ಬಲವಂತ ಮಾಡಿದ್ರೆ ಇಂಡಸ್ಟ್ರಿ ಬಿಟ್ಹೋಗಿ.. ಬೇರೆ ಕೆಲ್ಸ ಮಾಡಿ; ತಾಪ್ಸಿ ಆರೋಪಕ್ಕೆ ಜ್ಯೋತಿ ರೈ ತಿರುಗೇಟು

ಚಿತ್ರರಂಗದಲ್ಲಿ ಮಹಿಳೆಯ ಸ್ಥಿತಿಗತಿ ಬಗ್ಗೆ ಸಾಕಷ್ಟು ಜನ ದನಿ ಎತ್ತುತ್ತಾ ಬರ್ತಿದ್ದಾರೆ. ಕೆಲಸ ಮಾಡುವ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವ ಪ್ರಕರಣಗಳು ವರದಿ ಆಗುತ್ತಲೇ ಇರುತ್ತದೆ. ಅದರಲ್ಲೂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ರೀತಿಯ ಹೀನ ಸಂಸ್ಕೃತಿ ಇದೆ ಎನ್ನುವ ಆರೋಪ ಪದೇ ಪದೆ ಕೇಳಿಬರುತ್ತದೆ. ದಕ್ಷಿಣದ ಚಿತ್ರರಂಗದ ಬಗ್ಗೆ ಬಾಲಿವುಡ್ ನಟಿ ತಾಪ್ಸಿ ಪನ್ನು ಬೇಸರ ವ್ಯಕ್ತಪಡಿಸಿದ್ದರು. ಅದಕ್ಕೆ ನಟಿ ಜ್ಯೋತಿ ಪೂರ್ವಜ್ ತಿರುಗೇಟು ಕೊಟ್ಟಿದ್ದಾರೆ.

ದಕ್ಷಿಣದ ಸಿನಿಮಾಗಳಲ್ಲಿ ನಟಿಯರ ಹೊಕ್ಕುಳ ಮೇಲೆ ಫೋಕಸ್ ಜಾಸ್ತಿ ಮಾಡ್ತಾರೆ. ಅದು ಯಾಕೆ ಎನ್ನುವುದು ಗೊತ್ತಿಲ್ಲ. ಪ್ಯಾಡೆಡ್ ಬ್ರಾ* ಧರಿಸೋಕೆ ಹೇಳುತ್ತಾರೆ. ಹೇಳುವ ರೀತಿ ಮುಜಗರ ತರುತ್ತದೆ. ಸೆಟ್‌ನಲ್ಲಿ ಬಹುತೇಕ ಪುರುಷರು ಇರುತ್ತಾರೆ. ಎಲ್ಲರ ಮುಂದೆ ಅವರು ಹೇಳಿದಂತೆ ಕೇಳುವುದು ಕಷ್ಟವಾಗುತ್ತದೆ ಎಂದು ತಾಪ್ಸಿ ಪನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ತೆಲುಗು ಚಿತ್ರದಲ್ಲಿ ನಟಿಯರ ಹೊಕ್ಕುಳು ತೋರಿಸುವುದು, ಹೂವು, ಹಣ್ಣುಗಳಿಂದ ಹೊಕ್ಕುಳಿಗೆ ಹೊಡೆಯುತ್ತಾರೆ. ಅದರಿಂದ ಏನು ಸಂತೋಷ ಸಿಗುತ್ತೋ ಗೊತ್ತಿಲ್ಲ. ನನಗೆ ಒಂದು ಕಡೆ ನಗು ಬರ್ತಿತ್ತು. ನೋವು ಆಗ್ತಿತ್ತು ಎಂದು ಈ ಹಿಂದೆ ಮತ್ತೊಂದು ಸಂದರ್ಶನದಲ್ಲಿ ತಾಪ್ಸಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

Taapsee Pannu s Criticism of South Film Industry Draws Sharp Response from Jyothi Purvaj

ಕರ್ನಾಟಕದ ಮೂಲದ ನಟಿ ಜ್ಯೋತಿ ಪೂರ್ವಜ್ ಸದ್ಯ 'ಕಿಲ್ಲರ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ತಾಪ್ಸಿ ಪನ್ನು ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಜ್ಯೋತಿ ಪ್ರತಿಕ್ರಿಯಿಸಿದ್ದಾರೆ. "ನಿರ್ದೇಶಕರು ಹೇಳಿದಂತೆ ನಿಮ್ಮಿಂದ ಮಾಡೋಕೆ ಸಾಧ್ಯವಿಲ್ಲದಿದ್ದರೆ ಬಿಟ್ಟುಬಿಡಿ.. ಯಾರು ನಿಮ್ಮನ್ನು ತಡೆಯುವುದಿಲ್ಲ, ಸಾಯಿಸುವುದಿಲ್ಲ" ಎಂದು ಜ್ಯೋತಿ ಹೇಳಿದ್ದಾರೆ.

ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಕೂಡ ಭಾರೀ ಚರ್ಚೆ ನಡೀತು. ಅವಕಾಶ ಬೇಕು ಅಂದ್ರೆ, ಕಮೀಟ್‌ಮೆಂಟ್ ಕೇಳ್ತಾರೆ ಅಂತೆಲ್ಲಾ ಸುದ್ದಿ ಆಯ್ತು. ನಾನು 15 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೀನಿ. ಕನ್ನಡ, ತೆಲುಗಿನಲ್ಲಿ ನಟಿಸಿದ್ದೀನಿ. ನನಗೆ ಯಾವುದೇ ಕಹಿ ಘಟನೆ ಎದುರಾಗಿಲ್ಲ. ಕೆಲ ಸಣ್ಣಪುಟ್ಟ ವಿಚಾರಗಳಿಗೆ ಕಿರಿಕ್‌ಗಳಾಗಿದೆ. ಅದು ಬಿಟ್ಟು ವೈಯಕ್ತಿಕವಾಗಿ ಇಂತಹ ಯಾವುದೇ ಕಹಿ ಅನುಭವ ಆಗಲಿಲ್ಲ. ನನ್ನ ಅದೃಷ್ಟ ಅನ್ನಿಸುತ್ತದೆ. ಬಹುಶಃ ಬೇರೆಯವರಿಗೆ ಇಂತಹ ಸನ್ನಿವೇಶಗಳು ಎದುರಾಗಿರಬಹುದು. ಅದೆಲ್ಲವೂ ನಿಮ್ಮ ಆಯ್ಕೆ. ನಿಮಗೆ ಒಳ್ಳೆ ವಿದ್ಯಾಭ್ಯಾಸ ಇದ್ರೆ, ಇಂಡಸ್ಟ್ರಿ ಬಿಟ್ಹೋಗಿ ಬೇರೆ ಏನಾದರೂ ಕೆಲಸ ಮಾಡಿ ಎಂದು ಜ್ಯೋತಿ ಪೂರ್ವಜ್ ಹೇಳಿರುವುದು ವೈರಲ್ ಆಗ್ತಿದೆ.

ನಾನು ಹೆಚ್ಚು ಆಡಿಷನ್ ಕೊಡುವ ಸಂದರ್ಭ ಎದುರಾಗಲಿಲ್ಲ. ಒಂದ್ಕಾಲದಲ್ಲಿ ಧಾರಾವಾಹಿಗಳಿಗೆ ದಿನಕ್ಕೆ 3 ಕಾಲ್‌ಶೀಟ್ ಕೊಡುತ್ತಿದ್ದೆ. ಸಿನಿಮಾ ಅವಕಾಶ ಸಿಕ್ಕರೂ ಸಮಯ ಇಲ್ಲ ಎಂದು ನಟಿಸಲಿಲ್ಲ. ಎಲ್ಲವೂ ನನ್ನದೇ ಆಯ್ಕೆ. ನಾನು ಇಷ್ಟ ಪಟ್ಟು ಮಾಡಿದ್ದೀನಿ. ಮೀಟು ಸಮಯದಲ್ಲಿ ಕೆಲವರು ಆರೋಪಿಸಿದ್ದರು. ಆಗ ಎಲ್ಲರೂ ಮಾತನಾಡಿದ್ದರು. ಅಲ್ಲಿಗೆ ಬಿಟ್ಟುಬಿಡಬೇಕು. ಪದೇ ಪದೆ ಮಾತನಾಡಬೇಕು. "ನೀವು ಕೆಲಸ ಮಾಡಲು ಸಾಕಷ್ಟು ಆಯ್ಕೆಗಳಿವೆ. ನೀವು ಅಡುಗೆ ಮಾಡಬಹುದು, ಬ್ಯುಸಿನೆಸ್ ಮಾಡಬಹುದು, ಹೀಗೆ ಬಹಳ ಆಯ್ಕೆಗಳಿವೆ. ನೀವು ಮಾಡೋದೆಲ್ಲಾ ಮಾಡಿ ಬಳಿಕ ಕಮೆಂಟ್ ಮಾಡುತ್ತಾ ಕೂರುವುದು ಸರಿಯಲ್ಲ" ಎಂದು ಜ್ಯೋತಿ ಪೂರ್ವಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದ ಜ್ಯೋತಿ ರೈ ಬಳಿಕ ತೆಲುಗು ಕಿರುತೆರೆ ಪ್ರವೇಶಿಸಿದ್ದರು. ಕೆಲ ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ. ಸುಕು ಪೂರ್ವಜ್ ಎಂಬ ನಿರ್ದೇಶಕರನ್ನು ಜ್ಯೋತಿ 2ನೇ ಮದುವೆ ಆಗಿದ್ದಾರೆ. ಆ ಬಳಿಕ ಜ್ಯೋತಿ ಪೂರ್ವಜ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಬಹಳ ವರ್ಷಗಳ ಬಳಿಕ ಕನ್ನಡದ 'ಹಲ್ಕಾ ಡಾನ್' ಚಿತ್ರದಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ.

More from Filmibeat

Read more about: taapsee pannu actress tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X