ಕೊರೊನಾ ಸೋಂಕಿನಿಂದ ಬದಲಾಗಿದ್ದ ತಮನ್ನಾ ಈಗ ಮತ್ತೆ ಸಹಜ ಸ್ಥಿತಿಗೆ

ಸೆಲೆಬ್ರಿಟಿಗಳು ಯಾವಾಗಲು ಫಿಟ್ನೆಸ್ ಮತ್ತು ಡಯಟ್ ಕಡೆ ಹೆಚ್ಚು ಗಮನ ಹರಿಸುತ್ತಿರುತ್ತಾರೆ. ಫಿಟ್ ಆಗಿರಲು ಸದಾ ಜಿಮ್ ನಲ್ಲಿ ಬೆವರು ಹರಿಸುತ್ತಿರುತ್ತಾರೆ. ದಕ್ಷಿಣ ಭಾರತ ಖ್ಯಾತ ನಟಿ ತಮನ್ನಾ ಸಹ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡುತ್ತಾರೆ.

ಆದರೆ ಇತ್ತೀಚಿಗೆ ತಮನ್ನಾ ಸ್ವಲ್ಪ ದಪ್ಪ ಆಗಿದ್ದರು. ಕೊರೊನಾ ಪಾಸಿಟಿವ್ ಬಂದ ಬಳಿಕ ತಮನ್ನಾ ತೂಕ ಜಾಸ್ತಿ ಆಗಿತ್ತು. ಸ್ವಲ್ಪ ದಪ್ಪ ಆದ ಕಾರಣಕ್ಕೆ ತಮನ್ನಾ ಟ್ರೋಲ್ ಗೆ ಗುರಿಯಾಗಿದ್ದರು. ಆದರೂ ಮಿಲ್ಕಿ ಬ್ಯೂಟಿ ಯಾವುದಕ್ಕೂ ತಲೆಕೆಡಿಸಿಕೊಂಡಿರಲ್ಲ.

ವಿಶ್ರಾಂತಿ ಬಳಿಕ ಮತ್ತೆ ವರ್ಕೌಟ್ ಮಾಡಲು ಪ್ರಾರಂಭಿಸಿದ ತಮನ್ನಾ ಇದೀಗ ಮತ್ತೆ ಬಳಕುವ ಬಳ್ಳಿಯಂತೆ ಆಗಿದ್ದಾರೆ. ಸುಮಾರು ಎರಡು ತಿಂಗಳ ಕಾಲ ಜಿಮ್ ನಲ್ಲಿ ಬೆವರಳಿಸಿರುವ ತಮನ್ನಾ ಮತ್ತೆ ಫಿಟ್ ಆಂಡ್ ಫೈನ್ ಆಗಿದ್ದಾರೆ. ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡು, ಮತ್ತೆ ನಾನು ಕೋವಿಡ್ ಮೊದಲ ದೇಹವನ್ನು ಪಡೆದಿದ್ದೀನಿ ಎಂದು ಬರೆದುಕೊಂಡಿದ್ದಾರೆ.

Tamanna shares her workout video and says Iam back to pre Covid body

ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮನ್ನಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದ ಬಳಿಕ ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಕೆಲವು ದಿನಗಳ ವಿಶ್ರಾಂತಿ ಬಳಿಕ ತಮನ್ನಾ ಮತ್ತೆ ವರ್ಕೌಟ್ ಪ್ರಾರಂಭ ಮಾಡಿದ್ದರು. ಇದೀಗ ಸಹಜ ಸ್ಥಿತಿಗೆ ಮರಳುವ ಮೂಲಕ ಹಳೆ ತಮನ್ನಾ ಆಗಿ ಎಂಟ್ರಿ ಕೊಟ್ಟಿದ್ದಾರೆ.

ತಮನ್ನಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕನ್ನಡದ ಲವ್ ಮಾಕ್ ಟೇಲ್ ರಿಮೇಕ್ ನಲ್ಲಿ ನಿರತರಾಗಿದ್ದಾರೆ. ಚಿತ್ರಕ್ಕೆ ಕನ್ನಡದ ನಿರ್ದೇಶಕ ನಾಗ ಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸೀಟಿಮಾರ್, ಅಂಧಾಧುನ್ ರಿಮೇಕ್ ಸೇರಿದಂತೆ ಇನ್ನು ಹಲವು ಸಿನಿಮಾಗಳಿವೆ.

Recommended Video

ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಇನ್ನಿಲ್ಲಾ | Filmibeat Kannada

More from Filmibeat

English summary
Actress Tamanna shares her workout video and says Iam back to pre Covid body.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X