"ಅವತ್ತು ಡಾಕ್ಟರ್.. ಈಗ ಉದ್ಯಮಿ.. ಮನೆಯಲ್ಲಿ ನನ್ನ ಮದುವೆಗಾಗಿ ವರಾನ್ವೇಷಣೆ ಶುರುವಾಗಿದೆ": ತಮನ್ನಾ

ತಮನ್ನಾ ನಟನೆಯ 'ಗುರ್ತುಂದಾ ಶೀತಾಕಾಲಂ' ಸಿನಿಮಾ ಈ ವಾರ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಮೋಷನ್ ಭಾಗವಾಗಿ ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಿಲ್ಕಿ ಬ್ಯೂಟಿ ಮಾತನಾಡಿದ್ದಾರೆ. ಮದುವೆ ರೂಮರ್ಸ್ ಕುರಿತು ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ನಟಿ ತಮನ್ನಾ ಶೀಘ್ರದಲ್ಲೇ ಹಸೆಮಣೆ ಏರುತ್ತಾರೆ. ಮುಂಬೈ ಮೂಲದ ಶ್ರೀಮಂತ ಉದ್ಯಮಿಯನ್ನು ಮದುವೆ ಆಗುತ್ತಾರೆ ಎಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವದಂತಿ ಹರಿದಾಡಿತ್ತು. ಇದೆಲ್ಲಾ ಸುಳ್ಳು ಎಂದು ಫನ್ನಿ ವಿಡಿಯೋ ಮೂಲಕ ಪರೋಕ್ಷವಾಗಿ ಮಿಲ್ಕಿಬ್ಯೂಟಿ ಪ್ರತಿಕ್ರಿಯಿಸಿದ್ದರು. ಇದೀಗ ಮತ್ತೊಮ್ಮೆ ತಮ್ಮ ಮದುವೆ ಹಾಗೂ ಸೋಶಿಯಲ್ ಮೀಡಿಯಾ ಟ್ರೋಲ್ಸ್ ಬಗ್ಗೆ ತಮನ್ನಾ ಮೌನ ಮುರಿದಿದ್ದಾರೆ. ಜೊತೆಗೆ ಕನ್ನಡದ 'ಲವ್‌ ಮಾಕ್ಟೇಲ್' ತೆಲುಗು ರೀಮೆಕ್‌ನಲ್ಲಿ ನಟಿಸಿರುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟು 17 ವರ್ಷ ಕಳೆದಿದೆ. ಆರಂಭದಲ್ಲಿ ಮುಂಬೈ ಬೆಡಗಿಗೆ ಅಷ್ಟಾಗಿ ಸಕ್ಸಸ್‌ ಸಿಗಲಿಲ್ಲ. ನಂತರ ನಿಧಾನವಾಗಿ ಗೆಲುವಿನ ನಗೆ ಬೀರಿದ ಚೆಲುವೆ ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಗೆದ್ದರು. ಮುಂದೆ ಬಾಲಿವುಡ್‌ನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು.

ಅವತ್ತು ಡಾಕ್ಟರ್.. ಈಗ ಉದ್ಯಮಿ

ಅವತ್ತು ಡಾಕ್ಟರ್.. ಈಗ ಉದ್ಯಮಿ

"ಮದುವೆ ವದಂತಿ ಯಾವಾಗಲೂ ಬರುತ್ತಲೇ ಇರುತ್ತದೆ. ಈಗಾಗಲೇ ಕೆಲವರು ನನ್ನ ಮದುವೆ ಮಾಡಿಬಿಟ್ಟಿದ್ದಾರೆ. ಈ ಹಿಂದೆ ಡಾಕ್ಟರ್ ಜೊತೆ ನನ್ನ ಮದುವೆ ಅಂದಿದ್ದರು. ಈಗ ಬ್ಯುಸಿನೆಸ್‌ಮ್ಯಾನ್ ಜೊತೆ ಎಂದು ಹೇಳುತ್ತಿದ್ದಾರೆ. ನಟಿಯರಾಗಿ ನಮ್ಮ ಬಗ್ಗೆ ಇಂತಹ ವದಂತಿಗಳು ಸರ್ವೇ ಸಾಮಾನ್ಯ. ಆದರೆ ಇದರಲ್ಲಿ ಸತ್ಯ ಇಲ್ಲ. ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ. ಇದೆಲ್ಲ ಬರೀ ವದಂತಿ ಅಷ್ಟೇ. ಒಂದು ವೇಳೆ ಮದುವೆ ಫಿಕ್ಸ್ ಆದರೆ ನಾನೇ ಹೇಳುತ್ತೇನೆ" ಎಂದು ತಮನ್ನಾ ಹೇಳಿದ್ದಾರೆ.

