು. ಅದು ಸುಕುಮಾರ್‌ಗೆ ಮೊದಲ ಸಿನಿಮಾ ಆಗಿತ್ತು. ಇದೀಗ 'ಪುಷ್ಪ' ಹಿಟ್ ಆದ ಬಳಿಕ 'ಪುಷ್ಪ 2' ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿದೆ. ಆದರೆ ಸುಕುಮಾರ್ ಮಾತ್ರ 'ಪುಷ್ಪ' ಸಿನಿಮಾವನ್ನು ಬದಿಗಿಟ್ಟು ಅಲ್ಲು ಅರ್ಜುನ್‌ರ ಮಾವ ಮೆಗಾಸ್ಟಾರ್ ಚಿರಂಜೀವಿಗೆ ಆಕ್ಷನ್ ಕಟ್ ಹೇಳಿದ್ದಾರೆ.

'ಪುಷ್ಪ 2' ಸಿನಿಮಾ ಬದಿಗಿಟ್ಟರೆ ಸುಕುಮಾರ್?

'ಪುಷ್ಪ 2' ಸಿನಿಮಾ ಬದಿಗಿಟ್ಟರೆ ಸುಕುಮಾರ್?

ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಸುಕುಮಾರ್ ಆಕ್ಷನ್-ಕಟ್ ಹೇಳಿದ್ದಾರೆ. ಹಾಗೆಂದು ಸುಕುಮಾರ್ 'ಪುಷ್ಪ 2' ಬಿಟ್ಟು ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂದುಕೊಳ್ಳುವಂತಿಲ್ಲ. ಚಿರಂಜೀವಿ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ ನಿಜ ಆದರೆ ಅದು ಸಿನಿಮಾ ಅಲ್ಲ ಬದಲಿಗೆ ಒಂದು ಸಣ್ಣ ಜಾಹೀರಾತಷ್ಟೆ.

ಸುಕುಮಾರ್ ನಿರ್ದೇಶನದಲ್ಲಿ ನಟಿಸಿ ಖುಷಿಯಾಯ್ತು: ಚಿರು

ಸುಕುಮಾರ್ ನಿರ್ದೇಶನದಲ್ಲಿ ನಟಿಸಿ ಖುಷಿಯಾಯ್ತು: ಚಿರು

ಜನಪ್ರಿಯ ಶುಭಗೃಹ ರಿಯಲ್ ಎಸ್ಟೇಟ್ ಅವರಿಗಾಗಿ ಸುಕುಮಾರ್ ಜಾಹೀರಾತು ನಿರ್ದೇಶನ ಮಾಡಿದ್ದು, ಜಾಹೀರಾತಿನಲ್ಲಿ ನಟ ಚಿರಂಜೀವಿ ಅಭಿನಯಿಸಿದ್ದಾರೆ. ಈ ವಿಷಯವನ್ನು ಸ್ವತಃ ಚಿರಂಜೀವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ''ನಿರ್ದೇಶಕ ಸುಕುಮಾರ್ ಪ್ರತಿಭೆ ಎಲ್ಲರಿಗೂ ಗೊತ್ತಿರುವುದೇ. ಒಂದು ಜಾಹೀರಾತಿಗಾಗಿ ಅವರ ನಿರ್ದೇಶನದಲ್ಲಿ ನಾನು ನಟಿಸಿದೆ. ಆ ಕ್ಷಣಗಳನ್ನು ಎಂಜಾಯ್ ಮಾಡಿದೆ'' ಎಂದಿದ್ದಾರೆ ಚಿರಂಜೀವಿ.

Recommended Video

Darshan | ಪುಷ್ಪ ಚಿತ್ರದ ಆಫರ್ ರಿಜೆಕ್ಟ್ ಮಾಡಿದ ಡಿ ಬಾಸ್ | Pushpa | Sukumar
ಜಾಹೀರಾತಿನಲ್ಲಿ ನಟಿಸುತ್ತಿರುವ ಚಿರಂಜೀವಿ

ಜಾಹೀರಾತಿನಲ್ಲಿ ನಟಿಸುತ್ತಿರುವ ಚಿರಂಜೀವಿ

''ಸುಕುಮಾರ್ ನಿರ್ದೇಶನಕ್ಕೆ ನಟಿಸುವ ಅವಕಾಶ ಕೊಟ್ಟ ಶುಭಗೃಹ ರಿಯಲ್ ಎಸ್ಟೇಟ್‌ ಅವರಿಗೆ ನನ್ನ ಧನ್ಯವಾದ'' ಎಂದಿರುವ ಚಿರಂಜೀವಿ, ತಾವು ಹಾಗೂ ಸುಕುಮಾರ್ ಒಟ್ಟಿಗೆ ಇರುವ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ನಟ ಚಿರಂಜೀವಿ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯಂತೆ ಧಿರಿಸಿ ತೊಟ್ಟು ಕಾಣಿಸಿಕೊಂಡಿದ್ದಾರೆ. ಸುಕುಮಾರ್ ಎಂದಿನಂತೆ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿ, ಬಿಳಿ ಗಡ್ಡದೊಂದಿಗೆ ಹಾಗೆಯೇ ಇದ್ದಾರೆ. ಅವರ ಸ್ಟೈಲ್‌ನಲ್ಲಿ ಬದಲಾವಣೆಯೇ ಇಲ್ಲ.

ಹಲವು ಸಿನಿಮಾಗಳಲ್ಲಿ ಚಿರಂಜೀವಿ ಬ್ಯುಸಿ

ಹಲವು ಸಿನಿಮಾಗಳಲ್ಲಿ ಚಿರಂಜೀವಿ ಬ್ಯುಸಿ

ನಟ ಚಿರಂಜೀವಿ ತಮ್ಮ ಪುತ್ರನೊಟ್ಟಿಗೆ ನಟಿಸಿರುವ 'ಆಚಾರ್ಯ' ಸಿನಿಮಾ ಏಪ್ರಿಲ್ 29 ರಂದು ಬಿಡುಗಡೆ ಆಗಲಿದೆ. ಇದರ ನಡುವೆ 'ಗಾಡ್ ಫಾದರ್' ಹೆಸರಿನ ಸಿನಿಮಾದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ನಟ ಸಲ್ಮಾನ್ ಖಾನ್ ಸಹ ನಟಿಸುತ್ತಿರುವುದು ವಿಶೇಷ. 'ಗಾಡ್ ಫಾದರ್' ಸಲ್ಮಾನ್ ಖಾನ್‌ರ ಮೊದಲ ದಕ್ಷಿಣ ಭಾರತದ ಸಿನಿಮಾ. ಆ ಬಳಿಕ 'ಭೋಳಾ ಶಂಕರ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದಲ್ಲಿ ಚಿರಂಜೀವಿ ಸಹೋದರಿ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಇವುಗಳ ಬಳಿಕ ಕೆಎಸ್ ರವೀಂದ್ರ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ಸುಕುಮಾರ್, 'ಪುಷ್ಪ 2' ನಿರ್ದೇಶನ ಮಾಡುತ್ತಿದ್ದಾರೆ. ಅದರ ಬಳಿಕ ವಿಜಯ್ ದೇವರಕೊಂಡ ಜೊತೆ ಹೊಸ ಸಿನಿಮಾ ಪ್ರಾರಂಭಿಸಲಿದ್ದಾರೆ.

More from Filmibeat

English summary
Director Sukumar directed Megastar Chiranjeevi for an ad film. Chiranjeevi shares photo with director Sukumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X