ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ 'ಪುಷ್ಪ' ಸಿನಿಮಾದಲ್ಲಿ ಸನ್ನಿ ಲಿಯೋನ್
ಟಾಲಿವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಕೂಡ ಒಂದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯ ಭರ್ಜರಿಯಾಗಿ ಚಿತ್ರೀಕರಣ ಮಾಡುತ್ತಿದೆ. ಚಿತ್ರದ ಪುಟ್ಟ ಟೀಸರ್ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿರುವ ಪುಷ್ಪ ಎರಡು ಪಾರ್ಟ್ ಗಳಲ್ಲಿ ತೆರೆಗೆ ಬರುತ್ತಿದೆ.
ಟೀಸರ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಅಚ್ಚರಿ ಪಟ್ಟ ಚಿತ್ರತಂಡ ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಪುಷ್ಪ ಸಿನಿಮಾದಲ್ಲಿ ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ನಿರ್ದೇಶಕ ಸುಕುಮಾರ್ ಸಿನಿಮಾ ಅಂದ್ಮೇಲೆ ಐಟಂ ಹಾಡಿಗೆ ವಿಶೇಷ ಸ್ಥಾನವಿರುತ್ತೆ. ಸುಕುಮಾರ್ ಅವರ ಮೊದಲ ಸಿನಿಮಾದಿಂದ ಇತ್ತೀಚಿಗೆ ಬಿಡುಗಡೆಯಾದ ಸೂಪರ್ ಹಿಟ್ 'ರಂಗಸ್ಥಲಂ' ಸಿನಿಮಾವರೆಗೂ ಐಟಂ ಹಾಡುಗಳು ಆಕರ್ಷವಾಗಿದ್ದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿವೆ. ಇದೀಗ ಪುಷ್ಪ ಸಿನಿಮಾದಲ್ಲೂ ಐಟಂ ಹಾಡಿದ್ದು, ಈ ವಿಶೇಷ ಹಾಡಿನ ಬಗ್ಗೆಯೂ ಅಷ್ಟೆ ಕಾಳಜಿ ವಹಿಸಿದ್ದಾರಂತೆ.

ಐಟಂ ಹಾಡಿಗೆ ಚಿತ್ರತಂಡ ಸನ್ನಿ ಲಿಯೋನ್ ಅವರನ್ನು ಸಂಪರ್ಕ ಮಾಡಿದೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅಲ್ಲದೇ ಚಿತ್ರದಲ್ಲಿ ನಟಿಸಲು ಸನ್ನಿ ಲಿಯೋನ್ ಅವರಿಗೆ 50 ಲಕ್ಷ ರೂ. ಸಂಭಾವನೆ ನೀಡಲು ಚಿತ್ರತಂಡ ಮುಂದಾಗಿದೆ ಎನ್ನಲಾಗುತ್ತಿದೆ.
Recommended Video
ಅಂದಹಾಗೆ ಪುಷ್ಪ ಸಿನಿಮಾದ ಐಟಂ ಹಾಡಿಗೆ ಈ ಮೊದಲು ದಿಶಾ ಪಟಾನಿ, ನೋರಾ ಫತೇಹಿ ಹೆಸರು ಕೇಳಿಬರುತ್ತಿತ್ತು. ಆದರೆ ಚಿತ್ರತಂಡ ಸನ್ನಿ ಲಿಯೋನ್ ಅವರ ಬಳಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿಸಬೇಕೆಂದು ಪ್ಲಾನ್ ಮಾಡಿದ್ದಾರಂತೆ. 'ಪುಷ್ಪ' ತಂಡದ ಆಸೆಯನ್ನು ಸನ್ನಿಲಿಯೋನ್ ಈಡೇರಿಸುತ್ತಾರಾ ಎಂದು ಕಾದುನೋಡಬೇಕು.


Click it and Unblock the Notifications











