"ಕರಿಯರ್‌ನಲ್ಲಿ ಪ್ರಮೋಷನ್ ಬೇಕಂದ್ರೆ ವಿಶಾಲವಾಗಿ ಯೋಚಿಸ್ಬೇಕು": ಬೋಲ್ಡ್ ಸೀನ್ಸ್ ಬಗ್ಗೆ ತಮನ್ನಾ ಹಾಟ್ ಕಾಮೆಂಟ್

ಹೊಸಬರ ನಡುವೆ ನಟಿ ತಮನ್ನಾ ಕಳೆದು ಹೋಗ್ತಾರೆ ಎನ್ನುವ ಮಾತುಗಳು ಕೇಳಿಬರ್ತಿತ್ತು. ಇಂತಹ ಹೊತ್ತಲ್ಲೇ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡು ಮಿಲ್ಕಿಬ್ಯೂಟಿ ಎಲ್ಲರ ಹುಬ್ಬೇರಿಸಿದ್ದಾರೆ. ಸೌತ್ ಸಿನಿದುನಿಯಾದಲ್ಲಿ ಮತ್ತೆ ಮುಂಬೈ ಬೆಡಗಿ ಹವಾ ಶುರುವಾಗಿದೆ. ಮುಂದಿನ ವಾರ ಒಂದೇ ದಿನದ ಅಂತರದಲ್ಲಿ ತಮನ್ನಾ ಬಾಟಿಯಾ ನಟನೆಯ 2 ದೊಡ್ಡ ಸಿನಿಮಾಗಳು ರಿಲೀಸ್ ಆಗಲಿದೆ.

ಆಗಸ್ಟ್ 10ಕ್ಕೆ ತಮನ್ನಾ ನಟನೆಯ 'ಜೈಲರ್' ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆ ಮಿಲ್ಕಿ ಬ್ಯೂಟಿ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ 'ಕಾವಾಲ' ಸಾಂಗ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ನೆಲ್ಸನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಭಾರೀ ನಿರೀಕ್ಷೆ ಹುಟ್ಟಾಕ್ಕದೆ. ಇನ್ನು ಆಗಸ್ಟ್ 11ಕ್ಕೆ ತೆಲುಗಿನ 'ಭೋಳಾ ಶಂಕರ್' ಸಿನಿಮಾ ತೆರೆಗಪ್ಪಳಿಸಲಿದೆ. ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೋಡಿಯಾಗಿ ಬಿಂದಾಸ್ ಬೆಡಗಿ ಮೋಡಿ ಮಾಡಲು ಬರುತ್ತಿದ್ದಾರೆ. ಸದ್ಯ 2 ಸಿನಿಮಾ ಪ್ರಮೋಷನ್‌ನಲ್ಲಿ ತಮನ್ನಾ ಬ್ಯುಸಿಯಾಗಿದ್ದಾರೆ.

Tamannaah- Bhatia-on-bold-scenes

ಇತ್ತೀಚಿನ ದಿನಗಳಲ್ಲಿ ತಮನ್ನಾ ತೆರೆಮೇಲೆ ಸಿಕ್ಕಾಪಟ್ಟೆ ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ನೋ ಕಿಸ್ ರೂಲ್ ಬ್ರೇಕ್ ಮಾಡಿ ವಿಜಯ್ ವರ್ಮಾ ತುಟಿಗೆ ತುಟಿ ಬೆರೆಸಿದ್ದರು. ಇನ್ನು ವಿಜಯ್ ಜೊತೆ ಡೇಟಿಂಗ್ ಮಾಡುತ್ತಿರುವ ಸಂಗತಿ ಬಿಚ್ಚಿಟ್ಟಿದ್ದರು. ಇದ್ದಕ್ಕಿದಂತೆ ಈ ಬದಲಾವಣೆ ಯಾಕೆ? ಎನ್ನುವ ಪ್ರಶ್ನೆ ತಮನ್ನಾ ಉತ್ತರಿಸಿದ್ದಾರೆ.

ಹಾಟ್ ಆಗಿ ಕಾಣಿಸಿಕೊಂಡಿದ್ದೇಕೆ?

ತೆಲುಗು ಸಂದರ್ಶನವೊಂದರಲ್ಲಿ ತಮನ್ನಾ ಮಾತನಾಡಿ "ನಾವು ಬದಲಾಗದಿದ್ದರೆ ಎಲ್ಲಿ ಆರಂಭಿಸಿದ್ದೆವೋ ಅಲ್ಲೇ ನಿಂತುಬಿಟ್ಟಂತೆ. ಆ ರೀತಿ ನಿಂತು ಬಿಡಬೇಕು ಎಂದು ಯಾರು ಅಂದುಕೊಳ್ಳುವುದಿಲ್ಲ. ಎಲ್ಲರೂ ಕರಿಯರ್‌ನಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ಪ್ರತಿ ಕೆಲಸದಲ್ಲಿ ಪ್ರಮೋಷನ್ ಇದ್ದಂತೆ ನಮ್ಮ ಕೆಲಸದಲ್ಲೂ ಇದೆ. ಪ್ರಮೋಷನ್‌ಗಾಗಿ ಸ್ವಲ್ಪ ಬ್ರಾಡ್ ಆಗಿ ಆಲೋಚಿಸಬೇಕು. ಹೊಸ ಹೊಸ ಪ್ರಯತ್ನ ಮಾಡಬೇಕು. ಆಗ ಮಾತ್ರ ಜರ್ನಿ ಮತ್ತಷ್ಟು ಸುದೀರ್ಘವಾಗಿ ಚೆನ್ನಾಗಿ ಇರುತ್ತದೆ" ಎಂದು ತಮನ್ನಾ ಹೇಳಿದ್ದಾರೆ.

