ಮತ್ತೆ ಮಹೇಶ್ ಬಾಬುಗೆ ಜೋಡಿಯಾದ ತಮನ್ನಾ: ಆದರೆ ಸಿನಿಮಾಗಾಗಿ ಅಲ್ಲ

By ಫಿಲ್ಮ್ ಡೆಸ್ಕ್

ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಸದ್ಯ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಮಹೇಶ್ ಬಾಬು ಅವರ ಮತ್ತೊಂದು ಯೋಜನೆ ಸದ್ದು ಮಾಡುತ್ತಿದೆ.

ಮಹೇಶ್ ಬಾಬು ಮತ್ತೆ ತಮನ್ನಾ ಜೊತೆ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸಿನಿಮಾ ಅಲ್ಲ ಎನ್ನುವುದೇ ವಿಶೇಷ. ಹೌದು, ಮಹೇಶ್ ಬಾಬು ಮತ್ತು ತಮನ್ನಾ ಇಬ್ಬರು ವಿಶೇಷ ವಿಡಿಯೋದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಪ್ರೀತಿ ಮತ್ತು ಮದುವೆಯ ಬಗ್ಗೆ ಇರುವ ವಿಶೇಷ ವಿಡಿಯೋದಲ್ಲಿ ಇಬ್ಬರು ಕಾಣಿಸಿಕೊಳ್ಳುತ್ತಿದ್ದಾರಂತೆ.

ಈ ವಿಡಿಯೋವನ್ನು ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಶಿರೋಡ್ಕರ್ ಅವರ ನಿಜ ಜೀವನದ ಪ್ರೇಮಕತೆಯಿಂದ ಸ್ಫೂರ್ತಿ ಪಡೆದು ಚಿತ್ರೀಕರಿಸಲಾಗುತ್ತಿದೆ ಎನ್ನಲಾಗಿದೆ. ಇತ್ತೀಚಿಗಷ್ಟೆ ಈ ಜೋಡಿ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಟಾಲಿವುಡ್ ಸುಂದರ ಜೋಡಿಗಳಲ್ಲಿ ಮಹೇಶ್ ಬಾಬು ಜೋಡಿ ಕೂಡ ಒಂದು. ಇವರ ಪ್ರೇಮಕತೆ ಯಾವ ಸಿನಿಮಾಗೇನು ಕಮ್ಮಿ ಇಲ್ಲ.

Tamannaah and Mahesh Babu reunite for new project

ಇವರ ಪ್ರೇಮಕತೆಯಿಂದ ಸ್ಫೂರ್ತಿಯಾಗಿ ಒಂದು ವಿಶೇಷ ವಿಡಿಯೋ ಮಾಡಲಾಗುತ್ತಿದೆ. ಅಂದಹಾಗೆ ಈ ವಿಡಿಯೋ ಉದ್ದೇಶ ಏನು ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಇಂದು ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ. ಮುಂದಿನ ತಿಂಗಳು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.

ಮಹೇಶ್ ಮತ್ತು ತಮನ್ನಾ ಇಬ್ಬರು ಈ ಹೊಸ ಯೋಜನೆಯನ್ನು ತುಂಬಾ ಇಷ್ಟ ಪಟ್ಟಿದ್ದಾರಂತೆ. ಅಂದಹಾಗೆ ಮಹೇಶ್ ಬಾಬು ಮತ್ತು ತಮನ್ನಾ ಈ ಮೊದಲು ಅಗಡು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಮಿಂಚಿದ್ದರು. ಇದೀಗ ಮೂರನೇ ಬಾರಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರ.

ತಮನ್ನಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿಯ ಸೂಪರ್ ಹಿಟ್ ಅಂಧಾಧುನ್ ತೆಲುಗು ರಿಮೇಕ್ ಮತ್ತು ಕನ್ನಡ ಹಿಟ್ ಸಿನಿಮಾ ಲವ್ ಮಾಕ್ ಟೇಲ್ ರಿಮೇಕ್ ಸೇರಿದಂತೆ ಇನ್ನು ಎರಡು ಸಿನಿಮಾಗಳಲ್ಲಿ ತಮನ್ನಾ ನಟಿಸುತ್ತಿದ್ದಾರೆ.

More from Filmibeat

English summary
Actress Tamannaah and Mahesh Babu reunite for new project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X