'ಅದಿಪುರುಷ್' ಸಿನಿಮಾ; ಪ್ರಭಾಸ್ ಸಹೋದರ ಲಕ್ಷ್ಮಣನ ಪಾತ್ರಕ್ಕೆ ಬಾಲಿವುಡ್ ನಟನ ಎಂಟ್ರಿ
ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾ ದಿನಕ್ಕೊಂದು ವಿಚಾರಕ್ಕೆ ಸುದ್ದಿಯಲ್ಲಿದೆ. ಚಿತ್ರ ಸೆಟ್ಟೇರುವ ಮೊದಲೇ ಟಾಲಿವುಡ್ ನಿಂದ ಬಾಲಿವುಡ್ ವರೆಗು ಸದ್ದು ಮಾಡುತ್ತಿರುವ ಆದಿಪುರುಷ್ ಸಿನಿಮಾದ ಬಗ್ಗೆ ಮತ್ತೊಂದು ಅಪ್ ಡೇಟ್ ಹೊರಬಿದ್ದಿದೆ. ಇತ್ತೀಚಿಗಷ್ಟೆ ನಾಯಕಿ ಫಿಕ್ಸ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿದ್ದೀರಿ. ಇದೀಗ ರಾಮ ಪ್ರಭಾಸ್ ಗೆ ಸಹೋದರ ಲಕ್ಷ್ಮಣ ಸಿಕ್ಕಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಆದಿಪುರುಷ್ ಸಿನಿಮಾದಲ್ಲಿ ನಾಯಕಿಯಾಗಿ ಕೃತಿ ಸನೂನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಬೆನ್ನಲ್ಲೇ ಲಕ್ಷ್ಮಣ ಪಾತ್ರಕ್ಕೆ ಸನ್ನಿ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾ ತಂಡ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಸನ್ನಿ ಎಂಟ್ರಿ ಅಧಿಕೃತ ಎನ್ನುತ್ತಿವೆ ಮೂಲಗಳು. ಮುಂದೆ ಓದಿ.

ಸೀತೆ ಪಾತ್ರದಲ್ಲಿ ಕೃತಿ ಸನೂನ್
ಅದಿಪುರುಷ್ ಸಿನಿಮಾ ಪಾತ್ರಗಳ ಆಯ್ಕೆ, ಬಜೆಟ್ ಸೇರಿದಂತೆ ಅನೇಕ ವಿಚಾರಗಳ ಮೂಲಕ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿದೆ. ಇತ್ತೀಚಿಗಷ್ಟೆ ಸಿನಿಮಾದ ನಾಯಕಿ ಯಾರು ಎನ್ನುವ ಮಾಹಿತಿ ಹೊರಬಿದ್ದಿದೆ. ಪ್ರಭಾಸ್ ಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ನಟ ಕೃತಿ ಸನೂನ್ ಆಯ್ಕೆ ಆಗುವ ಮೂಲಕ ಕುತೂಹಲಕ್ಕೆ ತೆರೆಬಿದ್ದಿದೆ. ಚಿತ್ರದಲ್ಲಿ ಕೃತಿ ಸನೂನ್ ಸಿನಿಮಾದಲ್ಲಿ ಸೀತೆಯಾಗಿ ನಟಿಸಲಿದ್ದಾರೆ.

ರಾಮನಾಗಿ ಪ್ರಭಾಸ್, ರಾವಣನಾಗಿ ಸೈಫ್ ಅಲಿ ಖಾನ್ ನಟನೆ
ನಟ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮನ ಪಾತ್ರದಲ್ಲಿ ಮಿಂಚುತ್ತಿರುವ ಪ್ರಭಾಸ್ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇನ್ನು ಚಿತ್ರದಲ್ಲಿ ರಾವಣನಾಗಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ.

ಲಕ್ಷ್ಮಣ ಪಾತ್ರಕ್ಕೆ ಸನ್ನಿ ಸಿಂಗ್ ಎಂಟ್ರಿ
ಆದಿಪುರುಷ್ ಸಿನಿಮಾದ ಪಾತ್ರಗಳ ಆಯ್ಕೆ ಇನ್ನೂ ನಡೆಯುತ್ತಿದೆ. ಇದೀಗ ಲಕ್ಷ್ಮಣನ ಪಾತ್ರ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿದೆ. ಪ್ರಭಾಸ್ ಸಹೋದರ ಲಕ್ಷ್ಮಣನ ಪಾತ್ರದಲ್ಲಿ ಬಾಲಿವುಡ್ ನಟ ಸನ್ನಿ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಭಾಸ್ ಮತ್ತು ನಿರ್ದೇಶಕ ಓಂ ರಾವತ್ ಅವರ ಬಿಗ್ ಸಿನಿಮಾದಲ್ಲಿ ನಟಿಸಲು ಸನ್ನಿ ಸಿಂಗ್ ಸಖತ್ ಎಕ್ಸಾಯಿಟ್ ಆಗಿದ್ದಾರೆ.
Recommended Video

ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ
ಆದಿಪುರುಷ್ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಓಂ ರಾವತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆದಿಪುರುಷ್ ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸ ಮುಗಿಸಿದ್ದು, ಚಿತ್ರೀಕರಣಕ್ಕೆ ಹೊರಡಲು ಸಿದ್ಧವಾಗಿದೆ. ಚಿತ್ರದಲ್ಲಿ ಹೆಚ್ಚು ವಿ ಎಫ್ ಎಕ್ಸ್ ದೃಶ್ಯಗಳು ಇರಲಿದ್ದು, ಅಂತರಾಷ್ಟ್ರೀಯ ಮಟ್ಟದ ವಿ ಎಕ್ಸ್ ಎಫ್ ತಂತ್ರಜ್ಞರು ಕೆಲಸ ಮಾಡಲಿದ್ದಾರಂತೆ.


Click it and Unblock the Notifications











