ಖ್ಯಾತ ನಿರೂಪಕಿ ಸುಮಾ ಬದುಕಿನಲ್ಲಿ ಬಿರುಗಾಳಿ ; 25ವರ್ಷಗಳ ದಾಂಪತ್ಯದಲ್ಲಿ ಬಿರುಕು-ಹೇಳಿದ್ದೇನು ಆಂಧ್ರದ ಮಾತಿನ ಮಲ್ಲಿ?
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ತಾವೆ. ಹಾಗಂತೆ.. ಹೀಗಂತೆ .. ಎಂಬ ಅಂತೆ ಕಂತೆ ಸಂತೆಯಲ್ಲಿ ಹಲವಾರು ಸುದ್ದಿಗಳು ಸದ್ದು ಮಾಡುತ್ತಾವೆ. ಹೀಗೆ ಸದ್ದು ಮಾಡುವ ಸುದ್ದಿಗಳಲ್ಲಿ ಅರ್ಧ ಸತ್ಯವಾದರೆ ಉಳಿದಿದೆಲ್ಲವೂ ಮಿಥ್ಯ ಆಗಿರುತ್ತಾವೆ. ಆ ಪೈಕಿ ತಮ್ಮ ಕುರಿತು ..
ಕೆಲ ಸುದ್ದಿಗಳನ್ನು ಕಂಡು.. ಸಾಮಾನ್ಯವಾಗಿ ಕೆಲ ತಾರೆಯರು ಸುಮ್ಮನಾಗುತ್ತಾರೆ. ಇನ್ನೂ ಕೆಲವರು ಉರಿದು ಬೀಳುತ್ತಾರೆ. ಮತ್ತೂ ಕೆಲವರು ಸಮಯ ಸಂದರ್ಭ ಬಂದಾಗ ತಮ್ಮ ಕುರಿತು ಹಬ್ಬಿಸಲಾದ ಇಲ್ಲ ಸಲ್ಲದ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಸುದ್ದಿ ಹಬ್ಬಿಸಿದವರ ಕುರಿತು ವ್ಯಂಗ್ಯವಾಡುತ್ತಾರೆ. ಉದಾಹರಣೆಗೆ ಸುಮಾ ಕನಕಾಲ.

ಹೌದು, ಸುಮಾ ಕನಕಾಲ.. ಟಾಲಿವುಡ್ ಟಾಪ್ ನಿರೂಪಕಿ. ನಿರರ್ಗಳವಾದ ಭಾಷೆ .. ಮಾತಿಗೆ ತಕ್ಕ ಭಾವಭಿನಯ .. ಪರಿಶುದ್ಧವಾದ ನಗು .. ವೇದಿಕೆಯ ಮೇಲೆ ನಿರೂಪಣೆಗೆಂದು ನಿಂತರೆ ಆ ವೇದಿಕೆಯ ಕಳೆ ಹೆಚ್ಚುತ್ತೆ. ಸೂಪರ್ ಸ್ಟಾರ್ ಯಾರೇ ಇರಲಿ.. ಟ್ರೇಲರ್ ಲಾಂಚ್ ಅಥವಾ ಆಡಿಯೋ ಬಿಡುಗಡೆ.. ಸಮಾರಂಭ ಯಾವುದೇ ಇರಲಿ.. ಸುಮಾ ಕನಕಾಲ ನಿರೂಪಣೆ ಕಡ್ಡಾಯ.
ಮಧ್ಯಮ ವರ್ಗದ ಸಾಧಾರಣ ಹಿನ್ನೆಲೆಯಿಂದ ಬಂದು ಇಂದು ಆಂಧ್ರ ಮಾತ್ರವಲ್ಲ ಇಡೀ ಭಾರತದೆಲ್ಲೆಡೆ ಹೆಸರು ಸಂಪಾದನೆ ಮಾಡಿರುವ ಸುಮಾ ತೆಲುಗು ಜೊತೆಯಲ್ಲಿ ಮಲಯಾಳಂ.. ತಮಿಳು.. ಹಿಂದಿ.. ಇಂಗ್ಲೀಷ್ ಇಷ್ಟೇ ಅಲ್ಲ ಸ್ಪ್ಯಾನಿಶ್ ಭಾಷೆಯನ್ನು ಕೂಡ ಸುಲಲಿತವಾಗಿ ಮಾತನಾಡಬಲ್ಲರು.
