"ಉಪೇಂದ್ರ ತರ 3 ಸಿನಿಮಾ ಮಾಡಿದ್ರೆ ನಾನು ಚಿತ್ರರಂಗ ಬಿಟ್ಟುಬಿಡ್ತಿದ್ದೆ"; ಸುಕುಮಾರ್

ಕನ್ನಡ ನಟ, ನಿರ್ದೇಶಕ ಉಪೇಂದ್ರ ಪ್ರತಿಭೆ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ದಶಕಗಳ ಹಿಂದೆಯೇ ಅದ್ಭುತ ಸಿನಿಮಾಗಳನ್ನು ಕೊಟ್ಟ ದೃಶ್ಯ ಮಾಂತ್ರಿಕ ಈತ. ರಿಯಲ್ ಸ್ಟಾರ್ ಸಿನಿಮಾಗಳ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. ಅವರ ಸಿನಿಮಾ ಮೇಕಿಂಗ್ ಸ್ಟೈಲ್ ಮೆಚ್ಚಿ ಕೊಂಡಾಡಿದ್ದಾರೆ.

ಉಪ್ಪಿ ಸಿನಿಮಾಗಳನ್ನು ನೋಡಿ ನಾವು ಸಿನಿಮಾ ನಿರ್ದೇಶಕ ಕಲಿತೆವು, ಸ್ಫೂರ್ತಿ ಪಡೆದು ಸಿನಿಮಾ ಮಾಡುವ ಶೈಲಿ ಬದಲಿಸಿಕೊಂಡೆವು ಎಂದು ಸ್ಟಾರ್ ಫಿಲ್ಮ್ ಮೇಕರ್ಸ್ ಕೂಡ ಹೇಳಿದ್ದಾರೆ. ಉಪೇಂದ್ರ ನಿರ್ದೇಶನದಲ್ಲಿ ಮಾಡಿರುವ ಜಾದೂ ಅಂಥಾದ್ದು. ಉಪ್ಪಿ ನಿರ್ದೇಶನದ ಬಹುತೇಕ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. 10 ವರ್ಷಗಳ ಬಳಿಕ ಕಟ್ಟಿಕೊಟ್ಟಿದ್ದ 'ಯುಐ' ಸಿನಿಮಾ ಕೂಡ ಸಂಚಲನ ಸೃಷ್ಟಿಸಿದ್ದು ಸುಳ್ಳಲ್ಲ.

Sukumar Hails Upendra as His Biggest Inspiration Films Like A and Om Shaped My Screenplay Style

ಹೀರೊ ಆಗಿ ಗೆದ್ದ ಬಳಿಕ ಉಪ್ಪಿ ನಿರ್ದೇಶನ ಕಮ್ಮಿ ಮಾಡಿದ್ದರು. ಹೀರೊ ಆಗಿ ಸ್ಟಾರ್ ಪಟ್ಟಕ್ಕೇರಿಬಿಟ್ಟರು. ಆದರೂ ಆಗೊಮ್ಮೆ ಈಗೊಮ್ಮೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳನ್ನು ರಿಯಲ್ ಸ್ಟಾರ್ ಮಾಡಲ್ಲ. ಅವರ ಆಲೋಚನೆಗಳೇ ಭಿನ್ನ. ಪ್ರೇಕ್ಷಕನ ತಲೆಗೆ ಕೆಲಸ ಕೊಡುವ ಚರ್ಚೆಗೆ ನಾಂದಿ ಹಾಡುವ ಆಲೋಚನೆಗೆ ಹಚ್ಚುವ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ.

ಉಪೇಂದ್ರ ತೆಲುಗು, ತಮಿಳು ಸಿನಿಮಾಗಳಲ್ಲಿ ಮತ್ತೆ ನಟಿಸೋಕೆ ಆರಂಭಿಸಿದ್ದಾರೆ. ಸದ್ಯ ಉಪ್ಪಿ ಸಹೋದರನ ಮಗ ನಿರಂಜನ್ ನಟನೆಯ 'ಸೀತಾ ಪಯಣಂ' ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಚಿತ್ರದಲ್ಲಿ ಐಶ್ವರ್ಯ ಸರ್ಜಾ ನಾಯಕಿಯಾಗಿ ಮಿಂಚಿದ್ದಾರೆ. ಧ್ರುವ ಸರ್ಜಾ ಮುಖ್ಯವಾದ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಉಪೇಂದ್ರ ಮುಖ್ಯ ಅತಿಥಿಯಾಗಿ ಹೋಗಿದ್ದರು.

