ಸ್ವರಾ ಭಾಸ್ಕರ್ ಸಾವಿನ ಬಗ್ಗೆ ಟ್ರೋಲ್: ನಟಿ ನೀಡಿದ ಉತ್ತರವೇನು?

ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಬಗ್ಗೆ ಸ್ವರಾ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಸ್ವರಾ ಈ ಬಗ್ಗೆ ಪೋಸ್ಟ್ ಹಾಕಿದ ಬೆನ್ನಲೆ, ಆಕೆಯ ಸ್ನೇಹಿತ ಬಳಗ, ಸಿನಿಮಾ ಮಂದಿ, ಪ್ರೀತಿ ಪಾತ್ರರು ಸ್ವರಾ ಅವರು ಬೇಗ ಗುಣಮುಖರಾಗಲಿ ಎಂದು ಆಶಿಸಿದ್ದಾರೆ. ಆದರೆ ಇದೇ ವಿಚಾರವನ್ನು ಕೆಲವರು ಟ್ರೋಲ್‌ ಮಾಡಲಾಗಿದೆ.

ಟ್ರೋಲ್‌ ಮಾಡಿದ ಹಲವರು ಸ್ವರಾ ಅವರು ಕೋವಿಡ್‌ಗೆ ತುತ್ತಾಗಿರುವುದೇ ಉತ್ತಮ ವಿಚಾರ ಎಂದಿದ್ದಾರೆ. ಇನ್ನು ಕೆಲವರು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ. ಹೀಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ, ಸ್ವರಾ ಭಾಸ್ಕರ್ ಅವರು ಇನ್ನಿಲ್ಲವಾಗಲಿ ಎಂದು ಆಶಯ ವ್ಯಕ್ತ ಪಡಿಸಿ ಪೋಸ್ಟ್‌ ಹಾಕಿಕೊಂಡಿದ್ದಾರೆ. ಅಂತಹ ಟ್ರೋಲಿಗರಿಗೆ ನಟಿ ಸ್ವರಾ ತಮ್ಮ ಟ್ವಿಟರ್ ಖಾತೆಯ ಮೂಲಕ ಖಡಕ್ ಉತ್ತರ ನೀಡಿದ್ದಾರೆ.

ಟ್ವಿಟರ್‌ನಲ್ಲಿ ಟ್ರೋಲ್‌ಗಳಿಗೆ ಉತ್ತರಿಸಿದ ನಟಿ ಹೀಗೆ ಬರೆದುಕೊಂಡಿದ್ದಾರೆ. "ದ್ವೇಷಿಗಳು ಮತ್ತು ನನ್ನ ನಿಧನಕ್ಕಾಗಿ ಪ್ರಾರ್ಥಿಸುವ ಟ್ರೋಲ್‌ಗಳು, ಸ್ನೇಹಿತರೇ ದಯವಿಟ್ಟು ನಿಮ್ಮ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ನನಗೆ ಏನಾದರೂ ಸಂಭವಿಸಿದರೆ, ನಿಮ್ಮ ಜೀವನ ಅಪಾಕ್ಕೆ ಸಿಲುಕುವುದು. ಆಗ ನಿಮ್ಮ ಮನೆಯನ್ನು ನೀವು ಹೇಗೆ ನಡೆಸುತ್ತೀರಿ? " ಎಂದು ಪೋಸ್ಟ್‌ನಲ್ಲಿ ಸ್ವರಾ ಪ್ರಶ್ನೆ ಮಾಡಿದ್ದಾರೆ.

Swara Bhasker Gives EPIC Reply To Trolls Wishing For Her Death After She Is Diagnosed With COVID-19

ಗುರುವಾರ ತಮಗೆ ಕೊರೊನಾ ಬಂದಿದ್ದರ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದರು ಸ್ವರಾ ಭಾಸ್ಕರ್. "ನಾನು ಐಸೋಲೇಷನ್‌ನಲ್ಲಿ ಇದ್ದೇನೆ, ಜ್ವರ, ತಲೆ ನೋವು, ಮತ್ತು ರುಚಿಯನ್ನು ಕಳೆದುಕೊಂಡಿದ್ದೇನೆ. ಡಬಲ್ ಡೋಸ್ ವ್ಯಾಕ್ಸಿನ್ ಆಗಿದೆ. ಹಾಗಾಗಿ ಇದು ಬೇಗನೆ ಕೊನೆಗೊಳ್ಳುತ್ತದೆ ಎಂದು ನಂಬಿದ್ದೇನೆ'' ಎಂದು ಬರೆದುಕೊಂಡಿದ್ದರು.

ಇನ್ನು ಈ ಹಿಂದೆಯೆ ಟ್ರೋಲ್ ಮತ್ತು ಕೆಟ್ಟ ಕಮೆಂಟ್‌ಗಳ ಬಗ್ಗೆ ಸ್ವರಾ ಭಾಸ್ಕರ್ ಮಾತನಾಡಿದ್ದರು. ಈ ರೀತಿಯ ಕಮೆಂಟ್‌ಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿತಿದ್ದೇನೆ. ಇಂತಹ ಟ್ರೋಲ್‌ಗಳನ್ನು ಕೇರ್‌ ಮಾಡುವುದಿಲ್ಲ ಎಂದಿದ್ದರು.

More from Filmibeat

English summary
Swara Bhasker Gives EPIC Reply To Trolls Wishing For Her Death After She Is Diagnosed With COVID-19, Know About What she Said,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X