ತೆಲುಗು ನಟಿ ತಮನ್ನಾ ಪೋಷಕರಿಗೆ ಕೊರೊನಾ ಪಾಸಿಟಿವ್

ಬಹುಭಾಷಾ ನಟಿ ತಮನ್ನಾ ಭಾಟಿಯಾ ಪೋಷಕರಿಗೆ ಕೊರೊನಾ ವೈರಸ್ ತಗುಲಿದೆ. ಈ ಕುರಿತು ಸ್ವತಃ ತಮನ್ನಾ ಮಾಹಿತಿ ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಪ್ರಕಟಣೆ ಬಿಡುಗಡೆ ಮಾಡಿರುವ ತಮನ್ನಾ ''ನನ್ನ ತಂದೆ ಮತ್ತು ತಾಯಿಗೆ ಕೊರೊನಾ ತಗುಲಿದೆ'' ಎಂದು ತಿಳಿಸಿದ್ದಾರೆ.

Recommended Video

Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

ಕಳೆದ ವಾರಾಂತ್ಯದಲ್ಲಿ ತಮನ್ನಾ ಪೋಷಕರಲ್ಲಿ ಕೊರೊನಾ ರೋಗ ಲಕ್ಷಣ ಕಂಡು ಬಂದಿದೆ. ಮುನ್ನೆಚ್ಚರಿಕೆಯಿಂದ ಪರೀಕ್ಷೆಗೆ ಒಳಪಟ್ಟಾಗ ಕೊರೊನಾ ತಗುಲಿರುವುದು ದೃಢವಾಗಿದೆ. ಈ ಬಗ್ಗೆ ತಮನ್ನಾ ನೀಡಿರುವ ವಿವರಣೆ ಹೀಗಿದೆ. ಮುಂದೆ ಓದಿ....

ಮಾರ್ಗಸೂಚಿ ಅನುಸರಿಸುತ್ತಿದ್ದೇವೆ

ಮಾರ್ಗಸೂಚಿ ಅನುಸರಿಸುತ್ತಿದ್ದೇವೆ

''ಸಂಬಂಧಿತ ಅಧಿಕಾರಿಗಳು ನಮ್ಮ ಪೋಷಕರ ಪರಿಸ್ಥಿತಿಯ ಬಗ್ಗೆ ಗಮನ ಹರಿಸಿದ್ದಾರೆ. ನಾವು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಹಾಗೂ ಮಾರ್ಗಸೂಚಿ ಅನುಸರಿಸುತ್ತಿದ್ದೇವೆ. ದೇವರ ಅನುಗ್ರಹದಿಂದ ಹಾಗೂ ಪ್ರಾರ್ಥನೆಯಿಂದ ಬೇಗ ಚೇತರಿಕೆ ಕಾಣುವಂತಾಗಲಿ' ಎಂದು ತಮನ್ನಾ ವಿನಂತಿಸಿದ್ದಾರೆ.

ನನಗೆ ಸೋಂಕು ಇಲ್ಲ

ನನಗೆ ಸೋಂಕು ಇಲ್ಲ

ಪೋಷಕರಿಗೆ ಸೋಂಕು ತಗುಲಿದ ಹಿನ್ನೆಲೆ ತಾನು ಸಹ ಪರೀಕ್ಷೆಗೆ ಒಳಪಟ್ಟಿದ್ದು, ಫಲಿತಾಂಶ ನೆಗಿಟಿವ್ ಬಂದಿದೆ ಎಂದು ತಮನ್ನಾ ತಿಳಿಸಿದ್ದಾರೆ. ತಮನ್ನಾಗೆ ನೆಗಿಟಿವ್ ಬಂದಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದು, ಮುಂಜಾಗ್ರತೆ ವಹಿಸಿ ಎಂದು ಸಲಹೆ ನೀಡಿದ್ದಾರೆ. ತಮನ್ನಾ ಪೋಷಕರು ಆದಷ್ಟೂ ಬೇಗ ಗುಣಮುಖರಾಗಲಿ ಎಂದು ನೆಟ್ಟಿಗರು ಪ್ರಾರ್ಥಿಸಿದ್ದಾರೆ.

ಸಮಂತಾ-ಕಾಜಲ್ ಪ್ರಾರ್ಥನೆ

ಸಮಂತಾ-ಕಾಜಲ್ ಪ್ರಾರ್ಥನೆ

ತಮನ್ನಾ ಪೋಷಕರಿಗೆ ಕೊವಿಡ್ ಸೋಂಕು ತಗುಲಿರುವ ಹಿನ್ನೆಲೆ ಟಾಲಿವುಡ್ ನಟಿಯರಾದ ಸಮಂತಾ ಅಕ್ಕಿನೇನಿ, ಕಾಜಲ್ ಅಗರ್‌ವಾಲ್, ಇಶಾ ಗುಪ್ತಾ ಸೇರಿದಂತೆ ಹಲವರು ಧೈರ್ಯ ತುಂಬಿದ್ದಾರೆ. ಪೋಷಕರು ಆದಷ್ಟೂ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಸೆಲೆಬ್ರಿಟಿಗಳಿಗೆ ಕೊರೊನಾ!

ಸೆಲೆಬ್ರಿಟಿಗಳಿಗೆ ಕೊರೊನಾ!

ಅಂದ್ಹಾಗೆ, ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಹಾಗೂ ಮಗಳು ಆರಾಧ್ಯ, ಗಾಯಕಿ ಕನಿಕಾ ಕಪೂರ್, ಎಸ್ ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ ಹಲವು ತಾರೆಯರಿಗೆ ಕೊವಿಡ್ ಪಾಸಿಟಿವ್ ಬಂದಿತ್ತು. ಇವರೆಲ್ಲರೂ ಚೇತರಿಸಿಕೊಂಡಿದ್ದಾರೆ.

More from Filmibeat

English summary
Telugu actress Tamannaah Bhatia confirms her parents tests positive for coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X