ತಮನ್ನಾ ಸ್ವಯಂವರದಲ್ಲಿ ಈ ಮೂವರು ಖ್ಯಾತ ನಟರು ಇರಬೇಕಂತೆ
ನಟಿ ಮಣಿಯರ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತದೆ. ಅಲ್ಲದೆ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಅವರು ಆಗಾಗ ಎದುರಿಸುತ್ತಿರುತ್ತಾರೆ. ಸೆಲೆಬ್ರೆಟಿ ಮದುವೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಜಾಸ್ತಿ ಇರುತ್ತೆ.
Recommended Video
ಸದ್ಯ ತೆಲುಗಿನ ಖ್ಯಾತ ನಟಿ ತಮನ್ನಾ ಭಾಟಿಯಾ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅಂದರೆ ತಮನ್ನಾ ಮದುವೆನಾ ಅಂತ ಅಚ್ಚರಿ ಪಡಬೇಡಿ. ಇತ್ತೀಚಿಗೆ ಮಿಲ್ಕಿ ಬ್ಯೂಟಿ ಸಂದರ್ಶನವೊಂದರಲ್ಲಿ ಸ್ವಯಂವರ ಬಗ್ಗೆ ಎದುರಾಗಿದ್ದ ಪ್ರಶ್ನೆಗೆ ಉತ್ತರಿಸಿದ್ದಾರೆ. ತಮನ್ನಾ ಸ್ವಯಂವರದಲ್ಲಿ ಯಾರೆಲ್ಲ ಇರಬೇಕು ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಸ್ವಯಂವರದಲ್ಲಿ ಈ ನಟರು ಇರಬೇಕಂತೆ
ತಮನ್ನಾ ಸ್ವಯಂವರದಲ್ಲಿ ಮೂರು ಖ್ಯಾತ ನಟರು ಇರಲೆ ಬೇಕಂತೆ. ಬಾಲಿವುಡ್ ನಟ ಹೃತಿಕ್ ರೋಷನ್, ವಿಕ್ಕಿ ಕೌಸಲ್ ಮತ್ತು ತೆಲುಗಿನ ಡಾರ್ಲಿಂಗ್ ಪ್ರಭಾಸ್ ಇರಬೇಕಂತೆ. ತಮನ್ನಾ ಈಗಾಗಲೆ ಪ್ರಭಾಸ್ ಜೊತೆ ಅಭಿನಯಿಸಿದ್ದಾರೆ. ಆದರೆ ಹೃತಿಕ್ ರೋಷನ್ ಮತ್ತು ವಿಕ್ಕಿ ಕೌಸಲ್ ಜೊತೆ ತೆರೆ ಹಂಚಿಕೊಂಡಿಲ್ಲ.

ಹೃತಿಕ್ ರೋಷನ್ ಅಭಿಮಾನಿ ತಮನ್ನಾ
ತಮನ್ನಾ ಭಾಟಿಯಾಗೆ ಹೃತಿ ರೋಷನ್ ಅಂದರೆ ಇಷ್ಟ. ಹೃತಿಕ್ ರೋಷನ್ ಅಭಿಮಾನಿ ಎನ್ನುವುದನ್ನು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಈ ಮೊದಲು ಹೃತಿಕ್ ರೋಷನ್ ಅವರನ್ನು ಭೇಟಿಯಾದ ಸಮಯದಲ್ಲಿ ನಿಮ್ಮ ದೊಡ್ಡ ಅಬಿಮಾನಿ ಎಂದು ತಮನ್ನಾ ಹೇಳಿದ್ದರು. ಅಲ್ಲದೆ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ಸ್ವಯಂವರ ವಿಚಾರದಲ್ಲೂ ಹೃತಿಕ್ ಅಭಿಮಾನಿ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಹೃತಿಕ್ ಜೊತೆ ಈ ದೃಶ್ಯ ಮಾಡಲು ಅಭ್ಯಂತರವಿಲ್ಲವಂತೆ
ತಮನ್ನಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಸಿನಿಮಾ ಒಪ್ಪಿಕೊಳ್ಳುವ ಮುಂಚೆಯೇ ತಮನ್ನಾ ಲಿಪ್ ಲಾಕ್ ದೃಶ್ಯಗಳನ್ನು ಮಾಡುವುದಿಲ್ಲ ಎಂದು ಅಗ್ರಿಮೆಂಟ್ ಗೆ ಸಹಿ ಹಾಕಿಯೇ ಸಿನಿಮಾ ಪ್ರಾರಂಭಿಸುತ್ತಾರೆ. ಆದರೆ ಹೃತಿಕ್ ರೋಷನ್ ಜೊತೆ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಯಾವುದೆ ಅಭ್ಯಂತರವಿಲ್ಲ ಎಂದು ಹೇಳಿದ್ದರು. ಹೃತಿಕ್ ಅವರನ್ನು ಅಷ್ಟು ಇಷ್ಟಪಡುತ್ತಾರೆ ತಮನ್ನಾ.

ಹೃತಿಕ್ ಜೊತೆ ಅಭಿನಯಿಸುವ ಆಸೆಯಲ್ಲಿ ತಮನ್ನಾ
ತಮನ್ನಾ ಭಾಟಿಯಾ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ. ತೆಲುಗು ಮತ್ತು ತಮಿಳಿನ ಟಾಪ್ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ತಮನ್ನಾಗೆ ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಹೃತಿಕ್ ರೋಷನ್ ಜೊತೆ ಅಭಿನಯಿಸುವ ಆಸೆ ಇದೆಯಂತೆ. ಯಾವಾಗ ಆ ಅವಕಾಶ ಒದಗಿ ಬರುತ್ತೆ ಎಂದು ತಮನ್ನಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











