ವರುಣ್ ತೇಜ್ ಜೊತೆ ಮಿಲ್ಕಿ ಬ್ಯೂಟಿ ತಮನ್ನಾ ಹೊಸ ಸಿನಿಮಾ

ಮಿಲ್ಕಿ ಬ್ಯೂಟಿ ತಮನ್ನಾ ಸದ್ಯ ಕನ್ನಡದ ಲವ್ ಮಾಕ್ ಟೇಲ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಕ್ಕೆ ಕನ್ನಡದ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದು, ಇತ್ತೀಚಿಗಷ್ಟೆ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಈ ಸಿನಿಮಾದ ಚಿತ್ರೀಕರಣ ಬೆನ್ನಲ್ಲೇ ನಟಿ ತಮನ್ನಾ ಮತ್ತೊಂದು ಸಿನಿಮಾದ ಮುಹೂರ್ತ ಮಾಡಿಕೊಂಡಿದ್ದಾರೆ. ಹೌದು, ತೆಲುಗು ನಟ ವರುಣ್ ತೇಜ್ ಮತ್ತು ವೆಂಕಟೇಶ್ ನಾಯಕನಾಗಿ ನಟಿಸುತ್ತಿರುವ F3 ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು (ಡಿ.17) ಚಿತ್ರದ ಮುಹೂರ್ತ ನೆರವೇರಿದ್ದು, ಪೂಜೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

F3 ಸಿನಿಮಾ ಕಳೆದ ವರ್ಷ ಜನವರಿಯಲ್ಲಿ ರಿಲೀಸ್ ಆಗಿದ್ದ, F2 ಸಿನಿಮಾದ ಸೀಕ್ವೆಲ್ ಆಗಿದೆ. ಅನಿಲ್ ರವಿಪುಡಿ ಸಾರಥ್ಯದಲ್ಲಿ ಮೂಡಿಬಂದಿದ್ದ ಕಾಮಿಡಿ ಎಂಟಟೈನರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದೀಗ ಈ ಸಿನಿಮಾದ ಸ್ವೀಕ್ವೆಲ್ ಗೆ ತಯಾರಿ ನಡೆಸಿದ್ದು, ಇಂದು ಮುಹೂರ್ತ ನೆರವೇರಿದೆ.

Tamannaah and Varun Tej starrer F3 movie officially launched on Thursday

F2 ಚಿತ್ರದಲ್ಲೂ ಸಹ ವರುಣ್ ತೇಜ್, ತಮನ್ನಾ, ವೆಂಕಟೇಶ್ ಮತ್ತು ಮೆಹ್ರೀನ್ ಪಿರ್ಜಾದ ನಟಿಸಿದ್ದರು. ಇದೀಗ ಇದೇ ತಂಡ F3 ಮೂಲಕ ಮತ್ತೆ ಬರ್ತಿದ್ದಾರೆ. ಕಳೆದ ವರ್ಷ ಸಿಕ್ಕಾಪಟ್ಟೆ ಸದ್ದು ಮಾಡಿದ್ದ F2 ಸಿನಿಮಾದ ಸೀಕ್ವೆಲ್ ಸಹ ಎಲ್ಲರ ಗಮನ ಸೆಳೆಯುತ್ತಾ ಎಂದು ಕಾದುನೋಡಬೇಕು.

ಅಂದಹಾಗೆ ಇಂದು ನಟ ವೆಂಕಟೇಶ್ ಹುಟ್ಟುಹಬ್ಬ. ಜನ್ಮದಿನದ ಪ್ರಯುಕ್ತ ಇಂದು ಸಿನಿಮಾಗೆ ಚಾಲನೆ ನೀಡಲಾಗಿದೆ. ಸದ್ಯ ಮುಹೂರ್ತ ಮಾಡಿಕೊಂಡಿರುವ ಸಿನಿಮಾತಂಡ ಚಿತ್ರೀಕರಣವನ್ನು ಡಿಸೆಂಬರ್ 23ರಿಂದ ಪ್ರಾರಂಭ ಮಾಡಲು ನಿರ್ಧರಿಸಿದೆ.

Recommended Video

Bagheera First Look | Srii Murali | Prashanth Neel | Dr Suri | Hombale Films |Filmibeat Kannada

More from Filmibeat

English summary
Tamannaah and Varun Tej starrer F3 movie officially launched on Thursday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X