For Quick Alerts
  ALLOW NOTIFICATIONS  
  For Daily Alerts

  ಈ ಒಂದು ಕಾರಣಕ್ಕಾಗಿ ಮತ್ತೆ ಒಂದಾದ ತಮನ್ನಾ ಮತ್ತು ವಿಜಯ್ ಸೇತುಪತಿ

  |

  ದಕ್ಷಿಣ ಭಾರತದ ಖ್ಯಾತ ಕಲಾವಿದರಾದ ನಟಿ ತಮನ್ನಾ ಮತ್ತು ವಿಜಯ್ ಸೇತುಪತಿ ಮತ್ತೆ ಒಟ್ಟಿಗೆ ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಬ್ಬರು 2016ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ 'ಧರ್ಮದುರೈ' ಸಿನಿಮಾ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಬಳಿಕ ಇದೀಗ ಮತ್ತೆ ಇಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

  ಅಂದಹಾಗೆ ವಿಜಯ್ ಸೇತುಪತಿ ಮತ್ತು ತಮನ್ನಾ ಮತ್ತೆ ಒಟ್ಟಿಗೆ ಶೂಟಿಂಗ್ ನಲ್ಲಿ ಭಾಗಿಯಾಗಿರುವುದು ಸಿನಿಮಾಗಾಗಿ ಅಲ್ಲ. ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಚಿತ್ರೀಕರಣಕ್ಕಾಗಿ. ಹೌದು, ಇಬ್ಬರೂ ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಅಡುಗೆ ಶೋ ಹೋಸ್ಟ್ ಮಾಡುತ್ತಿದ್ದಾರೆ.

  ಈಗಾಗಲೇ ಗೊತ್ತಿರುವ ಹಾಗೆ ಅಂತಾರಾಷ್ಟ್ರೀಯ ಖ್ಯಾತಿಯ ಅಡುಗೆ ಶೋ ಮಾಸ್ಟರ್ ಶೆಫ್ ತಮಿಳು ಮತ್ತು ತೆಲುಗಿನಲ್ಲಿ ಪ್ರಸಾರವಾಗುತ್ತಿದೆ. ತಮಿಳಿನಲ್ಲಿ ಮಾಸ್ಟರ್ ಶೆಫ್ ಶೋ ಅನ್ನು ವಿಜಯ್ ಸೇತುಪತಿ ನಡೆಸಿಕೊಡುತ್ತಿದ್ದಾರೆ. ತೆಲುಗಿನಲ್ಲಿ ತಮನ್ನಾ ಹೋಸ್ಟ್ ಮಾಡುತ್ತಿದ್ದಾರೆ.

  ಈಗಾಗಲೇ ವಿಜಯ್ ಸೇತುಪತಿ ಪ್ರೋಮೋ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ತಮನ್ನಾ ಶೋ ಹೋಸ್ಟ್ ಮಾಡುವ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೀಗ ವಿಜಯ್ ಸೇತುಪತಿ ಜೊತೆ ಫೋಟೋ ಶೇರ್ ಮಾಡುವ ಮಾಸ್ಟರ್ ಶೆಫ್ ಬಗ್ಗೆ ರಿವೀಲ್ ಮಾಡಿದ್ದಾರೆ.

  ಅಂದಹಾಗೆ ತಮನ್ನಾ ಮತ್ತು ವಿಜಯ್ ಸೇತುಪತಿ ಇಬ್ಬರು ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಮಯದಲ್ಲಿ ತಮನ್ನಾ, ವಿಜಯ್ ಸೇತುಪತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇಬ್ಬರ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ತಮನ್ನಾ ಕೆಂಪು ಬಣ್ಣದ ಗೌನ್ ಧರಿಸಿದ್ದು, ಸುಂದರವಾಗಿ ಕಾಣಿಸುತ್ತಿದ್ದಾರೆ. ವಿಜಯ್ ಸೇತುಪತಿ ಮಾಮುಲಿ ಡೆನಿಮ್, ಟೀ ಶರ್ಟ್ ಮತ್ತು ಜಾಕೆಟ್ ಧರಿಸಿದ್ದಾರೆ.

  ಮಾಸ್ಟರ್ ಶೆಫ್ ತೆಲುಗಿನಲ್ಲಿ ಜೆಮಿನಿ ಟಿವಿಯಲ್ಲಿ ಪ್ರಸಾರವಾದರೆ, ತಮಿಳಿನಲ್ಲಿ ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಶೀಘ್ರದಲ್ಲೇ ಈ ಶೋ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದೆ. ಮೊದಲ ಬಾರಿಗೆ ತಮನ್ನಾ ಕಿರುತೆರೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

  ಮುಂಬೈನಿಂದ ಅಭಿಮಾನಿಗೆ ಬುದ್ದಿ ಹೇಳಿದ ರಶ್ಮಿಕ! | Filmmibeat Kannada

  ಇನ್ನು ಇಬ್ಬರ ಸಿನಿಮಾ ವಿಚಾರಕ್ಕೆ ಬರುವುದಾದರೆ ತಮನ್ನಾ ಸದ್ಯ 'ಅಂಧಾಧುನ್' ತೆಲುಗು ರಿಮೇಕ್ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ಕನ್ನಡದ 'ಲವ್ ಮಾಕ್ಟೇಲ್' ರಿಮೇಕ್ ನಲ್ಲೂ ನಟಿಸುತ್ತಿದ್ದಾರೆ. ಇದಲ್ಲದೆ ಇನ್ನು ಎರಡು ಸಿನಿಮಾಗಳು ತಮನ್ನಾ ಬಳಿ ಇದೆ. ಇನ್ನು ವಿಜಯ್ ಸೇತುಪತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾದಲ್ಲೂ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ.

  English summary
  Actress Tamannaah and Vijay Sethupathi joins hands together for masterChef TV Show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X