ಸಮಂತಾ 'ಸನ್‌ ಗ್ಲಾಸ್‌'ನಲ್ಲಿ ಕಾಣಿಸಿಕೊಂಡ ಹೊಸ ಪ್ರಿಯಕರ, ಅಬುದಾಭಿಯಲ್ಲಿ ಫುಲ್ ಜಾಲಿ..?

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ.ಹಾಗಂಥ, ಜೀವನ ಮುಗಿದೇಹೋಯ್ತು ಅಂತೇನು ಇಲ್ಲ. ಕೆಲವರು ಬದುಕಿನಲ್ಲಿ ಹಳೆಯದನ್ನೆಲ್ಲ ಮರೆತು ಮುನ್ನಡೆಯುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ಇನ್ನು ಕೆಲವರು ಸಮಯ-ಸಂದರ್ಭ ಕೂಡಿ ಬಂದಾಗ ತಮ್ಮ

ಇಷ್ಟದ ಹುಡುಗ ಸಿಕ್ಕಾಗ ಮರು ಮದುವೆಯ ಆಲೋಚನೆ ಮಾಡುತ್ತಾರೆ. ಎರಡನೇ ಮದುವೆಯಾಗುವುದರ ಮೂಲಕ ಹೊಸ ಜೀವನ ಆರಂಭ ಮಾಡುತ್ತಾರೆ. ಸಮಂತಾ ಕೂಡ ಈ ಸಾಲಿಗೆ ಸೇರಿಕೊಳ್ಳುತ್ತಾರಾ ಗೊತ್ತಿಲ್ಲ. ಆದರೆ ಸದ್ಯ ಸಮಂತಾ ಅವರ ನಡೆ ಹಲವರಲ್ಲಿ ಅನುಮಾನವನ್ನು ಮೂಡಿಸಿದೆ. ಸಮಂತಾ ಅವರ ಸಾಮಾಜಿಕ ಜಾಲತಾಣದ ಮೇಲೆ ಸದ್ಯ ಒಂದು ವರ್ಗ ಕಣ್ಣಿಟ್ಟಿದೆ. ಇದಕ್ಕೆ ಪೂರಕವಾಗಿ ಸದ್ಯ ಸಮಂತಾ ಅವರ ಫೋಟೊ ಒಂದು ವೈರಲ್ ಆಗಿದೆ.

Sunglass Reflection Fuels Samantha Ruth Prabhu Raj Nidimoru Holiday Speculation

ಹೌದು, ಸಮಂತಾ ಮತ್ತು ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ನಿರ್ಮಾಪಕ ಮತ್ತು ನಿರ್ದೇಶಕರಲ್ಲಿ ಒಬ್ಬರಾದ ರಾಜ್ ನಿಡಿಮೋರು ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವ ಅನುಮಾನ ಅನೇಕರಲ್ಲಿ ಹಲವು ದಿನಗಳಿಂದ ಇದೆ. ಇವರಿಬ್ಬರ ಹಾವ-ಭಾವ ಕೂಡ ಇದಕ್ಕೆ ತಕ್ಕಂತೆಯೇ ಇದೆ. ಸಭೆ-ಸಮಾರಂಭ ಇರಲಿ, ತಿರುಪತಿ ತಿಮ್ಮಪ್ಪನ ದೇವಸ್ಥಾನ ಇರಲಿ.. ಇಬ್ಬರು ಜೊತೆ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಸಮಂತಾ ಅವರಂತೆಯೇ ರಾಜ್ ನಿಡಿಮೋರು ಹಿಂದೊಮ್ಮೆ ಸಂಸಾರಸ್ಥರಾಗಿದ್ದರು. ಶ್ಯಾಮಲಿ ದೇ ಅವರ ಜೊತೆ ಮದುವೆಯಾಗಿದ್ದರು. ಆದರೆ ಈ ಸಂಬಂಧ ಮುರಿದು ಬಿತ್ತು. ಹಾಗಂಥ ಶ್ಯಾಮಲಿ ದೇ ಸುಮ್ಮನೆ ಕುಳಿತುಕೊಂಡಿಲ್ಲ. ತನ್ನ ಮಾಜಿ ಪತ್ನಿಯ ಜೊತೆ ಸಮಂತಾ ಕಾಣಿಸಿಕೊಂಡಾಗೆಲ್ಲ ಶ್ಯಾಮಲಿ ನಿಗಿ ನಿಗಿ ಕೆಂಡವಾಗುತ್ತಿದ್ದಾರೆ. ಕರ್ಮ-ಪಾಪ-ಪುಣ್ಯ ಎಂದೆಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಫೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಇದೀಗ ಸಮಂತಾ ಮತ್ತು ರಾಜ್ ನಿಡಿಮೋರು ಜೊತೆಯಲ್ಲಿಅಬುದಾಭಿಯ ಪ್ರವಾಸಕ್ಕೆ ಹೋಗಿದ್ದಾರೆ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.ಯಾಕೆಂದರೆ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊದಲ್ಲಿ ಸಮಂತಾ ಸನ್ ಗ್ಲಾಸ್ ಹಾಕಿಕೊಂಡು ಫೋಸ್ ನೀಡಿದ್ದಾರೆ. ಆದರೆ ಕ್ಯಾಮರಾ ಕಣ್ಣಿನಲ್ಲಿ ಕೇವಲ ಸಮಂತಾ ಮಾತ್ರ ಸೆರೆಯಾಗಿಲ್ಲ. ಸಮಂತಾ ಅವರ ಕನ್ನಡಕದಲ್ಲಿ ರಾಜ್ ನಿಡಿಮೋರು ಅವರ ಪ್ರತಿಬಿಂಬ ಕೂಡ ಸೆರೆಯಾಗಿದೆ ಎನ್ನುವ ವಾದವನ್ನು ಸದ್ಯ ಅನೇಕರು ಮಾಡುತ್ತಿದ್ದಾರೆ.

