ಸುದೀಪ್ ಗುರುಗಳು ಈಗ ವಿಜಯ್ ದೇವರಕೊಂಡಗೆ ತಂದೆ!
ಸುದೀಪ್ ಗೆ ಗುರು, ಸಾಕು ತಂದೆ ಆಗಿದ್ದವರು ಈಗ ತೆಲುಗು ನಟ ವಿಜಯ್ ದೇವರಕೊಂಡ ಗೆ ತಂದೆ ಆಗುತ್ತಿದ್ದಾರೆ!
ಪೈಲ್ವಾನ್ ಸಿನಿಮಾದಲ್ಲಿ ಸುದೀಪ್ ಸಾಕು ತಂದೆ, ಕುಸ್ತಿ ಗುರು ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟ ಸುನಿಲ್ ಶೆಟ್ಟಿ, ಹೊಸ ಸಿನಿಮಾವೊಂದರಲ್ಲಿ ನಟ ವಿಜಯ್ ದೇವರಕೊಂಡ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಜಯ್ ದೇವರಕೊಂಡ ನಟಿಸುತ್ತಿರುವ ಫೈಟರ್ ಸಿನಿಮಾದಲ್ಲಿ ಸುನಿಲ್ ಶೆಟ್ಟಿ ಅವರದ್ದು ವಿಜಯ್ ದೇವರಕೊಂಡ ತಂದೆಯ ಪಾತ್ರವಂತೆ. ಸಖತ್ ಆಕ್ಷನ್ ಸಿನಿಮಾ ಆಗಿರುವ ಫೈಟರ್ ನಲ್ಲಿ ಸುನಿಲ್ ಶೆಟ್ಟಿಗೂ ಆಕ್ಷನ್ ದೃಶ್ಯಗಳಿವೆ ಎನ್ನಲಾಗುತ್ತಿದೆ.

ಫೈಟರ್ ಸಿನಿಮಾದ 40% ಚಿತ್ರೀಕರಣ ಈಗಾಗಲೇ ಮುಗಿದಿದೆ. ಕೊರೊನಾ ಇದ್ದ ಕಾರಣ ಚಿತ್ರೀಕರಣ ಬಂದ್ ಆಗಿದ್ದು, ಈಗ ಮತ್ತೆ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಮುಂದುವರೆಸುವ ಯೋಚನೆಯಲ್ಲಿದ್ದಾರೆ ನಿರ್ದೇಶಕ ಪುರಿ ಜಗನ್ನಾಥ್.
Recommended Video
ಬಾಲಿವುಡ್ ನಟಿ ಅನನ್ಯಾ ಪಾಂಡೆ ಸಿನಿಮಾದ ನಾಯಕಿಯಾಗಿದ್ದು, ರಮ್ಯಾ ಕೃಷ್ಣ, ರೋನಿತ್ ರಾಯ್ ಅವರುಗಳು ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ನಟಿ ಚಾರ್ಮಿ ಹಾಗೂ ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











