'ಸೈರಾ' ಡೈರೆಕ್ಟರ್ 'ಬ್ಲಾಕ್ ಮೇಲ್' ಹೇಳಿಕೆಗೆ ಜೂನಿಯರ್ NTR ಅಭಿಮಾನಿಗಳು ಕೆಂಡಾಮಂಡಲ

ತೆಲುಗಿನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾದ ಸುರೇಂದರ್ ರೆಡ್ಡಿ ಇತ್ತೀಚಿಗಷ್ಟೆ ಮೆಗಾಸ್ಟಾರ್ ಚಿರಂಜೀವಿ ಜೊತೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿ ಯಶಸ್ಸಿನಲ್ಲಿದ್ದಾರೆ. ಇದಕ್ಕೂ ಮೊದಲು ಕಿಕ್, ರೇಸಗುರ್ರಂ, ಊಸರವಳ್ಳಿ ಅಂತಹ ಚಿತ್ರಗಳನ್ನ ನಿರ್ದೇಶಿಸಿರುವ ಸುರೇಂದರ್ ರೆಡ್ಡಿ ಈಗ ಜೂನಿಯರ್ ಎನ್.ಟಿ.ಆರ್ ಅಭಿಮಾನಿಗಳನ್ನ ಕೆಂಗಣ್ಣಿಗೆ ಬಿದ್ದಿದ್ದಾರೆ.

ಖಾಸಗಿ ಸುದ್ದಿವಾಹಿನಿ ಜೊತೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ವೇಳೆ ಯಂಗ್ ಟೈಗರ್ ಎನ್.ಟಿ.ಆರ್ ಕುರಿತು ಕುತೂಹಲಕಾರಿ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದು, ಈ ಹೇಳಿಕೆ ಈಗ ಎನ್.ಟಿ.ಆರ್ ಅಭಿಮಾನಿ ಬಳಗವನ್ನ ಕೆರಳಿಸುವಂತೆ ಮಾಡಿದೆ.

ಸುರೇಂದರ್ ರೆಡ್ಡಿ ಹೇಳಿದ ಆ ಮಾತನ್ನು ಖಂಡಿಸಿ, ಎನ್.ಟಿ.ಆರ್ ಫ್ಯಾನ್ಸ್ ಆಕ್ರೋಶ ಹೊರಹಾಕುತ್ತಿದ್ದಾರೆ. ಸುರೇಂದರ್ ರೆಡ್ಡಿ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ, ಸೈರಾ ನಿರ್ದೇಶಕ ಯಂಗ್ ಟೈಗರ್ ಕುರಿತು ಹೇಳಿದ್ದೇನು? ಮುಂದೆ ಓದಿ....

ಪ್ರಭಾಸ್ ಜೊತೆ ಸಿನಿಮಾ ಮಾಡಬೇಕಿತ್ತಂತೆ

ಪ್ರಭಾಸ್ ಜೊತೆ ಸಿನಿಮಾ ಮಾಡಬೇಕಿತ್ತಂತೆ

ಜೂನಿಯರ್ ಎನ್.ಟಿ.ಆರ್ ಅವರ ಸಹೋದರ ಕಲ್ಯಾಣ್ ರಾಮ್ ನಟನೆಯ ಆತನೊಕ್ಕಡೆ ಚಿತ್ರಕ್ಕೆ ಸುರೇಂದರ್ ರೆಡ್ಡಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಕೂಡ ಆಯ್ತು. ಈ ಸಿನಿಮಾ ಬಳಿಕ ಪ್ರಭಾಸ್ ಜೊತೆ ಸಿನಿಮಾ ಮಾಡಲು ಸುರೇಂದರ್ ರೆಡ್ಡಿ ಸಜ್ಜಾಗಿದ್ದರಂತೆ. ಆದರೆ, ಎನ್.ಟಿ.ಆರ್ ಮ್ಯಾನೇಜರ್ ಇದಕ್ಕೆ ಅಡ್ಡಗಾಲು ಹಾಕಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತಾರಕ್ ಜೊತೆ ಸಿನಿಮಾ ಮಾಡಲು ಒತ್ತಡ