ವಿಶೇಷವಾಗಿ ರೆಡ್ಡಿಟ್ ವೇದಿಕೆಯಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ಸಂಬಂಧದ ಕುರಿತು, ಸಮಂತಾ ಅವರ ಸನ್‌ ಗ್ಲಾಸ್‌ನಲ್ಲಿ ಕಂಡಿರುವ ಪ್ರತಿಬಿಂಬದ ಕುರಿತು ವ್ಯಾಪಕವಾದ ಚರ್ಚೆ ನಡೆಯುತ್ತಿದೆ.ಸಮಂತಾ ಅವರ ಅಬುದಾಭಿ ಪ್ರವಾಸದ ಫೋಟೊಗಳು ವೈರಲ್ ಆಗಿವೆ. ಅಬುಧಾಬಿಯ ಕಸ್ರ್ ಅಲ್ ಸರಬ್ ಡೆಸರ್ಟ್ ರೆಸಾರ್ಟ್‌ನಲ್ಲಿನ ಸಮಂತಾ ಮತ್ತು ರಾಜ್ ನಿಡಿಮೋರು ಒಟ್ಟಿಗೆ ವಾಸ್ತವ್ಯ ಹೂಡಿದ್ದಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

ಎಂದಿನಂತೆ ಇಲ್ಲಿಯವರೆಗೆ ತಮ್ಮ ಬಗ್ಗೆ ಕೇಳಿ ಬಂದ ಸುದ್ದಿಗಳಿಗೆ ಸಮಂತಾ ಆಗಲಿ ಮತ್ತು ರಾಜ್ ನಿಡಿಮೋರು ಪ್ರತಿಕ್ರಿಯೆಯನ್ನು ನೀಡಿಲ್ಲ. ಹೀಗಾಗಿಯೇ ಮೌನಂ ಸಮ್ಮತಿ ಲಕ್ಷಣಂ ಎಂದುಕೊಂಡ ಅನೇಕರು ಸದ್ಯ ನಾಗಚೈತನ್ಯ ಅವರಿಂದ ದೂರವಾಗಿರುವ ಸಮಂತಾ ಶೀಘ್ರದಲ್ಲಿಯೇ ರಾಜ್ ನಿಡಿಮೋರು ಜೊತೆ ಮದುವೆಯಾಗುವುದು ಖಚಿತ ಎನ್ನುವ ಭವಿಷ್ಯವಾಣಿ ಹೇಳಲು ಶುರು ಮಾಡಿದ್ದಾರೆ.

ನಿಜಕ್ಕೂ ಸಮಂತಾ ಮತ್ತು ರಾಜ್ ನಿಡಿಮೋರು ಪ್ರೀತಿಸುತ್ತಿದ್ದಾರಾ ? ಸದ್ಯ ಇಬ್ಬರು ಜೊತೆಯಲ್ಲಿ ಅಬುದಾಭಿ ಪ್ರವಾಸದಲ್ಲಿದ್ದಾರಾ ? ಇಬ್ಬರು ಮದುವೆಯಾಗ್ತಾರಾ ? ಉತ್ತರ ಸರಿಯಾದ ಸಮಯ ಬಂದಾಗಲೇ ಗೊತ್ತಾಗಲಿದೆ.

More from Filmibeat

English summary
"Sunglass reflection sparks major buzz: Are Samantha Ruth Prabhu and Raj Nidimoru on holiday together? Find out!"
Read more about: samantha tollywood affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X