For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್‌ ಇನ್ಮುಂದೆ 'ಸ್ಟೈಲಿಶ್ ಸ್ಟಾರ್' ಅಲ್ಲ, ಇಲ್ಲಿದೆ ಹೊಸ ಬಿರುದು

  |

  ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ಬನ್ನಿ' ಅಂತಾರೆ. ಜೊತೆಗೆ 'ಸ್ಟೈಲಿಶ್ ಸ್ಟಾರ್' ಎಂದು ಕೂಗುತ್ತಾರೆ. ಸಿನಿಮಾಗಳ ಟೈಟಲ್ ಕಾರ್ಡ್‌ನಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಎಂದೇ ಹೆಸರು ಇರುತ್ತದೆ.

  ಬಹುಶಃ ಇನ್ಮುಂದೆ ಆ ಟೈಟಲ್ ಬದಲಾಗಬಹುದು. ಏಕಂದ್ರೆ, ಪುಷ್ಪ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಇರುವುದಿಲ್ಲ. ಅದರ ಬದಲು ನಿರ್ದೇಶಕ ಸುಕುಮಾರ್ ಹೊಸದೊಂದು ಬಿರುದು ನೀಡಿದ್ದಾರೆ. ಇನ್ಮುಂದೆ ಅಲ್ಲು ಅರ್ಜುನ್ ಈ ಬಿರುದಿನಿಂದಲೇ ಖ್ಯಾತರಾಗಬೇಕು ಎಂದಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ಅಲ್ಲು ಅರ್ಜುನ್; ಶುಭಕೋರಿದ ನಟ ಧನಂಜಯ್ಹುಟ್ಟುಹಬ್ಬದ ಸಂಭ್ರಮದಲ್ಲಿ ಅಲ್ಲು ಅರ್ಜುನ್; ಶುಭಕೋರಿದ ನಟ ಧನಂಜಯ್

  ಅಲ್ಲು ಅರ್ಜುನ್ ಅವರಿಗೆ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ 'ಐಕಾನ್ ಸ್ಟಾರ್' ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚಿಗಷ್ಟೆ ಹೈದರಾಬಾದ್‌ನಲ್ಲಿ ಪುಷ್ಪ ಚಿತ್ರದ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಸುಕುಮಾರ್ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಎಂದು ಸ್ವಾಗತಿಸಿದರು.

  ಜೊತೆಗೆ ಪುಷ್ಪ ಸಿನಿಮಾದ ಪೋಸ್ಟರ್ ಹಾಗೂ ಟೀಸರ್‌ನಲ್ಲೂ ಐಕಾನ್ ಸ್ಟಾರ್ ಎಂದೇ ಬಿಂಬಿಸಲಾಗಿದೆ.

  ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ. ಈ ವಿಶೇಷವಾಗಿ ಪುಷ್ಪ ಚಿತ್ರದ ಹೊಸ ಪೋಸ್ಟರ್‌ವೊಂದು ಹಾಗೂ ಟೀಸರ್‌ ಬಿಡುಗಡೆಯಾಗಿದೆ. ಈ ಎರಡರಲ್ಲೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ ಎಂದು ನಮೂದಿಸಲಾಗಿದೆ.

  ಸುಕುಮಾರ್ ಅವರು ನೀಡಿದ ಐಕಾನ್ ಸ್ಟಾರ್ ಬಿರುದಿನ ಬಗ್ಗೆ ನಟ ಅಲ್ಲು ಅರ್ಜುನ್ ಸಂತಸ ವ್ಯಕ್ತಪಡಿಸಿದರು. 'ಆರ್ಯ ಸಿನಿಮಾ ಮಾಡಿದಾಗ ನನಗೆ ಸ್ಟೈಲಿಶ್ ಸ್ಟಾರ್ ಅಂತ ಹೆಸರು ಬಂತು. ಈಗ ಪುಷ್ಪ ಸಿನಿಮಾ ವೇಳೆಗೆ ಐಕಾನ್ ಸ್ಟಾರ್ ಎಂದು ಹೇಳುತ್ತಿದ್ದಾರೆ. ಧನ್ಯವಾದಗಳು ಸುಕುಮಾರ್ ಅವರಿಗೆ'' ಎಂದರು.

  ಅಲ್ಲು ಅರ್ಜುನ್ ಬಳಿ ಗಿಫ್ಟ್ ಬೇಕೆಂದು ಕೇಳಿದ ರಶ್ಮಿಕಾ; ಸ್ಟೈಲಿಶ್ ಸ್ಟಾರ್ ಹೇಳಿದ್ದೇನು?ಅಲ್ಲು ಅರ್ಜುನ್ ಬಳಿ ಗಿಫ್ಟ್ ಬೇಕೆಂದು ಕೇಳಿದ ರಶ್ಮಿಕಾ; ಸ್ಟೈಲಿಶ್ ಸ್ಟಾರ್ ಹೇಳಿದ್ದೇನು?

  ಪುಷ್ಪ ಸಿನಿಮಾ ಆಗಸ್ಟ್ 13 ರಂದು ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಗೆ ಬರಲಿದೆ. ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.

  English summary
  Director Sukumar has give new title to telugu actor Allu Arjun from Pushpa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X