'ಪುಷ್ಪ': ಹಾಸ್ಯ ನಟ ಸುನಿಲ್‌ನ ಭಯಂಕರ ಅವತಾರ

ತೆಲುಗಿನ 'ಪುಷ್ಪ' ಸಿನಿಮಾ ಪ್ರಾರಂಭವಾದಾಗಿನಿಂದಲೂ ಹಲವು ಕಾರಣಕ್ಕೆ ಗಮನ ಸೆಳೆದಿದೆ. ಭಿನ್ನ ಕತೆ, ಭಿನ್ನ ಪಾತ್ರವರ್ಗ, ಹಿಟ್ ನಾಯಕ-ನಿರ್ದೇಶಕ ಜೋಡಿ ಹೀಗೆ ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟಲು ಹಲವು ಕಾರಣಗಳಿವೆ.

ರಕ್ತ ಚಂದನ ಕಳ್ಳಸಾಗಣೆಯಂಥಹಾ ವಿಷಯವನ್ನು ವಸ್ತುವನ್ನಾಗಿ 'ಪುಷ್ಪ' ಸಿನಿಮಾ ಇಟ್ಟುಕೊಂಡಿದೆ. ಕತೆಯನ್ನು ಹೇಳಲು ದೊಡ್ಡ ಪಾತ್ರವರ್ಗವನ್ನೇ ಬಳಸಿಕೊಳ್ಳುತ್ತಿದೆ. ಅಲ್ಲು ಅರ್ಜುನ್ ನಾಯಕ, ರಶ್ಮಿಕಾ ಮಂದಣ್ಣ ನಾಯಕಿಯರಾಗಿದ್ದಾರಾದರೂ ಹಲವು ಗಟ್ಟಿ ಪಾತ್ರಗಳು ಸಿನಿಮಾಗಳಲ್ಲಿ ಇದ್ದು, ಅವಕ್ಕಾಗಿ ಪ್ರತಿಭಾವಂತ ಕಲಾವಿದರನ್ನೇ ನಿರ್ದೇಶಕ ಸುಕುಮಾರ್ ಆರಿಸಿಕೊಂಡಿದ್ದಾರೆ.

'ಪುಷ್ಪ' ಸಿನಿಮಾದ ಮೂರು ಹಾಡುಗಳು, ಕೆಲವು ಪೋಸ್ಟರ್‌ಗಳು ಈಗಾಗಲೇ ಬಿಡುಗಡೆ ಆಗಿವೆ. ಇದೀಗ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಹಾಸ್ಯ ನಟ ಸುನಿಲ್‌ರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

 Sunils Poster Released From Pushpa Movie

ಹಾಸ್ಯ ನಟರಾಗಿ ಬಹಳ ಜನಪ್ರಿಯತೆ ಪಡೆದ್ದ ಸುನಿಲ್ ಆ ನಂತರ ನಾಯಕ ನಟನಾಗಲು ಯತ್ನಿಸಿ ಪ್ರಯತ್ನ ವಿಫಲವಾಗಿ ಈಗ ವಿಲನ್ ಪಾತ್ರಗಳತ್ತ ಹೊರಳಿದ್ದು, 'ಪುಷ್ಪ' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಸುನಿಲ್ ಕಾಣಿಸಿಕೊಳ್ಳುತ್ತಿದ್ದಾರೆ. ಸುನಿಲ್ ಪಾತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ವಿಲನ್ ರೂಪದಲ್ಲಿ ಭಯಾನಕವಾಗಿ ಕಾಣುತ್ತಿದ್ದಾರೆ ಸುನಿಲ್.

ನಡು ವಯಸ್ಸಿನ ವಿಲನ್ ಪಾತ್ರದಲ್ಲಿ ಸುನಿಲ್ ನಟಿಸುತ್ತಿದ್ದು, ರಕ್ತ ಚಂದನ ಮರ ಕಡಿಸುವ ಮಾಲೀಕನ ಪಾತ್ರ ಅವರದ್ದು ಎನ್ನಲಾಗುತ್ತಿದೆ. ಕನ್ನಡದ ನಟ ಡಾಲಿ ಧನಂಜಯ್ ಸಹ 'ಪುಷ್ಪ' ಸಿನಿಮಾದಲ್ಲಿ 'ಜಾಲಿ ರೆಡ್ಡಿ' ಪಾತ್ರದಲ್ಲಿ ನಟಿಸಿದ್ದು, ಧನಂಜಯ್‌ರ ತಂದೆಯ ಪಾತ್ರವನ್ನು ಸುನಿಲ್ ನಿರ್ವಹಿಸುತ್ತಿದ್ದಾರೆ. ಸುನಿಲ್‌ರ ಪಾತ್ರದ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. 'ಪುಷ್ಪ' ಸಿನಿಮಾದಲ್ಲಿ ಸುನಿಲ್ ಅವರದ್ದು ಮಂಗಳಂ ಸೀನು ಹೆಸರಿನ ಪಾತ್ರ. ಕನ್ನಡಿಗ ಡಾಲಿ ಧನಂಜಯ್ ಪಾತ್ರದ ತಂದೆಯ ಪಾತ್ರ ಇದು ಎನ್ನಲಾಗಿದೆ.

