For Quick Alerts
  ALLOW NOTIFICATIONS  
  For Daily Alerts

  ಮದುಮಗಳು ಕಾಜಲ್ ಗೆ ವಿಶ್ ಮಾಡಿದ ಆಪ್ತ ಸ್ನೇಹಿತೆ ತಮನ್ನಾ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಕಾಜಲ್ ಮದುವೆಗೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಮದುವೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಕಾಜಲ್ ಗೆ ಅಭಿಮಾನಿಗಳಿಂದ, ಸ್ನೇಹಿತರಿಂದ ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ.

  ಭಾವಿ ಪತಿ ಗೌತಮ್ ಜೊತೆ ಹೊಸ ಮನೆಗೆ ತೆರಳಲು ಸಿದ್ಧರಾದ ಕಾಜಲ್: ಫೋಟೋ ಹಂಚಿಕೊಂಡ ನಟಿಭಾವಿ ಪತಿ ಗೌತಮ್ ಜೊತೆ ಹೊಸ ಮನೆಗೆ ತೆರಳಲು ಸಿದ್ಧರಾದ ಕಾಜಲ್: ಫೋಟೋ ಹಂಚಿಕೊಂಡ ನಟಿ

  ಕಾಜಲ್ ಬೆಸ್ಟ್ ಫ್ರೆಂಡ್ ನಟಿ ತಮನ್ನಾ ಭಾಟಿಯಾ ಕಡೆಯಿಂದ ವಿಶೇಷವಾದ ವಿಶ್ ಸಿಕ್ಕಿದೆ. ವಿಡಿಯೋ ಮೂಲಕ ಮದುಮಗಳು ಕಾಜಲ್ ಗೆ ಮದುವೆಯ ಶುಭಾಶಯ ಕೋರಿದ್ದಾರೆ. ಅಂದ್ಹಾಗೆ ಇತ್ತೀಚಿಗೆ ತಮನ್ನಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಎಲ್ಲಾ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಆಗ ಅಭಿಮಾನಿಯೊಬ್ಬ ಕಾಜಲ್ ಜೊತೆಗಿನ ಸ್ನೇಹದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

  ಅಭಿಮಾನಿಯ ಪ್ರಶ್ನೆಗೆ ಉತ್ತರ ನೀಡಿದ ತಮನ್ನಾ, "ಕಾಜಲ್ ಮತ್ತು ನಾನು ಉತ್ತಮ ಸ್ನೇಹಿತರು. ನಾವು ಭೇಟಿಯಾದಾಗಲೆಲ್ಲಾ ದೀರ್ಘವಾದ ಸಂಭಾಷಣೆ ನಡೆಸುತ್ತೇವೆ. ಕಾಜಲ್ ಭೇಟಿ ಆಗುವುದು ಮತ್ತು ಅವಳ ಜೊತೆ ಇರುವುದು ನನಗೆ ತುಂಬಾ ಸಂತೋಷವಾಗುತ್ತೆ. ಅವಳ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ." ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

  ತಮನ್ನಾ ವಿಡಿಯೋ ವಿಶ್ ಗೆ ಕಾಜಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. 'ಓ ನನ್ನ ಟಮ್ಮಿ ನಿನ್ನ ಪ್ರೀತಿಯ ಶುಭಾಶಯಕ್ಕೆ ಧನ್ಯವಾದಗಳು. ಅತೀ ಶೀಘ್ರದಲ್ಲೇ ನಿನ್ನನ್ನು ಭೇಟಿಯಾಗುತ್ತೇನೆ' ಎಂದು ಹೇಳಿದ್ದಾರೆ.

  ಅಕ್ಟೋಬರ್ 30ರಂದು ಕಾಜಲ್, ಮುಂಬೈ ಮೂಲದ ಉದ್ಯಮಿ, ಬಹುಕಾಲದ ಗೆಳೆಯ ಗೌತಮ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ತೀರ ಖಾಸಗಿಯಾಗಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗುತ್ತಿದ್ದಾರೆ.

  ಸೇಲ್ಸ್ ಮೆನ್ ಆಗಿ ಜಂಟಲ್ ಮೆನ್ ಚಿತ್ರದಲ್ಲಿ ಪ್ರಜ್ವಲ್ ಮಿಂಚಿದ್ದು ಹೀಗೆ | Filmibeat Kannada

  ಕೊರೊನಾ ವೈರಸ್ ಹಾವಳಿಯ ಪರಿಣಾಮ ಕಾಜಲ್ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಮದುವೆ ಬಳಿಕ ಕಾಜಲ್ ಪತಿಯ ಜೊತೆ ಮುಂಬೈನಲ್ಲಿ ನೆಲೆಸಲಿದ್ದಾರೆ. ಅಲ್ಲದೆ ಮದುವೆ ಬಳಿಕವೂ ನಟನೆ ಮುಂದುವರೆಸುವುದಾಗಿ ಹೇಳಿದ್ದಾರೆ.

  English summary
  Actress Tamanna Bhatia wishes her best friend Kajal Aggarwal Happy married Life. Kajal sends weet message to Tamanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X