ರೊಮ್ಯಾಂಟಿಕ್ ಸೀನ್‌ಗಳಲ್ಲಿ ನಟಿಸುವುದನ್ನು ನಟರು ಎಂಜಾಯ್ ಮಾಡ್ತಾರಾ? ಸ್ಟಾರ್ ನಟರ ನಿಜ ಬಣ್ಣ ಬಿಚ್ಚಿಟ್ಟ ತಮನ್ನಾ!

ಮಿಲ್ಕಿ ಬ್ಯೂಟಿ ತಮನ್ನಾ ಕನ್ನಡ ಸಿನಿಮಾಗಳಲ್ಲೂ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ರಂಗೇರಿಸಿದ್ದಾರೆ. ಮುಂಬೈನಲ್ಲಿ ಹುಟ್ಟಿಬೆಳೆದ ಚೆಲುವೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ತಮಿಳಿನ 'ಪಯ್ಯಾ' ಸಿನಿಮಾ ಸಕ್ಸಸ್ ನಂತರ ಮುಂಬೈ ಬೆಡಗಿಗೆ ಅವಕಾಶಗಳು ಅರಸಿ ಬಂತು. ನಂತರ ಬಾಲಿವುಡ್ ಮಂದಿ ಕರೆದು ಅವಕಾಶ ಕೊಟ್ಟರು.

ರೊಮ್ಯಾಂಟಿಕ್ ಸೀನ್‌ಗಳಲ್ಲಿ ನಟಿಸುವಾಗ ನಟ ನಟಿಯರು ಹೇಗೆ ಫೀಲ್ ಆಗುತ್ತಾರೆ? ಅದನ್ನು ಎಂಜಾಯ್ ಮಾಡುತ್ತಾರಾ? ಕಸಿವಿಸಿ ಎದುರಿಸುತ್ತಾರಾ? ಎನ್ನುವ ಪ್ರಶ್ನೆ ಸಹಜ. ಇದೇ ವಿಚಾರದ ಬಗ್ಗೆ ನಟಿ ತಮನ್ನಾ ಮಾತನಾಡಿದ್ದಾರೆ. ಸಾಮಾನ್ಯವಾಗಿ ರೊಮ್ಯಾಂಟಿಕ್, ಕಿಸ್ಸಿಂಗ್ ಸೀನ್, ಇಂಟಿಮೇಟ್ ಸೀನ್‌ಗಳಲ್ಲಿ ನಟಿಸುವುದು ನಟಿಯರಿಗೆ ಕಸಿವಿಸಿ ಎನಿಸುತ್ತದೆ. ನಟನೆ ಆದರೂ ಕೂಡ ಶೂಟಿಂಗ್ ವೇಳೆ ಹತ್ತಾರು ಜನರ ನಡುವೆ ಆ ರೀತಿ ಕಾಣಿಸಿಕೊಳ್ಳುವುದು ಕಷ್ಟ ಆಗುತ್ತದೆ ಎಂದು ಹೇಳುತ್ತಿರುತ್ತಾರೆ. ಕೆಲವೊಮ್ಮೆ ಸಾಕಷ್ಟು ಟೇಕ್‌ಗಳನ್ನು ಕೂಡ ತೆಗೆದುಕೊಳ್ಳಬೇಕಾಗಬಹುದು. ಹಾಗಾಗಿ ನಿಜಕ್ಕೂ ಅಷ್ಟು ಸುಲಭ ಅಲ್ಲ.

ನಟಿಯರು ಇಂತಹ ಸನ್ನಿವೇಶದಲ್ಲಿ ನಟಿಸುವಾಗ ಅವರ ಮನಸ್ಥಿತಿ ಹೇಗಿರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಜನ ಹೇಳಿದ್ದಾರೆ. ಆದರೆ ಅಂತಹ ಸಮಯದಲ್ಲಿ ನಟರ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ನಟಿ ತಮನ್ನಾ ಈಗ ರಿವೀಲ್ ಮಾಡಿದ್ದಾರೆ.

ನಟರು ರೊಮ್ಯಾಂಟಿಕ್ ಸೀನ್ ಇಷ್ಟಪಡಲ್ಲ

ನಟರು ರೊಮ್ಯಾಂಟಿಕ್ ಸೀನ್ ಇಷ್ಟಪಡಲ್ಲ

"ರೊಮ್ಯಾಂಟಿಕ್‌ ಸೀನ್‌ಗಳಲ್ಲಿ ನಟಿಸುವುದನ್ನು ನಟರು ಎಂಜಾಯ್ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅದು ನಿಜ ಅಲ್ಲ ಎಂದು ತಮನ್ನಾ ಶಾಕ್ ಕೊಟ್ಟಿದ್ದಾರೆ. ಬಾಲಿವುಡ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಿಲ್ಕಿ ಬ್ಯೂಟಿ "ಹೀರೊಯಿನ್ ಜೊತೆ ರೊಮ್ಯಾನ್ಸ್ ಮಾಡಲು ನಟರು ತುಂಬಾ ಕಸಿವಿಸಿ ಅನುಭವಿಸುತ್ತಾರೆ. ಸಾಮಾನ್ಯವಾಗಿ ಸಾಕಷ್ಟು ನಟರು ರೊಮ್ಯಾನ್ಸ್, ಇಂಟಿಮೇಟ್ ಸೀನ್‌ಗಳಲ್ಲಿ ನಟಿಸಲು ಇಷ್ಟಪಡುವುದೇ ಇಲ್ಲ" ಎಂದಿದ್ದಾರೆ

