For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಮಂತಾ: ಗೆಳತಿ ತಮನ್ನಾ ವಿಶ್ ಮಾಡಿದ್ದು ಹೀಗೆ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದಕ್ಷಿಣ ಭಾರತೀಯ ಸಿನಿ ಪ್ರಿಯರ ನೆಚ್ಚಿನ ನಟಿ ಸಮಂತಾ ಇಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  ಒಂದು ದಶಕಕ್ಕೂ ಹೆಚ್ಚು ಕಾಲ ತೆಲುಗು ಚಿತ್ರರಂಗವಾಳಿದ ನಟಿ ಸಮಂತಾ ತೆಲುಗು ಮಾತ್ರವಲ್ಲದೆ ತಮಿಳಿನಲ್ಲೂ ಖ್ಯಾತಿಗಳಿಸಿದ್ದಾರೆ. ತೆಲುಗು ಮತ್ತು ತಮಿಳಿನ ಸ್ಟಾರ್ ನಟರ ಜೊತೆ ಸಮಂತಾ ತೆರೆಹಂಚಿಕೊಂಡಿದ್ದಾರೆ. ಮದುವೆ ನಂತರವೂ ಬೇಡಿಕೆ ಉಳಿಸಿಕೊಂಡಿರುವ ಸಮಂತಾ ಸದ್ಯ ತಮಿಳು ಮತ್ತು ತೆಲುಗು ಎರಡು ಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ.

  ಮಹಿಳಾ ಆಟೋ ಡ್ರೈವರ್‌ಗೆ ಕಾರು ಉಡುಗೊರೆ ನೀಡಿದ ಸಮಂತಾಮಹಿಳಾ ಆಟೋ ಡ್ರೈವರ್‌ಗೆ ಕಾರು ಉಡುಗೊರೆ ನೀಡಿದ ಸಮಂತಾ

  ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಸ್ಯಾಮ್ ಆಗಾಗ ಒಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಮಂತಾಗೆ ಗೆಳತಿ ಖ್ಯಾತ ನಟಿ ತಮನ್ನಾ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

  ಸಮಂತಾ ಕಾಮನ್ ಡಿಪಿ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸಮಂತಾ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಬಿಡುಗಡೆ ಮಾಡಲು ತುಂಬಾ ಸಂತಸವಾಗುತ್ತೆ. ನೀನು ತುಂಬಾ ಸುಂದರವಾದ ವ್ಯಕ್ತಿ. ಹುಟ್ಟುಹಬ್ಬದ ಶುಭಾಷಯಗಳು ಸಮಂತಾ' ಎಂದು ಪ್ರೀತಿಯ ವಿಶ್ ಕಳುಹಿಸಿದ್ದಾರೆ.

  RCB ಬಗ್ಗೆ ಲೈವ್ ನಲ್ಲಿ ರಶ್ಮಿಕಾ ಹೇಳಿದ್ದೇನು | Filmibeat Kannada

  ಇನ್ನು ಮತ್ತೋರ್ವ ಖ್ಯಾತ ನಟಿ ಕೀರ್ತಿ ಸುರೇಶ್ ವಿಶ್ ಮಾಡಿ, 'ಮಿಸ್ ಗಾರ್ಜಿಯಸ್ ಸಮಂತಾ ಅವರ ಕಾಮನ್ ಡಿಪಿ ಬಿಡುಗಡೆ ಮಾಡಲು ತುಂಬಾ ಸಂತಸವಾಗುತ್ತೆ. ಹುಟ್ಟುಹಬ್ಬದ ಶುಭಾಶಯಗಳು ಸಮಂತಾ' ಎಂದು ವಿಶ್ ಮಾಡಿದ್ದಾರೆ.

  English summary
  Actress Samantha Akkineni celebrating her birthday today. Tamanna and Keerthy Suresh birthday wish to Samantha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X