ವರಾಣ್ವೇಷಣೆ ಕೂಡ ನಡೀತಿದೆ

ವರಾಣ್ವೇಷಣೆ ಕೂಡ ನಡೀತಿದೆ

"ಮದುವೆಗೆ ಅವಸರ ಏನು ಇಲ್ಲ. ನಮ್ಮ ಪೋಷಕರು ಒತ್ತಡ ಹಾಕುತ್ತಿಲ್ಲ. ಆದರೆ ಸಹಜವಾಗಿ ಎಲ್ಲಾ ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಇರುವಂತೆ ನನ್ನ ಮದುವೆ ಬಗ್ಗೆಯೂ ಪೋಷಕರು ಮಾತನಾಡುತ್ತಿರುತ್ತಾರೆ. ವರಾಣ್ವೇಷಣೆ ಕೂಡ ನಡೆಯುತ್ತಲೇ ಇದೆ. ಆದರೆ ನಾನು ಯಾರನ್ನು ಒಪ್ಪುತ್ತಿಲ್ಲ. ಇಷ್ಟವಾದ ಹುಡುಗ ಸಿಕ್ಕಿದಾಗ ಮದುವೆ ಬಗ್ಗೆ ಯೋಚಿಸುತ್ತೇನೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನನ್ನ ಮದುವೆ ಬಗ್ಗೆ ಬರುವ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ."

ಮದುವೆ ಜೀವನದ ಪ್ರಮುಖ ಘಟ್ಟ

ಮದುವೆ ಜೀವನದ ಪ್ರಮುಖ ಘಟ್ಟ

"ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎನ್ನುವುದು ಬಹಳ ಮುಖ್ಯವಾದ ಘಟ್ಟ. ನನ್ನ ಜೀವನದಲ್ಲೂ ಅದು ಸುಂದರವಾದ ಭಾಗ. ಲವ್, ಮದುವೆ ಜೀವನದಲ್ಲಿ ಬಹಳ ಮುಖ್ಯವಾದದ್ದು. ಆದರೆ ಆ ವಿಷಯದಲ್ಲಿ ಅವಸರ ಪಡುತ್ತಿಲ್ಲ. ಇತ್ತೀಚೆಗೆ ಮದುವೆಯಾದ ಹನ್ಸಿಕಾ ವಿಷಯದಲ್ಲಿ ನಾನು ಬಹಳ ಸಂತೋಷದಿಂದ ಇದ್ದೇನೆ"

ಟ್ರೋಲ್ ನೋಡಿ ಎಂಜಾಯ್ ಮಾಡ್ತೀನಿ

ಟ್ರೋಲ್ ನೋಡಿ ಎಂಜಾಯ್ ಮಾಡ್ತೀನಿ

ಇನ್ನು ಇದೇ ವೇಳೆ ಸೋಶಿಯಲ್ ಮೀಡಿಯಾ ಟ್ರೋಲ್ಸ್, ಮೀಮ್ಸ್ ಬಗ್ಗೆಯೂ ತಮನ್ನಾ ಪ್ರತಿಕ್ರಿಯಿಸಿದ್ದಾರೆ. "ತನ್ನ ಮೇಲೆ ಬರುವ ವಿಮರ್ಶೆಗಳ ಬಗ್ಗೆ ನಾನು ಯೋಚಿಸುವುದಿಲ್ಲ. ನಾವು ಪಬ್ಲಿಕ್ ಫಿಗರ್ಸ್. ನಾವು ಎಲ್ಲರಿಗೂ ಇಷ್ಟವಾಗಬೇಕೆಂದು ಇಲ್ಲ. ಚಿತ್ರವಿಚಿತ್ರ ಕಾಮೆಂಟ್‌ಗಳು ಬರುತ್ತವೆ. ಅವುಗಳನ್ನು ಗಮನಿಸುವುದಿಲ್ಲ. ಆದರೂ ಅವುಗಳನ್ನು ನೋಡಿ ಎಂಜಾಯ್ ಮಾಡುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಅದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ" ಎಂದು ತಮನ್ನಾ ಹೇಳಿದ್ದಾರೆ.

More from Filmibeat

English summary
Tamannaah Bhatia reacts to Her Marriage rumors and social media trolls. Tamannaah Bhatia and Satyadev's romantic entertainer Gurthundu Seethakalam to release This Week. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X