ನಟರಿಗೆ ಟೆನ್ಷನ್ ಶುರುವಾಗುತ್ತದೆ

ನಟರಿಗೆ ಟೆನ್ಷನ್ ಶುರುವಾಗುತ್ತದೆ

"ಇಂತಹ ಸನ್ನಿವೇಶ ಚಿತ್ರೀಕರಣದ ವೇಳೆ ನಟಿಯರು ಏನು ಅಂದುಕೊಳ್ಳುತ್ತಾರೋ ಎಂದು ನಟರು ಟೆನ್ಷನ್ ಮಾಡಿಕೊಳ್ಳುತ್ತಾರೆ. ಸ್ಟಾರ್‌ ನಟರು ಅಂತಹ ಸನ್ನಿವೇಶಗಳಲ್ಲಿ ಮಾತನಾಡಲು ಕೂಡ ಹಿಂಜರಿಯುತ್ತಾರೆ. ಇಡೀ ಸಿನಿಮಾ ಶೂಟಿಂಗ್‌ನಲ್ಲಿ ನಾಯಕ ನಟರು ಭಯಪಡುವುದು ಇಂತಹ ಸನ್ನಿವೇಶದಲ್ಲಿ ನಟಿಸುವುದಕ್ಕೆ ಮಾತ್ರ. ಕೆಲವರು ಇಂತಹ ಸನ್ನಿವೇಶಗಳೇ ಬೇಡ ಎನ್ನುತ್ತಾರೆ" ಎಂದು ತಮನ್ನಾ ವಿವರಿಸಿದ್ದಾರೆ.

ಈ ವರ್ಷ ಸ್ಪಲ್ಪ ಸಿಹಿ ಸ್ವಲ್ಪ ಕಹಿ

ಈ ವರ್ಷ ಸ್ಪಲ್ಪ ಸಿಹಿ ಸ್ವಲ್ಪ ಕಹಿ

2022ರಲ್ಲಿ ತಮನ್ನಾ ಬಾಟಿಯಾ ನಟನೆಯ 4 ಸಿನಿಮಾಗಳು ರಿಲೀಸ್ ಆಗಿತ್ತು. 'ಗನಿ' ಚಿತ್ರದಲ್ಲಿ ಸ್ಪೆಷಲ್ ನಂಬರ್‌ಗೆ ಡ್ಯಾನ್ಸ್ ಮಾಡಿದ್ದರು. F3 ಸಿನಿಮಾ ಕೊಂಚಮಟ್ಟಿಗೆ ಸಕ್ಸಸ್ ಆಯಿತು. 'ಬಬ್ಲಿ ಬೌನ್ಸರ್', 'ಪ್ಲ್ಯಾನ್ ಎ ಪ್ಲ್ಯಾನ್ ಬಿ' ಸಿನಿಮಾಗಳು ನೇರವಾಗಿ ಓಟಿಟಿಗೆ ಬಂದಿತ್ತು. ಆದರೆ ವರ್ಷದ ಕೊನೆಗೆ ಬಂದ 'ಗುರ್ತುಂದಾ ಶೀತಾಕಾಲಂ' ಸಿನಿಮಾ ಮಾತ್ರ ಅಟ್ಟರ್ ಫ್ಲಾಪ್ ಆಗಿತ್ತು. ಕನ್ನಡದಲ್ಲಿ ಹಿಟ್ ಆಗಿದ್ದ 'ಲವ್ ಮಾಕ್ಟೇಲ್' ಚಿತ್ರವನ್ನು ನಾಗಶೇಖರ್ ತೆಲುಗಿಗೆ ತೆಗೆದುಕೊಂಡು ಹೋಗಿದ್ದರು.

3 ಸಿನಿಮಾಗಳಲ್ಲಿ ತಮನ್ನಾ

3 ಸಿನಿಮಾಗಳಲ್ಲಿ ತಮನ್ನಾ

ಇತ್ತೀಚೆಗೆ ಮಿಲ್ಕಿ ಬ್ಯೂಟಿ ಕ್ರೇಜ್ ಕಮ್ಮಿ ಆಗಿದೆ. ಹೊಸ ನಟಿಯರ ದರ್ಬಾರ್ ನಡುವೆ ತಮನ್ನಾಗೆ ದೊಡ್ಡ ಸಿನಿಮಾಗಳು ಸಿಗುತ್ತಿಲ್ಲ. 'ಭೋಳಾ ಶಂಕರ್', 'ಬೊಲೆ ಚುಡಿಯಾ', 'ಬಂದ್ರಾ' ಸಿನಿಮಾಗಳು ಸದ್ಯ ಆಕೆಯ ಕೈಯಲ್ಲಿವೆ. ಕೆಲ ದಿನಗಳ ಹಿಂದೆ ಮಿಲ್ಕಿ ಬ್ಯೂಟಿ ಮದುವೆ ಬಗ್ಗೆ ಸಾಕಷ್ಟು ಗುಸುಗುಸು ಕೇಳಿಬಂದಿತ್ತು. ಕೊನೆಗೆ ಆಕೆಯೇ ಅದಕ್ಕೆ ತೆರೆ ಎಳೆದಿದ್ದರು. ಸದ್ಯಕ್ಕೆ ಮದುವೆ ಆಲೋಚನೆ ಇಲ್ಲ ಎಂದಿದ್ದರು. 2023ರಲ್ಲಿ ತಮನ್ನಾಗೆ ಸಕ್ಸಸ್ ಸಿಗುತ್ತಾ ಕಾದು ನೋಡಬೇಕು.

More from Filmibeat

English summary
Tamanna Bhatia interesting comments About Male Actors behaviour in romantic scene Shooting. Milky beauty is majorly known for her work in Telugu and Hindi film industries. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X