For Quick Alerts
  ALLOW NOTIFICATIONS  
  For Daily Alerts

  'ಆ ಒಬ್ಬ' ನಟನ ಜೊತೆ ಲಿಪ್ ಲಾಕ್ ಮಾಡಲು ತಮನ್ನಾ ರೆಡಿ!

  |

  ಪ್ರಭಾಸ್ ಜೊತೆ 'ಬಾಹುಬಲಿ' ಹಾಗೂ ಮೆಗಾಸ್ಟಾರ್ ಚಿರಂಜೀವಿ ಜೊತೆ 'ಸೈರಾ ನರಸಿಂಹ ರೆಡ್ಡಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.

  ರೋಮ್ಯಾನ್ಸ್, ಆಕ್ಷನ್, ಐತಿಹಾಸಿಕ, ಪೌರಾಣಿಕ, ಗ್ಲಾಮರ್ ಹೀಗೆ ಎಲ್ಲ ತರಹದ ಪಾತ್ರಗಳಲ್ಲೂ ಮಿಂಚುವ ತಮನ್ನಾ, ಲಿಪ್ ಲಾಕ್ ದೃಶ್ಯ ಮಾತ್ರ ಮಾಡಲ್ಲ.

  ಪ್ರತಿ ಸಿನಿಮಾಗೂ ಅಗ್ರಿಮೆಂಟ್ ಹಾಕುವ ವೇಳೆ ಈ ಅಂಶವನ್ನ ವಿಶೇಷವಾಗಿ ನಮೂದಿಸಿ ಸಹಿ ಮಾಡ್ತಾರಂತೆ. ಅಷ್ಟರ ಮಟ್ಟಿಗೆ ತಮನ್ನಾ ಲಿಪ್ ಲಾಕ್ ವಿಚಾರದಲ್ಲಿ ಕಟ್ಟುನಿಟ್ಟು.

  ಪ್ರತಿ ಅಗ್ರಿಮೆಂಟ್ನಲ್ಲೂ 'ಈ ದೃಶ್ಯ ಮಾಡಲ್ಲ' ಎಂದು ಸಹಿ ಮಾಡ್ತಾರಂತೆ ತಮನ್ನಾಪ್ರತಿ ಅಗ್ರಿಮೆಂಟ್ನಲ್ಲೂ 'ಈ ದೃಶ್ಯ ಮಾಡಲ್ಲ' ಎಂದು ಸಹಿ ಮಾಡ್ತಾರಂತೆ ತಮನ್ನಾ

  ಹಾಟ್ ಕಾಣಿಸಿಕೊಳ್ತೀನಿ, ರೋಮ್ಯಾನ್ಸ್ ಮಾಡ್ತೀನಿ, ಗ್ಲಾಮರ್ ಗೂ ಓಕೆ. ಆದರೆ, ಲಿಪ್ ಲಾಕ್ ಆಗಲ್ಲ ಎನ್ನುವ ತಮನ್ನಾ, ಹೃತಿಕ್ ರೋಷನ್ ಚಿತ್ರದಲ್ಲಿ ಅವಕಾಶ ಸಿಕ್ಕರೇ ಲಿಪ್ ಲಾಕ್ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

  ತೆಲುಗು, ತಮಿಳಿನಲ್ಲಿ ಹೆಚ್ಚು ಬ್ಯುಸಿ ಇರುವ ತಮನ್ನಾ, ನಾಲ್ಕೈದು ಹಿಂದಿ ಸಿನಿಮಾ ಮಾಡಿದ್ದಾರೆ. ಆದರೆ ಹೃತಿಕ್ ರೋಷನ್ ಜೊತೆ ಯಾವ ಚಿತ್ರವನ್ನು ಮಾಡಿಲ್ಲ. ಹೃತಿಕ್ ಸಿನಿಮಾದಲ್ಲಿ ನಟಿಸಲು ತಮನ್ನಾ ಕಾಯುತ್ತಿದ್ದಾರಂತೆ. ಒಂದು ವೇಳೆ ಅವಕಾಶ ಸಿಕ್ಕು, ಲಿಪ್ ಲಾಕ್ ಮಾಡುವ ದೃಶ್ಯವಿದ್ದರೂ ನಾನು ಮಾಡ್ತೀನಿ ಎಂದಿದ್ದಾರೆ.

  ಹೃತಿಕ್ ರೋಷನ್ ಸಿನಿಮಾಗೆ ತಮನ್ನಾ ಆಯ್ಕೆಯಾಗ್ತಾರಾ, ಆ ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಇರುತ್ತಾ? ಇದ್ದರೂ ಹೃತಿಕ್ ಒಪ್ಪಿಕೊಳ್ಳುತ್ತಾರಾ ಕಾದುನೋಡಬೇಕಿದೆ.

  English summary
  Tamanna bhatia ready to liplock with only bollywood super star hrithik roshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X