ತಾರಕ್ ಜೊತೆ ಸಿನಿಮಾ ಮಾಡಲು ಒತ್ತಡ

''ಆತನೊಕ್ಕಡೆ' ಸಿನಿಮಾ ಬಳಿಕ ಎನ್.ಟಿ.ಆರ್ ಜೊತೆ ಸಿನಿಮಾ ಮಾಡಲು ಅವರ ಮ್ಯಾನೇಜರ್ ಒತ್ತಡ ಹೇರಿದರು. ಮೂರು ದಿನಗಳ ಕಾಲ ಮೆಂಟಲ್ ಟಾರ್ಚರ್ ಕೊಟ್ಟಿದ್ದರು. ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಕೂಡ ಮಾಡಿದರು. ಇದರಿಂದ ಪ್ರಭಾಸ್ ಸಿನಿಮಾ ಬಿಟ್ಟು ಎನ್.ಟಿ.ಆರ್ ಜೊತೆ ಅಶೋಕ ಸಿನಿಮಾ ಮಾಡಬೇಕಾಯಿತು'' ಎಂದು ಸುರೇಂದರ್ ರೆಡ್ಡಿ ಹೇಳಿಕೊಂಡಿದ್ದಾರೆ.

ಎರಡನೇ ಚಿತ್ರ ಯಾಕೆ ಮಾಡಿದ್ರಿ?

ಎರಡನೇ ಚಿತ್ರ ಯಾಕೆ ಮಾಡಿದ್ರಿ?

'ಎನ್.ಟಿ.ಆರ್ ಜೊತೆ ಸಿನಿಮಾ ಮಾಡಲು ಒಪ್ಪಿದೆ. ಸ್ಕ್ರಿಪ್ಟ್ ಇಷ್ಟ ಆಗಲಿಲ್ಲ. ಆದರೂ ಮಾಡಬೇಕಾಯಿತು' ಎಂದು ಸುರೇಂದರ್ ರೆಡ್ಡಿ ಹೇಳಿದ್ದಾರೆ ಎನ್ನಲಾಗಿದೆ. ಅಶೋಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತ್ತು. 'ಬ್ಲಾಕ್ ಮೇಲ್ ಮಾಡಿದ್ದಕ್ಕೆ ಎನ್.ಟಿ.ಆರ್ ಜೊತೆ ಸಿನಿಮಾ ಮಾಡಿದೆ ಎಂದಾದರೆ ಮತ್ತೆ ಅವರ ಜೊತೆ ಊಸರವಳ್ಳಿ ಸಿನಿಮಾ ಯಾಕೆ ಮಾಡಿದ್ರೀ?' ಎಂದು ಈಗ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಸುರೇಂದರ್ ರೆಡ್ಡಿ ಟ್ರೋಲ್

ಸುರೇಂದರ್ ರೆಡ್ಡಿ ಟ್ರೋಲ್

ಸುರೇಂದರ್ ರೆಡ್ಡಿ ಅದ್ಯಾವ ಅರ್ಥದಲ್ಲಿ ಇಂತಹದೊಂದು ಹೇಳಿಕೆ ನೀಡಿದರೋ ಗೊತ್ತಿಲ್ಲ. ಆದರೆ, ಜೂನಿಯರ್ ಎನ್.ಟಿ.ಆರ್ ಅಭಿಮಾನಿಗಳಂತೂ ಸೈರಾ ನರಸಿಂಹ ರೆಡ್ಡಿ ನಿರ್ದೇಶಕರನ್ನ ಟ್ರೋಲ್ ಮಾಡುತ್ತಿದ್ದಾರೆ. ಅವರ ನಿರ್ದೇಶನವನ್ನ ಕಾಲೆಳೆಯುತ್ತಿದ್ದಾರೆ.

More from Filmibeat

English summary
Sye raa narasimha reddy director Surender Reddy claims, Junior Ntr manager has emotionally blackmailed after 'athanokkade' movie success.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X