ನೂರಾರು ಸಿನಿಮಾಗಳಲ್ಲಿ ಹಾಸ್ಯ ನಟನ ಪಾತ್ರದಲ್ಲಿ ನಟಿಸಿದ್ದ ಸುನಿಲ್‌ ಹಾಸ್ಯನಟರಾಗಿ ಖ್ಯಾತಿಯ ಉತ್ತುಂಗದಲ್ಲಿದ್ದರು, ಅದೇ ಕಾರಣಕ್ಕೆ ನಾಯಕನಾಗಿಯೂ ಯಶಸ್ಸು ಪಡೆಯುತ್ತೇನೆಂಬ ಹುಮ್ಮಸ್ಸಿನಿಂದ ಸಿಕ್ಸ್‌ಪ್ಯಾಕ್ ಮಾಡಿಕೊಂಡು ನಾಯಕ ನಟನಾದರು ಕೆಲವು ಸಿನಿಮಾಗಳಲ್ಲಿ ನಟಿಸಿದರು. ರಾಜಮೌಳಿ ನಿರ್ದೇಶನದ 'ಮರ್ಯಾದ ರಾಮನ್ನ' ಸಿನಿಮಾದಲ್ಲಿಯೂ ಸುನಿಲ್ ನಾಯಕನಾಗಿ ನಟಿಸಿದರು ಆದರೆ ಎರಡು ಸಿನಿಮಾಗಳು ಬಿಟ್ಟರೆ ಇನ್ನಾವ ಸಿನಿಮಾಗಳೂ ಅವರ ಕೈ ಹಿಡಿಯಲಿಲ್ಲ.

ಇದೀಗ ನಾಯಕನ ಪಾತ್ರದ ಆಸೆ ಕೈ ಬಿಟ್ಟಿರುವ ಸುನಿಲ್ ವಿಲನ್ ಆಗಿ ಮಿಂಚಲು ತಯಾರಾಗಿದ್ದಾರೆ. ನಟ ಜಗಪತಿ ಬಾಬು ಹಾದಿ ಹಿಡಿದಿರುವ ಸುನಿಲ್ ಈ ಹಿಂದೆಯೂ 'ಕಲರ್ ಫೋಟೊ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ 'ಪುಷ್ಪ' ಸಿನಿಮಾದಲ್ಲಿ ಖಡಕ್ ವಿಲನ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

'ಪುಷ್ಪ' ಸಿನಿಮಾದಲ್ಲಿ ವಿಲನ್‌ಗಳ ದಂಡೇ ಇದೆ. ಸಿನಿಮಾದಲ್ಲಿ ಮುಖ್ಯ ವಿಲನ್‌ ಆಗಿ ಮಲಯಾಳಂನ ಫಹಾದ್ ಫಾಸಿಲ್ ಇದ್ದಾರೆ. ಜಗಪತಿ ಬಾಬು, ನಟ ಸುನಿಲ್, ಡಾಲಿ ಧನಂಜಯ್, ಕನ್ನಡದ ಕಿಶೋರ್ ಸಹ ಇದ್ದಾರೆ.

'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆದಾರನೊಬ್ಬನ ಕತೆಯನ್ನು ಹೊಂದಿದ್ದು, ಅಲ್ಲು ಅರ್ಜುನ್ ನಾಯಕ ಹಾಗೂ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ತೆಲುಗಿನ ಸೂಪರ್ ಹಿಟ್ ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಅಲ್ಲು ಅರ್ಜುನ್‌ಗಾಗಿ 'ಆರ್ಯ', 'ಆರ್ಯ 2' ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿದ್ದರು. ಇದು ಈ ಜೋಡಿಯ ಮೂರನೇ ಸಿನಿಮಾ. 'ಪುಷ್ಪ' ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಮೊದಲ ಭಾಗ ಡಿಸೆಂಬರ್ 17 ರಂದು ತೆರೆಗೆ ಬರಲಿದೆ.

More from Filmibeat

English summary
Actor Sunil's new poster from Pushpa movie released. Sunil acting as villain in the movie. Movie will release on December 17.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X