ಇಂಥಾ ಸುಮಾ ಕನಕಾಲಗೆ ಈಗ 50 ವರ್ಷ. ರಾಜೀವ್ ಕನಕಾಲ ಅವರ ಜೊತೆ ಸುಮಾ ದಾಂಪತ್ಯ ಜೀವನಕ್ಕೆ 26 ವರ್ಷ. ಇಬ್ಬರ ಬಂಧ ಅನುಬಂಧ ಸಂಬಂಧಕ್ಕೆ ಸಾಕ್ಷಿಯಾಗಿ ಸುಮಾ ಮತ್ತು ರಾಜೀವ್‌ಗೆ ಎದೆಯೆತ್ತರಕ್ಕೆ ಬೆಳೆದ ಇಬ್ಬರು ಮಕ್ಕಳಿದ್ದಾರೆ. ಒಂದರ್ಥದಲ್ಲಿ ಸುಮಾ ಸುಖಿ ಸಂಸಾರವಂತೆ.
ಆದರೆ ಅದ್ಯಾಕೋ ಏನೋ ಸುಮಾ ಅವರ ಈ ಸುಖ ಕಂಡು ಕೆಲವರಿಗೆ ದುಃಖ ಆಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಾಲ.. ಕಾಲಕ್ಕೆ.. ಸುಮಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಆಗಾಗ ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಲೇ ಇರುತ್ತೆ. ಸುಮಾ ಎಷ್ಟೇ ಬಾರಿ ಸ್ಪಷ್ಟೀಕರಣ ನೀಡಿದರೂ ಕೂಡ ಇವರ ವಿಚ್ಛೇದನದ ಸುದ್ದಿಗೆ ಮಾತ್ರ ಸಾವು ಇಲ್ಲ.

ಹೀಗಾಗಿಯೇ ತಮ್ಮ ವಿಚ್ಚೇದನದ ಸುದ್ದಿಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿರುವ ಸುಮಾ ಸದ್ಯ ತಮ್ಮ ಕುರಿತು ಹಬ್ಬಿಸಲಾಗುವ ಈ ಸುದ್ದಿಯ ಕುರಿತು ಸಂದರ್ಶನದಲ್ಲಿ ಮಾತನಾಡಿದ್ದಾರೆ.
''Raw Talks With VK'' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸುಮಾ ಪ್ರತಿಯೊಬ್ಬರ ಬದುಕಿನಲ್ಲಿಯೂ ಏರಿಳಿತಗಳು ಇದ್ದೇ ಇರುತ್ತವೆ ಎಂದು ಹೇಳಿದ್ದಾರೆ. ನಮ್ಮ ಮದುವೆಗೆ 25 ವರ್ಷಗಳಾಗಿವೆ. ಈ 25 ವರ್ಷಗಳಲ್ಲಿ ನನ್ನ ಕೆಲಸ.. ರಾಜೀವ್ ಅವರ ವೃತ್ತಿ ಜೀವನ... ಮಕ್ಕಳ ಲಾಲನೆ ಪಾಲನೆ.. ಪೋಷಕರು.. ಅತ್ತೆ-ಮಾವ.. ಹಲವು ಸಂಬಂಧಗಳು ಬೆಸೆದಿವೆ. ಹಲವಾರು ವಿಷಯಗಳು ನಡೆದಿವೆ ಎಂದು ಹೇಳಿರುವ ಸುಮಾ ದಾಂಪತ್ಯದಲ್ಲಿ ಮನಸ್ತಾಪ ಸಹಜ, ಬದುಕು ಯಾವತ್ತು ಸುಗಮವಾದ ಪ್ರಯಾಣ ಅಲ್ಲ ಎಂದು ಹೇಳಿದ್ದಾರೆ.
