ನ್ಯೂಜೆರ್ಸಿಯಲ್ಲಿ ಇಂಡಿಯಾ ಡೇ ಪರೇಡ್‌ಗೆ ಚಾಲನೆ ನೀಡಿದ ತಮನ್ನಾ ಭಾಟಿಯಾ
ಜೈಲರ್ ಚಿತ್ರದ 'ಕಾವಾಲಾ' ಹಾಡಿನಿಂದ ಭರ್ಜರಿ ಯಶಸ್ಸು ಗಳಿಸಿರುವ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ನ್ಯೂ ಜೆರ್ಸಿಯಲ್ಲಿ 19 ನೇ ಇಂಡಿಯಾ ಡೇ ಪರೇಡ್‌ನ ಗ್ರ್ಯಾಂಡ್ ಮಾರ್ಷಲ್ ಆಗಿ ಇಂಡಿಯಾ ಡೇ ಪರೇಡ್‌ಗೆ ಚಾಲನೆ ನೀಡಿದ್ದಾರೆ. ದಕ್ಷಿಣ ಭಾರತದ ನಟಿ ತಮ್ಮ ವೆಬ್ ಸರಣಿ ಜೀ ಕರ್ದಾ ಮತ್ತು ಚಲನಚಿತ್ರ ಲಸ್ಟ್ ಸ್ಟೋರೀಸ್ 2 ರಿಂದ ಬಾಲಿವುಡ್‌ನಲ್ಲಿಯೂ ಯಶಸ್ಸು ಗಳಿಸಿದ್ದಾರೆ.
ಸದ್ಯ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ಕಾಣಿಸಿಕೊಂಡು ಮತ್ತಷ್ಟು ಪ್ರಸಿದ್ಧಿ ಪಡೆದಿದ್ದಾರೆ. ನಟ ಚಿರಂಜೀವಿ ಜೊತೆಗೆ ನಟಿಸಿದ್ದ ಭೋಲಾ ಶಂಕರ್ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿಲ್ಲ. ಆದರೆ, ಜೈಲರ್‌ನ ಕಾವಾಲಾ ಹಾಡು ಕಮಾಲ್ ಮಾಡಿದೆ.

ತಮನ್ನಾ ಭಾಟಿಯಾ ತನ್ನ ಸಕತ್ ಆನ್ ಸ್ಕ್ರೀನ್ ಪ್ರೆಸೆಂಟ್, ನಟನಾ ಕೌಶಲ್ಯ ಮತ್ತು ಅಭಿಮಾನಿಗಳ ಜೊತೆಗೆ ನಡೆದುಕೊಳ್ಳುವ ರೀತಿಗೆ ಭಾರಿ ಮೆಚ್ಚುಗೆ ಗಳಿಸಿದ್ದಾರೆ. ಹಲವು ಭಾಷೆಗಳಲ್ಲಿ ನಟಿಸುವ ಮೂಲಕ ನಟಿ ಪ್ರಪಂಚದಾದ್ಯಂತದ ಕೋಟ್ಯಾಂತರ ಪ್ರೇಕ್ಷಕರ ಹೃದಯಗಳನ್ನು ಗೆದ್ದಿದ್ದು, ಸಿನಿಪ್ರೇಮಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ನ್ಯೂ ಜರ್ಸಿ ಇಂಡಿಯಾ ಡೇ ಪರೇಡ್‌ನ ಗ್ರ್ಯಾಂಡ್ ಮಾರ್ಷಲ್ ಆಗಿ ಅವರನ್ನು ಆಯ್ಕೆ ಮಾಡಿರುವುದು ಅವರ ಉತ್ತಮ ವೃತ್ತಿಜೀವನವನ್ನು ಮಾತ್ರವಲ್ಲದೆ ಮನರಂಜನಾ ಉದ್ಯಮದಲ್ಲಿಯೂ ಅವರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಈ ಪರೇಡ್‌ನಲ್ಲಿ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು, ಸಂಗೀತ, ನೃತ್ಯ ಮತ್ತು ರಾಷ್ಟ್ರದ ಸಾಧನೆಗಳ ಅದ್ಭುತ ಪ್ರದರ್ಶನ ನೀಡಲಾಗುತ್ತದೆ.
ಇಂಡಿಯಾ ಡೇ ಪರೇಡ್‌ನ ನಾಯಕಿಯಾಗಿ ತಮನ್ನಾ ಭಾಟಿಯಾ ಅವರ ಪಾತ್ರವು ಭಾರತೀಯ - ಅಮೇರಿಕನ್ ಸಂಸ್ಕೃತಿಗಳ ನಡುವಿನ ಸೇತುವೆ ಮತ್ತು ಏಕತೆಯನ್ನು ಬೆಳೆಸುವ ಅವರ ಬದ್ಧತೆಯನ್ನು ಸೂಚಿಸುತ್ತದೆ. ಮೆರವಣಿಗೆಯಲ್ಲಿ ಅವರ ಪಾಲ್ಗೊಳ್ಳುವಿಕೆಯು ಕಾರ್ಯಕ್ರಮದ ಸಾಂಸ್ಕೃತಿಕ ಮಹತ್ವವನ್ನು ಹೆಚ್ಚಿಸಲು ಮತ್ತು ಇನ್ನಷ್ಟು ವೈವಿಧ್ಯ ಮತ್ತು ಉತ್ಸಾಹಭರಿತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಇನ್ನು, ತಮನ್ನಾ ಭಾಟಿಯಾ ಮತ್ತು ರಜನಿಕಾಂತ್ ಅಭಿನಯದ 'ಜೈಲರ್' ಹಾಡು 'ಕಾವಾಲಾ' ಇಂಟರ್‌ನೆಟ್‌ನಲ್ಲಿ ಮತ್ತಷ್ಟು ವೈರಲ್ ಆಗುತ್ತಲೇ ಇದೆ. ಹಾಡಿನಲ್ಲಿ ತಮನ್ನಾ ನೃತ್ಯ ನೋಡಲು ಎರಡು ಕಣ್ಣು ಸಾಲದು. ಹಾಡು ವೈರಲ್ ಆಗಿದ್ದು, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಹಿಟ್ ಹಾಡಿಗೆ ರೀಲ್ಸ್ ಮಾಡಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಹಾಡಿನ ಪ್ರಸಿದ್ಧಿ ಗಡಿಗಳನ್ನು ದಾಟಿದ್ದು, ಜಪಾನೀ ನೃತ್ಯಗಾರರು ಪ್ರಸಿದ್ಧ ಟೋಕಿಯೊ ನಿಲ್ದಾಣದ ಹೊರಗೆ ರಿಲ್ಸ್ ಮಾಡಿದ್ದಾರೆ.


Click it and Unblock the Notifications











