ಅಲ್ಲು ಅರ್ಜುನ್ ನಿರ್ಮಾಣ ಸಂಸ್ಥೆ ಎದುರು ಬೆತ್ತಲೆ ಪ್ರತಿಭಟನೆ ಮಾಡಿದ ಯುವತಿ!
ನಿರ್ಮಾಪಕನೊಬ್ಬನಿಂದ ಮೋಸವಾಗಿದೆ ಎಂದು ಆರೋಪಿಸಿರುವ ಯುವತಿಯೊಬ್ಬಾಗಿ ನಿರ್ಮಾಣ ಸಂಸ್ಥೆಯ ಎದುರು ಬೆತ್ತಲೆಯಾಗಿ ಪ್ರತಿಭಟನೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ತೆಲುಗು ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರುವ ಗೀತಾ ಆರ್ಟ್ಸ್ ಎದುರು ಸುನಿತಾ ಬೋಯಾ ಹೆಸರಿನ ಯುವತಿಯೊಬ್ಬರು ತಮಗೆ ಅನ್ಯಾಯವಾಗಿದೆ ಎಂದು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ. ಗೀತಾ ಆರ್ಟ್ಸ್ ನಿರ್ಮಾಣ ಸಂಸ್ಥೆಯು ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಒಡೆತನದ್ದಾಗಿದೆ.
ಗೀತಾ ಆರ್ಟ್ಸ್‌ನ ಸಹ ನಿರ್ಮಾಪಕ ಆಗಿರುವ ಬನ್ನಿ ವಾಸುವಿನಿಂದ ತನಗೆ ಅನ್ಯಾಯ ಆಗಿದೆ. ಬನ್ನಿ ವಾಸು ತನನ್ನು ವಿವಾಹವಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾನೆ ಎಂದು ಸುನಿತಾ ಬೋಯಾ ಆರೋಪ ಮಾಡಿದ್ದು, ಗೀತಾ ಆರ್ಟ್ಸ್ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ. ಆಕೆಯನ್ನು ಮಹಿಳಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸುನಿತಾ ಬೋಯಾ, ಬನ್ನಿ ವಾಸು ವಿರುದ್ಧ ಪ್ರತಿಭಟನೆ ಮಾಡಿರುವುದು ಇದು ಮೊದಲೇನು ಅಲ್ಲ ಈ ಹಿಂದೆಯೂ ಹಲವು ಬಾರಿ ಆಕೆ ಪ್ರತಿಭಟನೆ ನಡೆಸಿದ್ದರು. ಆಗಲೂ ಪೊಲೀಸರ ಮಧ್ಯ ಪ್ರವೇಶಿಸಿದ್ದರು. ಬನ್ನಿ ವಾಸು, ಅಲ್ಲು ಅರ್ಜುನ್‌ರ 'ಬನ್ನಿ' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಅಲ್ಲು ಅರ್ಜುನ್ ಹಾಗೂ ಅವರ ತಂದೆ ಅಲ್ಲು ಅರವಿಂದ್ ಅವರೊಟ್ಟಿಗೆ ಆತ್ಮೀಯ ಬಂಧ ಹೊಂದಿದ್ದಾರೆ.

ಭಾರತೀಯ ಸಿನಿಮಾ ರಂಗದಲ್ಲಿ ಮೀ ಟೂ ಅಭಿಯಾನ ಆರಂಭವಾದಾಗ ತೆಲುಗು ಚಿತ್ರನಟಿ ಶ್ರೀ ರೆಡ್ಡಿ ಸಹ ಇದೇ ರೀತಿ ಬೆತ್ತಲೆ ಪ್ರತಿಭಟನೆ ನಡೆಸಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಈಗ ಸುನಿತಾ ಬೋಯಾ ಸಹ ಅದೇ ಹಾದಿ ಹಿಡಿದಿದ್ದಾರೆ.


Click it and Unblock the Notifications