ಮನೆ ಅಂದ ಮೇಲೆ.. ಗಂಡ ಹೆಂಡ್ತಿ ಅಂದ ಮೇಲೆ ಅಲ್ಲಿ ಚಿಕ್ಕ ಪುಟ್ಟ ಜಗಳ ನಡೆಯುವುದು ಸಹಜ. ಆದರೆ ಅದರರ್ಥ ನಮ್ಮ ಸಂಬಂಧ ಸರಿಪಡಿಸಲಾಗದಷ್ಟು ಹಾಳಾಗಿದೆ ಎಂದು ಅಲ್ಲ ಎಂದು ಹೇಳಿರುವ ಸುಮಾ ನನ್ನ ಬಗ್ಗೆ ಸುಳ್ಳು ಸುದ್ದಿಯನ್ನು ತೇಲಿ ಬಿಡುವವರ ಬಗ್ಗೆ ನನಗೆ ಅನುಕಂಪ ಇದೆ ಎಂದು ಹೇಳಿದ್ದಾರೆ.
ಮುಂದುವರೆದು ಕೆಲವು ಯೂಟ್ಯೂಬರ್‌ಗಳು ನನಗೆ ಡಿವೋರ್ಸ್ ಕೊಡಿಸಲು ತುದಿಗಾಲಿನಲ್ಲಿ ನಿಂತಿದ್ದರು.. ನನ್ನ ವ್ಯೆಯಕ್ತಿಕ ಬದುಕಿನ ಕುರಿತು ಮನಬಂದಂತೆ ವಿಡಿಯೋಗಳನ್ನು ಮಾಡಿದರು ಎಂದು ಹೇಳಿರುವ ಸುಮಾ ಅವರಿಗೆ ಸ್ಪಷ್ಟೀಕರಣ ನೀಡಲು ನಾನು ನನ್ನ ಗಂಡನ ಜೊತೆ ರೀಲ್ಸ್ ಮಾಡಿದೆ, ಆಗ ಅರೇ ನೀವು ಜೊತೆಯಲ್ಲಿದ್ದೀರಾ..? ಎಂದು ಕಾಮೆಂಟ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಇವರಿಗೆಲ್ಲಾ ಎಷ್ಟು ಹೇಳಿದರು ಪ್ರಯೋಜನ ಇಲ್ಲ ಎಂದು ನಾವು ಈಗ ವಿಚ್ಛೇದನದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಯಾರಾದರೂ ಏನಾದರು ಅಂದುಕೊಳ್ಳಲಿ ನಮ್ಮ ಬದುಕು ನಮಗೆ ಮುಖ್ಯ, ನಮ್ಮ ಜೀವನದ ಕಡೆ ಗಮನ ಕೊಡಬೇಕು, ನಾನು ಕೂಡ ಅದನ್ನೇ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ತಮ್ಮ ಪತಿ ರಾಜೀವ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿರುವ ಸುಮಾ ಕನಕಾಲ ನನ್ನ ಪತಿ ರಾಜೀವ್ ತುಂಬಾ ಸರಳ ವ್ಯಕ್ತಿ. ನನ್ನ ಬದುಕಿನಲ್ಲಿ ಅವರು ನನಗೆ ನೀಡಿದ ಬೆಂಬಲ ತುಂಬಾ ದೊಡ್ದದು. ಕೆಲಸದ ಹಿನ್ನೆಲೆ ನಾನು ಬ್ಯುಸಿ ಇದ್ದಾಗ ಮನೆಯ ಸಂಪೂರ್ಣ ಜವಾಬ್ಧಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ವ್ಯಕ್ತಿ ಅವರು ಎಂದು ಹೇಳಿದ್ದಾರೆ. ಅವರು ನನ್ನ ಬೆನ್ನೆಲುಬು.. ನನ್ನ ಶಕ್ತಿ.. ನಮ್ಮ ನಡುವೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು.. ಜಗಳ ಇರಬಹುದು.. ಆದರೆ ನಮ್ಮ ಸಂಬಂಧ ಯಾವತ್ತು ಹಾಳಾಗುವುದಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











