ಸೈನ್ಯಕ್ಕೆ 117 ಎಕರೆ ಜಮೀನು ದಾನ: ನಟ ಸುಮನ್ ಹೇಳಿದ್ದೇನು?

ಸಿನಿಮಾ ನಟರು ಸಮಾಜ ಸೇವೆ ಮಾಡುವುದು ಮುಂಚಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಸಿನಿಮಾಗಳಲ್ಲಿ ನಟಿಸಿ ಗಳಿಸುವದಕ್ಕಿಂತಲೂ ಹೆಚ್ಚಿನ ಜನಪ್ರಿಯತೆಯನ್ನು ಸಮಾಜ ಸೇವೆಗಳ ಮೂಲಕ ಗಳಿಸುತ್ತಾರೆ ನಟರು.

ಸಿನಿಮಾ ನಟರು ಅಲ್ಲಿ ಸೇವೆ ಮಾಡಿದರು, ಅವರಿಗೆ ಇಷ್ಟು ದಾನ ಕೊಟ್ಟರು ಎಂಬಿತ್ಯಾದಿ ಸುದ್ದಿಗಳನ್ನು ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇವುಗಳಲ್ಲಿ ಕೆಲವು ಸತ್ಯ, ಹಲವು ಮಿಥ್ಯಗಳೂ ಇರುತ್ತವೆ.

ಇದೀಗ ದಕ್ಷಿಣ ಭಾರತದ ಜನಪ್ರಿಯ ನಟ ಸುಮನ್ ಬಗ್ಗೆ ಇಂಥಹುದೇ ಒಂದು ಸುದ್ದಿ ಹರಿದಾಡುತ್ತಿದೆ. ಸುಮನ್ 100 ಕ್ಕೂ ಹೆಚ್ಚು ಎಕರೆಗಳ ಮೌಲ್ಯಯುತ ಜಮೀನನ್ನು ಭಾರತೀಯ ಸೈನ್ಯಕ್ಕೆ ದಾನ ನೀಡಿದ್ದಾರೆ. ಸಿಎಂ ಚಂದ್ರಶೇಖರ್ ರಾವ್ ಸ್ವತಃ ಜಮೀನನ್ನು ಸೈನ್ಯಕ್ಕೆ ಹಸ್ತಾಂತರ ಮಾಡುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಸುಮನ್ ಸ್ಪಷ್ಟನೆ ನೀಡಿದ್ದಾರೆ.

Suman Clarifies About News That He Giving 117 Acres Land To Indian Army

ತೆಲಂಗಾಣ ರಾಜ್ಯದ ಯಾಡಾದ್ರಿ ಬಳಿ 117 ಎಕರೆ ಜಮೀನನ್ನು ನಟ ಸುಮನ್ ಭಾರತೀಯ ಸೇನೆಗೆ ದಾನ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುಮನ್, ''ನಾನು ಆ ರೀತಿಯ ಯಾವುದೇ ದಾನ ಮಾಡಿಲ್ಲ'' ಎಂದು ಹೇಳಿದ್ದಾರೆ.

''ನಾನು ನನ್ನ ಯಾಡಾದ್ರಿಯ ಜಮೀನನ್ನು ದಾನ ಮಾಡಿದ್ದೇನೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ಸತ್ಯವಲ್ಲ. ಆ ಜಮೀನು ವಿವಾದಿತ ಪ್ರದೇಶವಾಗಿದೆ. ಅದರ ಬಗೆಗಿನ ಕೇಸು ನ್ಯಾಯಾಲಯದಲ್ಲಿ ನಡೆಯುತ್ತಿದೆ. ನ್ಯಾಯಾಲಯದ ಆದೇಶ ಬಂದ ಬಳಿಕ ಆ ಜಮೀನಿನ ಬಗ್ಗೆ ನಾನು ಮಾತನಾಡುತ್ತೇನೆ'' ಎಂದು ಸುಮನ್ ಹೇಳಿದ್ದಾರೆ.

ಸುಮನ್ ಅವರ ಯಾಡಾದ್ರಿ ಜಮೀನು ಮೌಲ್ಯಯುತ ಜಮೀನಾಗಿದೆ. ಆ ಜಾಗದ ಒಟ್ಟು ದಾಖಲೆ ಮೌಲ್ಯವೇ 30 ಕೋಟಿಗೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಜಮೀನನ್ನು ಸುಮನ್ 1990ರಲ್ಲಿ ಖರೀದಿಸಿದ್ದರು. ಆದರೆ ಈ ಜಮೀನು ಈಗ ವಿವಾದದಲ್ಲಿದೆ, ಜಮೀನಿನ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

80-90ರ ದಶಕದಲ್ಲಿ ಸುಮನ್ ತೆಲುಗಿನ ನಂಬರ್ 1 ನಟರಾಗಿದ್ದರು. ನಟ ಚಿರಂಜೀವಿಗಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದ ಹಾಗೂ ಸಂಭಾವನೆ ಪಡೆಯುತ್ತಿದ್ದ ಸಮಯವೂ ಒಂದಿತ್ತು. ಆದರೆ ಅವರ ಮೇಲೆ ಬಿದ್ದ ಒಂದು ಪ್ರಕರಣದಿಂದಾಗಿ ಜನಪ್ರಿಯತೆ ತೀವ್ರವಾಗಿ ಕುಗ್ಗಿತು.

1985ರಲ್ಲಿ ಸುಮನ್ ಅನ್ನು ನೀಲಿ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ನೀಲಿ ಚಿತ್ರ ನಿರ್ಮಾಣ ಮಾಡಿದ ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿತ್ತು. ಬಂಧನಕ್ಕೊಳಗಾದ ವ್ಯಕ್ತಿಯೊಬ್ಬನ ಬಳಿ ಸುಮನ್ ಕಾರು ದೊರೆತಿತ್ತು. ಇದರಿಂದಾಗಿ ಸುಮನ್‌ ಅನ್ನು ಬಂಧಿಸಲಾಗಿತ್ತು. ಐದು ತಿಂಗಳು ಜೈಲಿನಲ್ಲಿದ್ದ ಬಳಿಕ ಸುಮನ್‌ಗೆ ಜಾಮೀನು ಸಿಕ್ಕು ಹೊರಬಂದಿದ್ದರು. ನಂತರ ಅವರ ಜನಪ್ರಿಯತೆ ನಿಧಾನಕ್ಕೆ ಕುಗ್ಗುತ್ತಾ ಸಾಗಿತು.

ಸುಮನ್ ಈಗ ದಕ್ಷಿಣ ಭಾರತದ ಪ್ರಮುಖ ಪೋಷಕ ನಟ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸುಮನ್ ನಟಿಸಿದ್ದಾರೆ.

More from Filmibeat

English summary
A news spreading that Suman donating 117 acres land to Indian Army. He clarifies that that 117 acres land is in litigation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X