Tamannaah- Bhatia-on-bold-scenes

ತಮನ್ನಾ ಬೋಲ್ಡ್ ಸೀನ್ಸ್ ವೈರಲ್

ನಟಿ ತಮನ್ನಾ ಇತ್ತೀಚೆಗೆ 'ಜೀ ಕರ್ದಾ' ಹಾಗೂ 'ಲಸ್ಟ್ ಸ್ಟೋರಿಸ್-2' ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ. ಎರಡರಲ್ಲೂ ಸಿಕ್ಕಾಪಟ್ಟೆ ಹಾಟ್ ಆಗಿ ದರ್ಶನ ಕೊಟ್ಟಿದ್ದರು. ಆಕೆಯ ಅಭಿಮಾನಿಗಳಿಗೂ ಇದು ಬೇಸರ ತರಿಸಿತ್ತು. ಈ ರೀತಿ ಎಲ್ಲಾ ತೆರೆಮೇಲೆ ಕಾಣಿಸಿಕೊಳ್ಳಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. "ನಮ್ಮ ಸುತ್ತ ಜನ ಏನೇನೋ ಮಾತನಾಡುತ್ತಾರೆ. ಅದರಲ್ಲಿ ಯಾವುದು ಸರಿ? ಯಾವುದು ತಪ್ಪು? ಎಂದು ತಿಳಿದುಕೊಳ್ಳಬೇಕು. 'ಲಸ್ಟ್ ಸ್ಟೋರಿಸ್-2' ಬಗ್ಗೆ ಅಭಿಮಾನಿಗಳು ಹಾಗೂ ಕೆಲವರು ಬಹಳ ಚೆನ್ನಾಗಿದೆ ಎಂದರು. ಮುಖ್ಯವಾಗಿ ಮಹಿಳೆಯರು ಬಂದು ವೆಬ್‌ ಸೀರಿಸ್ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಷ್ಟು ಸಾಕು"

ಕನ್ನಡ ಸಿನಿಮಾಗಳಲ್ಲೂ ಮಿಂಚು

ಮಿಲ್ಕಿ ಬ್ಯೂಟಿ ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿಲ್ಲ. ಆದರೆ 2 ಸೂಪರ್ ಹಿಟ್ ಐಟಂ ಸಾಂಗ್ಸ್‌ನಲ್ಲಿ ಕುಣಿದು ರಂಗೇರಿಸಿದ್ದರು. 'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಜೊತೆ ಹೆಜ್ಜೆ ಹಾಕಿದ್ದರೆ 'KGF' ಚಿತ್ರದಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು' ಎಂದು ಕುಣಿದು ರಂಗೇರಿಸಿದ್ದರು. ಈ ಎರಡು ಹಾಡುಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಅಭಿಮಾನಿಗಳ ಮನಗೆದ್ದಿದ್ದರು.

ತಮನ್ನಾ ಫುಲ್ ಬ್ಯುಸಿ

ಸದ್ಯ ಒಂದೇ ವಾರ ಮಿಲ್ಕಿ ಬ್ಯೂಟಿಯ 2 ಸಿನಿಮಾಗಳು ರಿಲೀಸ್ ಆಗುತ್ತಿದೆ. ಇನ್ನು ತಮಿಳಿನ 'ಅರಣ್ಮನೆ'-4, ಮಲಯಾಳಂನ 'ಬಾಂದ್ರಾ', ಬಾಲಿವುಡ್‌ನ 'ವೇದಾ' ಸಿನಿಮಾಗಳಲ್ಲಿ ತಮನ್ನಾ ಬಣ್ಣ ಹಚ್ಚಿದ್ದಾರೆ. ಇನ್ನು ವಿಜಯ್ ದೇರವಕೊಂಡ ಜೊತೆ ಡೇಟಿಂಗ್ ನಡೆಸುತ್ತಿರುವ ಚೆಲುವೆ ಸದ್ಯಕ್ಕೆ ಮದುವೆ ಆಲೋಚನೆ ಇಲ್ಲ ಎಂದಿದ್ದಾರೆ. ಮದುವೆ ಫಿಕ್ಸ್ ಆದ್ರೆ ಹೇಳ್ತೀನಿ ಎಂದಿದ್ದಾರೆ.

More from Filmibeat

English summary
Tamannaah Bhatia reacts on Bold, intimate scenes in Recent web series. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X