'ಪುಷ್ಪ' ಸಿನಿಮಾ ಖ್ಯಾತಿಯ ಸುಕುಮಾರ್ ಕೂಡ ಉಪೇಂದ್ರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಉಪ್ಪಿ ಬಗ್ಗೆ ಮಾತನಾಡಿ ಸುಕುಮಾರ್ ನಾನು ನಿಮ್ಮ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಎಂದಿದ್ದಾರೆ. "ನಾನು ಮೊದಲಿಗೆ ಉಪೇಂದ್ರ ಅವರ 'ಎ' ಸಿನಿಮಾ ನೋಡಿದ್ದೆ. ಬಳಿಕ 'ಓಂ', 'ಉಪೇಂದ್ರ' ಚಿತ್ರಗಳನ್ನು ನೋಡ್ದೆ. 'ಎ' ನೋಡಿ ಆ ಹುಚ್ಚು, ಕನ್‌ಫ್ಯೂಷನ್, ಅಬ್ಬಬ್ಬಾ, ಇವತ್ತಿಗೂ 'ಎ' ಸಿನಿಮಾ ನೆನೆಪಿಸಿಕೊಂಡರೆ ಮೈ ಜುಮ್ ಎನಿಸುತ್ತದೆ" ಎಂದಿದ್ದಾರೆ.

"ನಿಜ ಹೇಳಬೇಕು ಅಂದರೆ 'ಎ', 'ಓಂ', 'ಉಪೇಂದ್ರ' ರೀತಿಯ ಸಿನಿಮಾಗಳನ್ನು ಮಾಡಿಬಿಟ್ಟರೆ ಎಂಥಹವರು ಚಿತ್ರರಂಗದಿಂದ ನಿವೃತ್ತಿ ಆಗಿಬಿಡಬಹುದು. ನಾನಂತೂ ಅಂತಹ 3 ಸಿನಿಮಾ ಮಾಡಿದ್ದರೆ ಖಂಡಿತ ನಿವೃತ್ತಿ ಆಗಿಬಿಡುತ್ತಿದ್ದೆ. ಅಂತಹ ಕಲ್ಟ್ ಸಿನಿಮಾಗಳು. ಅಂತಹ ಸಿನಿಮಾಗಳನ್ನು ನಮಗೆ ಕೊಟ್ಟಿದ್ದಾರೆ. ನಿಜ ಹೇಳಬೇಕು ಅಂದರೆ ಆ ಸಿನಿಮಾಗಳಿಂದ ಎಲ್ಲರೂ ಸ್ಫೂರ್ತಿ ಪಡೆದಿದ್ದೇವೆ. ಇವತ್ತು ನನ್ನ ಸಿನಿಮಾ ಸ್ಕ್ರೀನ್‌ಪ್ಲೇ ಈ ರೀತಿ ಇದೆ ಅಂದ್ರೆ ಅದಕ್ಕೆ ಕಾರಣ 'ಎ', 'ಓಂ', 'ಉಪೇಂದ್ರ' ಚಿತ್ರಗಳು. ಪ್ರೇಕ್ಷಕರನ್ನು ಸರ್‌ಪ್ರೈಸ್ ಮಾಡುವುದು ಅವರಿಗೆ ಅಭ್ಯಾಸ. ಆ ವಿಚಾರವನ್ನು ನಾನು ನಿಮ್ಮಿಂದ ಕದ್ದಿದ್ದೇನೆ ನೀವು ಗ್ರೇಟ್ ಇನ್ಸ್‌ಪಿರೇಷನ್ ಸರ್. ಇದನ್ನು ಹೇಳಲು ಖುಷಿಯಾಗುತ್ತಿದೆ" ಎಂದು ಉಪೇಂದ್ರ ಅವರನ್ನು ಸುಕುಮಾರ್ ಹಾಡಿ ಹೊಗಳಿದ್ದಾರೆ.

ಸುಕುಮಾರ್ ಮಾತ್ರವಲ್ಲ ಪೂರಿ ಜಗನ್ನಾಥ್, ಶಂಕರ್, ರಾಮ್‌ ಗೋಪಾಲ್ ವರ್ಮಾ ಸೇರಿದಂತೆ ಖ್ಯಾತ ಫಿಲ್ಮ್ ಮೇಕರ್ಸ್ ನಮ್ಮ ಉಪೇಂದ್ರ ಸಿನಿಮಾ ಶೈಲಿಗೆ ಅಭಿಮಾನಿಗಳು. ಸಂದೀಪ್ ರೆಡ್ಡಿ ವಂಗಾ, ಆರ್‌ಜಿವಿ ಕೂಡ 'ಯುಐ' ಸಿನಿಮಾ ನೋಡಲು ಕಾದು ಕೂತಿದ್ದರು. ಭಾರತೀಯ ಚಿತ್ರರಂಗದ ಅದ್ಭುತ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ ಹೆಸರು ಇದೆ.

More from Filmibeat

English summary
Telugu director Sukumar prises Kannada Film director upendra's storytelling style
Read more about: upendra sukumar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X