For Quick Alerts
  ALLOW NOTIFICATIONS  
  For Daily Alerts

  ತೆಲುಗು ನಟ ವಿಷ್ಣು ಮಂಚು ಜತೆ ಸನ್ನಿ ಲಿಯೋನ್ ಲಿಪ್‌ಲಾಕ್? ವೈರಲ್ ಆಯ್ತು ಟೀಸರ್

  |

  ತೆಲುಗು ನಟ ಮಂಚು ವಿಷ್ಣು ಅಭಿನಯದ ಮುಂದಿನ ಚಿತ್ರ 'ಜಿನ್ನಾ'ದ ಟೀಸರ್ ಇಂದು ( ಸೆಪ್ಟೆಂಬರ್ 9 ) ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಸನ್ನಿ ಲಿಯೋನ್ ಅಭಿನಯಿಸಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಆರ್ ಎಕ್ಸ್ 100 ಖ್ಯಾತಿಯ ಪಾಯಲ್ ರಜಪೂತ್ ನಾಯಕಿಯಾಗಿ ಅಭಿನಯಿಸಿದ್ದಾರೆ.

  ಇನ್ನು ಮಾಜಿ ನೀಲಿತಾರೆ ಸನ್ನಿ ಲಿಯೋನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಇಂದು ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಒಂದೆರೆಡು ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಈ ಪೈಕಿ ದೃಶ್ಯವೊಂದರಲ್ಲಿ ಸನ್ನಿ ಲಿಯೋನ್ ಮತ್ತು ನಟ ಮಂಚು ವಿಷ್ಣು ನಡುವೆ ಲಿಪ್ ಲಾಕ್ ದೃಶ್ಯವಿದ್ದು, ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗೂ ಟ್ರೋಲ್ ಪೇಜ್‌ಗಳು ಈ ಕುರಿತಾಗಿ ಟ್ರೋಲ್ ಮಾಡಿವೆ.

  ಇನ್ನು ಈ ಚಿತ್ರದಲ್ಲಿ ಮಂಚು ವಿಷ್ಣು ಟೆಂಟ್ ಹೌಸ್ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಹಳ್ಳಿಯಲ್ಲಿ ನಡೆಯುವ ಕಾಮಿಡಿ - ಹಾರರ್ ಎಂಟರ್‌ಟೈನರ್ ಎಂಬುದು ಟೀಸರ್‌ನಲ್ಲಿ ಇರುವ ದೃಶ್ಯಗಳ ಮೂಲಕ ತಿಳಿದುಬಂದಿದೆ. ಜಿನ್ನಾ ( ನಾಯಕ ) ಯಾವುದಾದರೂ ಶುಭ ಕಾರ್ಯಕ್ಕೆ ಟೆಂಟ್ ಹೌಸ್ ತಂದರೆ ಜೊತೆಗೆ ದುರದೃಷ್ಟವನ್ನೂ ಸಹ ತರುತ್ತಾನೆ ಎಂಬ ದೃಶ್ಯದೊಂದಿಗೆ ಶುರುವಾಗುವ ಟೀಸರ್‌ನಲ್ಲಿ ನಂತರ ಹಾರರ್ ದೃಶ್ಯಗಳಿವೆ. ಇನ್ನು ಈ ರೀತಿಯ ಚಿತ್ರಗಳು ಈಗಾಗಲೇ ಸಾಕಷ್ಟು ಬಂದಿವೆ, ಹೊಸತನ್ನೇನಾದರೂ ಪ್ರಯತ್ನಿಸಿ ಹಿಟ್ ದೊರಕಲಿದೆ, ಈ ರೀತಿಯ ಹಳೆಯ ಕಥೆಗಳ ಮೂಲಕ ಬಂದರೆ ಮತ್ತೊಂದು ಫ್ಲಾಪ್ ಪಕ್ಕಾ ಎಂದು ಟೀಸರ್ ವೀಕ್ಷಿಸಿದ ಸಿನಿ ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ.

  ಕಳೆದ ವರ್ಷ ಮೋಸಗಾಳ್ಳು ಎಂಬ ಚಿತ್ರದಲ್ಲಿ ಮಂಚು ವಿಷ್ಣು ಅಭಿನಯಿಸಿದ್ದರು ಹಾಗೂ ಈ ಚಿತ್ರ ಆರಂಭಕ್ಕೂ ಮುನ್ನ ಹುಟ್ಟುಹಾಕಿದ್ದ ಕೊಂಚ ನಿರೀಕ್ಷೆಯನ್ನೂ ಕೂಡ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹೀಗೆ ಬಾಕ್ಸ್ ಆಫೀಸ್ ನೀಡುವ ಪ್ರಯತ್ನದಲ್ಲಿರುವ ಮಂಚು ವಿಷ್ಣುಗೆ ಈ ಚಿತ್ರವಾದರೂ ಯಶಸ್ಸು ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

  Read more about: telugu sunny leone
  English summary
  Sunny Leone scene from Vishnu Manchu's Ginna movie teaser goes viral
  Saturday, September 10, 2022, 10:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X